ಈಸ್ಟ್ ಇಂಡಿಯಾ ಕಂಪನಿ ಬರ್ಮಾದ ರಾಜನನ್ನು ಸೆರೆ ಹಿಡಿದು ಭಾರತಕ್ಕೆ ತಂದ ಸಂದರ್ಭ, ಆಗಿನ ರಹಸ್ಯಗಳು, ನಿಧಿ ರಕ್ಷಣೆ ಹಾಗೂ ಸಾಗಣೆ, ರತ್ನಗಿರಿಗೂ ಬರ್ಮಾಕ್ಕೂ ಇರುವ ಸಂಬಂಧಗಳನ್ನು ಕಾಲ್ಪನಿಕ ಜಗತ್ತಿನೊಂದಿಗೆ ಕಟ್ಟಿಕೊಟ್ಟಿದ್ದಾರೆ ಕೆ.ಎನ್ ಗಣೇಶಯ್ಯ. ಬ್ರಿಟಿಷರ ಸಾಮಾನ್ಯ ಸೈನಿಕನೊಬ್ಬನ ದಿನಚರಿಯಿಂದ ಕಾದಂಬರಿ ಆರಂಭ ಪಡೆಯುತ್ತದೆ. ಬ್ರಿಟಿಷ್ ಪತ್ರಕರ್ತೆಯೊಬ್ಬಳು ಲೇಖನಕ್ಕಾಗಿ ಬಂದು ನಿಗೂಢ ರೀತಿಯಲ್ಲಿ ಸಾವನ್ನಪ್ಪುವುದು, ಆ ಸಾವಿನ ರಹಸ್ಯ ಭೇದಿಸಲು ಆರಂಭಿಸಿದಾಗ ಇತಿಹಾಸದ ಬಾಗಿಲೊಂದು ತೆರೆದುಕೊಳ್ಳುತ್ತದೆ. ನಂತರ ಬರ್ಮಾ, ಹಿಮಾಲಯದ ನಡುವೆ ಕೃತಿ ತೂಗುಯ್ಯಾಲೆಯಾಡುತ್ತದೆ.
ವೃತ್ತಿಯಿಂದ ಕೃಷಿ ವಿಜ್ಞಾನಿ ಆಗಿರುವ ಕೆ.ಎನ್. ಗಣೇಶಯ್ಯ ಅವರು ಮೂಲತಃ ಕೋಲಾರ ಜಿಲ್ಲೆಯವರು. ಕಳೆದ ೩೦ ವರ್ಷಗಳಿಂದ ತಳಿ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ಅವರು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು. ಪ್ರಾಣಿ ಮತ್ತು ಸಸ್ಯಗಳ ವರ್ತನೆಗೆ ಮೂಲಭೂತವಾದ ಜೀವವಿಕಾಸದ ತತ್ವಗಳನ್ನು ಅನ್ವೇಷಿಸುವುದು ಇವರ ಮತ್ತೊಂದು ಸಂಶೋಧನಾಸಕ್ತಿ. ಭಾರತದ ಪ್ರಮುಖ ಜೀವ ವೈವಿಧ್ಯ ತಾಣಗಳಲ್ಲಿನ ಸಸ್ಯಗಳ ಮತ್ತು ದೇಶದ ಜೀವ ಸಂಪತ್ತಿನ ಬಗ್ಗೆ ಇವರು ತಯಾರಿಸಿರುವ ಮಾಹಿತಿಯ ಖಜಾನೆಯ ಸಿ.ಡಿ.ಗಳು ಮತ್ತು ಅಂತರ್ಜಾಲ ಒಂದು ಅಪೂರ್ವ ಹೆಜ್ಜೆ. ಇನ್ನೂರಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧ ಬರೆದಿರುವ ಅವರು ಆರು ವೈಜ್ಞಾನಿಕ ಕೃತಿಗಳನ್ನು ...
READ MORE