’ಲಕ್ಷ್ಮಣ ಬಯಲಾದ ! ಸೀತೆ ಬಯಲಾದಳು ! ರಾಮ ಜೀವನ ರಿಕ್ತವಾಗಿದೆ, ಶೂನ್ಯವಾಗಿದೆ-ಜನ ರಾಮನಾಮವನ್ನು ಪತಿತಪಾವನ ಮಂತ್ರವೆಂದು ಹೊಗಳಿ ಹಾಡಿ ಜಪಿಸುತ್ತಾರೆ. ರಾಮನಿಂದ ರಾಜ್ಯ ಶಾಂತಿ ಪಡೆಯಿತು. ಆದರೆ ರಾಮನಿಗೆ ಅಶಾಂತಿ ಪರ್ವ ಮುಗಿದಿಲ್ಲ. ನನ್ನನ್ನು ನಿತ್ಯವೂ ಸೀತೆಯ ಮರಣ, ಲಕ್ಷ್ಮಣನ ಸಾವುಗಳು ತಿವಿಯುತ್ತಿದ್ದವು, ಕರೆಯುತ್ತಿದ್ದವು. ಅವರ ಮರಣಕ್ಕೆ ಏನು ಕಾರಣ? ನನ್ನ ಜೀವನದಲ್ಲಿ ಕೌಟುಂಬಿಕ ಮಧುರ ಭಾವನೆಗಳ ಮೇಲೆ ರಾಜಕೀಯವು ನಡೆಸಿದ ದುರಾಕ್ರಮಣದ ಪರಿಣಾಮವಾಗಿಣ ಅವರು ಪ್ರಾಣ ನೀಗಿದರು! ಇದಕ್ಕಾಗಿ ನನ್ನ ಪೂರ್ಣಾಹುತಿ ಅಗತ್ಯವಿತ್ತು. ಆ ದಿನ ನಾನು ಡಂಗುರವನ್ನು ಸಾರಿಸಿ ಬಿಟ್ಟೆ-ಸರಯೂ ತೀರದಲ್ಲಿ ಅಯೋಧ್ಯೆಯೆ ಕಿಕ್ಕಿರಿದು ತುಂಬಿತ್ತು. ನಡೆದೆ, ಇನ್ನೂ ನಡೆದೆ - ಸೆಳವು ಜೋರಾಯಿತು. ನೀರು ಎದೆಯೆತ್ತರ, ಕಂಠದವರೆಗೆ, ಬಾಯಿ, ಮುಖ.... ಮುಂದೆ ಸಾಗಿದೆ, ಮುಂದೆ, ಮುಂದೆ...”
ಇವನು ಸತ್ಯಕಾಮರ ಶ್ರೀರಾಮ, ಲೋಕಾಪವಾದಕ್ಕೆ ಅಂಜುವ ರಾಜಾರಾಮ, ವೈಯಕ್ತಿಕ ಬದುಕಿನ ಶ್ರೀರಾಮ. ಎರಡರ ನಡುವಿನ ಅಲ್ಲೋಲಕಲ್ಲೋಲ ’ರಾಜಬಲಿ’.
’ಸತ್ಯಕಾಮ’ ಎಂಬುದು ಅನಂತ ಕೃಷ್ಣಾಚಾರ್ಯ ಶಹಾಪುರ ಅವರ ಕಾವ್ಯನಾಮ. ತಮ್ಮ ಕಾದಂಬರಿ ಹಾಗೂ ತಂತ್ರವಿದ್ಯೆ, ಕೃಷಿಯ ಮೂಲಕ ನಾಡಿನ ಮನೆ ಮಾತಾದವರು ’ಸತ್ಯಕಾಮ’. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಗಲಗಲಿಯಲ್ಲಿ 1920ರ ಮಾರ್ಚ್ 2ರಂದು ಜನಿಸಿದರು. (ಕೆಲವು ಕಡೆ ಏಪ್ರಿಲ್ 16 ಎಂದು ದಾಖಲಾಗಿದೆ.) ಆರಂಭಿಕ ಶಿಕ್ಷಣವನ್ನು ಗಲಗಲಿಯಲ್ಲಿ ಪಡೆದ ಅವರು ಮುಲ್ಕಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಶಾಲೆಯ ಗೊಡವೆಗೇ ಹೋಗದೆ ಒಂದು ವರ್ಷ ಗಲಗಲಿಯಲ್ಲಿಯೇ ಕಳೆದರು. 1935ರಲ್ಲಿ ಬಾಗಲಕೋಟೆಯ ಸಕ್ರಿ ಹೈಸ್ಕೂಲಿಗೆ ಸೇರಿದರಾದರೂ ಓದು ಮುಂದುವರಿಸಲಿಲ್ಲ. ಭಾರತದಲ್ಲಿ ಉಪ್ಪಿನ ಸತ್ಯಾಗ್ರಹ ನಡೆಯುತ್ತಿದ್ದ 1930-31ರಲ್ಲಿ ಬಾಲಕ ಅನಂತ ...
READ MORE