ಲೇಖಕ ಎಸ್. ಜಗನ್ನಾಥರಾವ್ ಬಹುಳೆ ಅವರು ಕನ್ನಡ ಚಲನಚಿತ್ರ ನಟ ಡಾ. ರಾಜಕುಮಾರ ಅವರನ್ನು ಸಂದರ್ಶಿಸಿ, ಪಡೆದ ಅವರ ವಿಚಾರಧಾರೆಗಳ ಸ್ವರೂಪವನ್ನು ಒಂದೆಡೆ ಕಟ್ಟಿಕೊಟ್ಟ ಅಮೂಲ್ಯ ಕೃತಿ ಇದು. ಯಾವುದೇ ‘ಇಸಂ’ಗಳಿಗೆ ವಾಲದ ಡಾ. ರಾಜ್ ಅವರು ಸರ್ವ ಧರ್ಮ ಸಮನ್ವಯದ ಮನೋಭಾವವನ್ನು ತಾಳಿದ್ದು ಅವರ ಪ್ರಮುಖ ವಿಚಾರಧಾರೆ ಹಾಗೂ ಬದುಕಿನ ಸಂದೇಶವೂ ‘ಜೀವನ ಸಾಮರಸ್ಯ’ವೇ ಆಗಿದೆ ಎಂಬುದನ್ನು ಈ ಕೃತಿ ಸಾಬೀತುಪಡಿಸುತ್ತದೆ. ಸಿನಿಮಾ, ಧರ್ಮ, ಸಮಾಜ ಇತ್ಯಾದಿ ವಿಷಯಗಳ ಮೇಲೆ ಡಾ. ರಾಜ್ ಅವರು ಸ್ಪಂದಿಸಿದ ಹಾಗೂ ಪ್ರತಿಕ್ರಿಯಿಸಿದ್ದನ್ನು ಲೇಖಕರು ಒಂದೆಡೆ ಕಟ್ಟಿಕೊಟ್ಟ ಮಹತ್ವದ ಕೃತಿ ಇದು.
ಜಗನ್ನಾಥರಾವ್ ಬಹುಳೆ ಅವರು ರಾಜ್ಕುಮಾರ್ರ ಆಪ್ತ. ಅಭಿಮಾನಿಗಳು ಹೌದು. ಕನ್ನಡಿಗರ ಕಣ್ಮಣಿ ರಾಜ್ಕುಮಾರ್ ಅವರ ಕುರಿತೇ 13ಕ್ಕೂ ಹೆಚ್ಚು ಕೃತಿಗಳನ್ನು ಹೊರತಂದಿದ್ದಾರೆ. ಇವರು ಹುಟ್ಟಿದ್ದು ಬೆಂಗಳೂರಿನ ಆನೇಕಲ್ನಲ್ಲಿ. ಸಿನಿಮಾ-ಸಾಹಿತ್ಯ-ಸಂಸ್ಕೃತಿ ಕುರಿತ ಅವರ ಬರಹಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ರಾಜಾಯಣ, ಬೆಳ್ಳಿತೆರೆಯ ಬಂಗಾರದ ಮಹಿಳೆ, ರಾಜ್ಕುಮಾರ್ ನಡೆದ ಹಾದಿಯಲ್ಲಿ, ರಾಜ್ಕುಮಾರ್ ವಿಚಾರಧಾರೆ, ರಾಜ್ ನೀತಿ, ಅಣ್ಣಾವ್ರ ಅಮರಗೀತೆಗಳು, ಕುಮಾರತ್ರಯರು, ಮುತ್ತುರಾಜರ ಮುತ್ತಿನ ಮಾತುಗಳು’ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ...
READ MORE