About the Author

ವೃತ್ತಿಯಿಂದ ಕೃಷಿ ವಿಜ್ಞಾನಿ ಆಗಿರುವ ಕೆ.ಎನ್. ಗಣೇಶಯ್ಯ ಅವರು ಮೂಲತಃ ಕೋಲಾರ ಜಿಲ್ಲೆಯವರು. ಕಳೆದ ೩೦ ವರ್ಷಗಳಿಂದ ತಳಿ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ಅವರು  ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು. ಪ್ರಾಣಿ ಮತ್ತು ಸಸ್ಯಗಳ ವರ್ತನೆಗೆ ಮೂಲಭೂತವಾದ ಜೀವವಿಕಾಸದ ತತ್ವಗಳನ್ನು ಅನ್ವೇಷಿಸುವುದು ಇವರ ಮತ್ತೊಂದು ಸಂಶೋಧನಾಸಕ್ತಿ. ಭಾರತದ ಪ್ರಮುಖ ಜೀವ ವೈವಿಧ್ಯ ತಾಣಗಳಲ್ಲಿನ ಸಸ್ಯಗಳ ಮತ್ತು ದೇಶದ ಜೀವ ಸಂಪತ್ತಿನ ಬಗ್ಗೆ ಇವರು ತಯಾರಿಸಿರುವ ಮಾಹಿತಿಯ ಖಜಾನೆಯ ಸಿ.ಡಿ.ಗಳು ಮತ್ತು ಅಂತರ್ಜಾಲ ಒಂದು ಅಪೂರ್ವ ಹೆಜ್ಜೆ. ಇನ್ನೂರಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧ ಬರೆದಿರುವ ಅವರು ಆರು ವೈಜ್ಞಾನಿಕ ಕೃತಿಗಳನ್ನು ಪ್ರಕಟಿಸಿದ್ದಾರೆ.

’ಶಾಲಭಂಜಿಕೆ’ ಸಣ್ಣಕತೆ ಮೊದಲ ಸೃಜನಶೀಲ ಬರವಣಿಗೆ. ಅದೇ ಹೆಸರಿನ ಸಂಕಲನವೂ ಪ್ರಕಟವಾಗಿದೆ. ವಿವಿಧ ಪತ್ರಿಕೆಗಳಲ್ಲಿ ಹಲವಾರು ಕತೆಗಳು ಪ್ರಕಟವಾಗಿವೆ. ’ಕನಕ ಮುಸುಕು’, ’ಕರಿಸಿರಿಯಾನ’, ’ಕಪಿಲಿಪಿಸಾರ’, ’ಚಿತಾದಂತ’, ’ಏಳು ರೊಟ್ಟಿಗಳು’, ’ಮೂಕಧಾತು’, ’ಶಿಲಾಕುಲ ವಲಸೆ’ ಕಾದಂಬರಿಗಳು. ’ಶಾಲಭಂಜಿಕೆ’, ’ಪದ್ಮಪಾಣಿ’, ’ನೇಹಲ’, ’ಸಿಗೀರಿಯಾ’, ಮತ್ತು ’ಕಲ್ಪವಸಿ’ ಇವು ಅವರ ಕಥೆಗಳು.

ಕೆ.ಎನ್. ಗಣೇಶಯ್ಯ

BY THE AUTHOR