'ಕ್ಯೂರಿಯಸ್' ಎಲ್.ಪಿ.ಕುಲಕರ್ಣಿ ಅವರ ಲೇಖನಗಳ ಸಂಗ್ರಹವಾಗಿದೆ. ಬಾಹ್ಯಾಕಾಶದಲ್ಲಿ ಟ್ರಾಫಿಕ್ ಜಾಮ್ ಎಂದು ಮೇಲಾಗಸದಲ್ಲಿದ್ದವರು, ಕೂಡಲೇ ಪ್ಲಾಸ್ಟಿಕ್ ಸಮಸ್ಯೆ ಬಗೆ ಹರಿಸಬಲ್ಲ ನಮ್ಮ ಕಾಮಧೇನುವಿರುವ ನೆಲಕ್ಕೆ ಜಿಗಿಯುತ್ತಾರೆ. ಬೆವರಿನಿಂದ ವಿದ್ಯುತ್ತು, ನೀರಿನಿಂದ ಚಿನ್ನ ಮಾಡಬಹುದೇ ಎಂಬ ಪ್ರಶ್ನೆಯ ಹುಳ ಬಿಡುತ್ತ ಮತ್ತೆ ಅಕ್ಕಿಯ ಕಾಳಿನ ಗಾತ್ರದ ಕ್ಯಾಮೆರಾ ಹಿಡಿದು, ಎಲಿವೇಟರ್ ಬಳಸಿ ಚಂದ್ರನ ನೆಲಕ್ಕೂ ಓಡುತ್ತಾರೆ. ಅಲ್ಲಿಂದ ವಾಪಸ್ ಬರಲು ತೊಂದರೆಯಾದರೆ ಸ್ಪೈಡರ್ ಮ್ಯಾನ್ನ ಸ್ಪೈಡರ್ ಸಿಲ್ಕ್ ನ ಅಂಗಿ - ಪ್ಯಾಂಟು ತೊಟ್ಟು, ಬಾಹ್ಯಾಕಾಶದಲ್ಲಿನ ಟ್ರಾಫಿಕ್ ಜಾಮ್ ನಿವಾರಣೆಗೂ ಕೈ ಹಾಕುತ್ತಾರೆ. ಗೀಚಾದ ಮೊಬೈಲ್ ಫೋನಿನ ತೆರೆ ಸರಿಪಡಿಸುವ ವಸ್ತು ಇದೆ ಎನ್ನುತ್ತಾರೆ, ಮನುಷ್ಯನಿಗೆ ಹಂದಿಯ ಕಿಡ್ನಿ ಕಸಿ ಮಾಡಿಸಿ ಆಯುಷ್ಯ ಹೆಚ್ಚಿಸುವ ಭರವಸೆ ತುಂಬುತ್ತಾರೆ, ನಾಲ್ಕನೆಯ ಕೈಗಾರಿಕಾ ಕ್ರಾಂತಿಯ ಆಸರೆಯೆಂಬಂತಿರುವ ಕ್ಸೆನಾಬಾಟುಗಳ ಬಗ್ಗೆ ಮಾಹಿತಿ ನೀಡಿ ಮನುಷ್ಯನ ಆರೋಗ್ಯ ಸುಧಾರಣೆಗೆ ಅವುಗಳನ್ನು ಬಳಸಿಕೊಳ್ಳುವ ವಿಧಾನವನ್ನು ಪರಿಚಯಿಸುತ್ತಾರೆ. ಇಷ್ಟೆಲ್ಲ ವಿಷಯ ವ್ಯಾಪ್ತಿ ಇರುವ ಈ ಪುಸ್ತಕದ ಲೇಖನಗಳು ಓದುಗನಲ್ಲಿ ಕುತೂಹಲ ಹುಟ್ಟಿಸಿ, ಅದಕ್ಕೆ ಪರಿಹಾರವನ್ನೂ ಕೊಡುತ್ತವೆ .
ಎಲ್.ಪಿ.ಕುಲಕರ್ಣಿ. ಬಾಗಲಕೊಟೆ ಜಿಲ್ಲೆಯ ಹುನಗುಂದ ಇವರ ಹುಟ್ಟೂರು. ಖಾಯಂ ಆಗಿ ನೆಲೆಸಿದ್ದು ಬಾದಾಮಿಯಲ್ಲಿ. ಎಮ್.ಎಸ್.ಸಿ, ಬಿ.ಇಡಿ,(ಪಿ ಜಿ ಸಿ ಜೆ ಎಮ್ ಸಿ) ಪದವೀಧರರಾದ ಇವರು ಸರಕಾರಿ ಶಾಲೆಯಲ್ಲಿ ಗಣಿತ, ವಿಜ್ಞಾನ ಶಿಕ್ಷಕರಾಗಿ ಸೇವೆಸಲ್ಲಿಸುತ್ತಿದ್ದಾರೆ. ವಿಜ್ಞಾನ ಹಾಗೂ ಗಣಿತ ವಿಷಯಗಳ ಮೇಲಿನ ಆಸಕ್ತಿಯ ಕಾರಣ ನಾಡಿನ ಹಲವಾರು ಪತ್ರಿಕೆಗಳಲ್ಲಿ ಪ್ರಚಲಿತ ವಿಜ್ಞಾನ-ತಂತ್ರಜ್ಞಾನಕ್ಕೆ, ಗಣಿತಕ್ಕೆ ಸಂಬಂಧಿಸಿದ ಲೇಖನಗಳನ್ನು ಬರೆಯುತ್ತಿದ್ದಾರೆ. ವಿಶ್ವವಾಣಿ ಪತ್ರಿಕೆಯಲ್ಲಿ ' ಟೆಕ್ ಸೈನ್ಸ್ ', ' ಸವಿಸವಿ ನೆನಪು, ಸಾವಿರ ನೆನಪು ', 'ದಿನಕ್ಕೊಂದು ಪ್ರಶ್ನೆ'. ಸಂಯುಕ್ತ ಕರ್ನಾಟಕ ಪತ್ರಿಕೆಯ ಕಿಂದರಿ ಜೋಗಿ ಪುರವಣಿಯಲ್ಲಿ ' ...
READ MORE