‘ರಂಗಸುನೇರಿ’ ಮಲ್ಲಿಕಾರ್ಜುನ ಕಡಕೋಳ ಅವರ ಆಯ್ದ ಲೇಖನಗಳಾಗಿವೆ. ರಂಗ ಪ್ರತಿಭೆಗಳ ಪರಿಚಯ ಇಲ್ಲಿದೆ. ಝಗಮಗಿಸುವ ಕಣ್ಣು ಕೋರೈಸುವ ಬೆಳಕಿನಲ್ಲಿ ರಂಗಮಂದಿರಗಳಲ್ಲಿ ನಾಟಕಗಳಲ್ಲಿ ಅಭಿನಯಿಸುತ್ತ, ಪಾತ್ರಗಳಿಗೆ ಜೀವ ತುಂಬುತ್ತ, ಪ್ರೇಕ್ಷಕರಲ್ಲಿ ಅಳು, ನಗು, ಸಂತೋಷ, ಸಂಭ್ರಮಗಳ ಅಲೆಗಳನ್ನೇ ನಟರು ಎಬ್ಬಿಸುತ್ತಾರೆ ನಿಜ.
ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಬರಹಗಾರರಾದ ಮಲ್ಲಿಕಾರ್ಜುನ ಕಡಕೋಳ ಅವರು ಜನಿಸಿದ್ದು 1956 ಅಕ್ಟೋಬರ್ 2ರಂದು. ಹುಟ್ಟೂರು ಗುಲ್ಬರ್ಗ ಜಿಲ್ಲೆಯ ಕಡಕೋಳ. ತಂದೆ ಸಾಧು, ತಾಯಿ ನಿಂಗಮ್ಮ. ಹುಟ್ಟೂರು, ಯಡ್ರಾಮಿ ಹಾಗೂ ಗುಲ್ಬರ್ಗದಲ್ಲಿ ಶಿಕ್ಷಣ ಪಡೆದ ಇವರು ಆರೋಗ್ಯ ಇಲಾಖೆಯಲ್ಲಿ ಬೋದಕರಾಗಿ, ಹಿರಿಯ ಆರೋಗ್ಯ ಸಹಾಯಕರಾಗಿ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯ ಹಾಗೂ ರಂಗಭೂಮಿ ಕ್ಷೇತ್ರಕ್ಕೆ ಇವರು ನೀಡಿದ ಕೊಡುಗೆಯನ್ನು ಗುರುತಿಸಿ ಕರ್ನಾಟಕ ನಾಟಕ ಅಕಾಡೆಮಿ ರಾಜ್ಯ ಪ್ರಶಸ್ತಿ, ದಾವಣಗೆರೆ ಮಹಾನಗರಪಾಲಿಕೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕೈವಾರ ನಾರಾಯಣ ತಾತ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಕರ್ನಾಟಕ ನಾಟಕ ಅಕಾಡೆಮಿ ...
READ MOREಹೊಸತು-2004- ಸೆಪ್ಟಂಬರ್
ರಂಗ ಪ್ರತಿಭೆಗಳ ಪರಿಚಯ ಇಲ್ಲಿದೆ. ಝಗಮಗಿಸುವ ಕಣ್ಣು ಕೋರೈಸುವ ಬೆಳಕಿನಲ್ಲಿ ರಂಗಮಂದಿರಗಳಲ್ಲಿ ನಾಟಕಗಳಲ್ಲಿ ಅಭಿನಯಿಸುತ್ತ, ಪಾತ್ರಗಳಿಗೆ ಜೀವ ತುಂಬುತ್ತ, ಪ್ರೇಕ್ಷಕರಲ್ಲಿ ಅಳು, ನಗು, ಸಂತೋಷ, ಸಂಭ್ರಮಗಳ ಅಲೆಗಳನ್ನೇ ನಟರು ಎಬ್ಬಿಸುತ್ತಾರೆ ನಿಜ. ಆದರೆ ನಿಜ ಜೀವನದಲ್ಲಿ ಅವರೆಷ್ಟು ಸುಖಿಗಳೆಂಬುದನ್ನು ಈ ಲೇಖನಗಳು ತಿಳಿಸುತ್ತವೆ. ಸಿನಿಮಾ ಪೂರ್ವದ ರಂಗಭೂಮಿಯ ಪರಿಚಯವಿಲ್ಲದ ಇಂದಿನ ಯುವಜನತೆಗೆ ಮತ್ತು ರಂಗ ಕಲಾಸಕ್ತರಿಗೆ ಸಂದುಹೋದ ವೈಭವದ ಒಂದು ಪರಿಚಯ ಸಿಗುತ್ತದೆ. ಚಿತ್ರರಂಗಕ್ಕೆ ದಕ್ಕಿದ ಜನಪ್ರಿಯತೆ ಮತ್ತು ರಂಗವೇದಿಕೆ ದೃಶ್ಯಗಳಿಗಿರುವ ಪರಿಮಿತಿಗಳಿಂದಾಗಿ ಹಿಂದುಳಿಯುತ್ತಿರುವ ರಂಗ ಪ್ರಯೋಗಗಳ ಇಂದಿನ ದಿನಗಳಿಗೆ ಅವಶ್ಯವಾದ ಪುಸ್ತಕ.