ಪ್ರೇತಾತ್ಮದ ಮನೆಯಲ್ಲಿ

Author : ಪ್ರಕಾಶ್ ಎನ್. ಜಿಂಗಾಡೆ

Pages 102

₹ 130.00




Year of Publication: 2018
Published by: ಕಾವ್ಯ ಮಿತ್ರ ಪ್ರಕಾಶನ
Address: 31/482 ಸದಾನಂದ ಕಾಲೋನಿ ಬಸವಕಲ್ಯಾಣ, ಬೀದರ್, ಕರ್ನಾಟಕ- 585327
Phone: 9738482040

Synopsys

‘ಪ್ರೇತಾತ್ಮದ ಮನೆಯಲ್ಲಿ’ ಪ್ರಕಾಶ್ ಎನ್. ಜಿಂಗಾಡೆ ಅವರ ಕಾದಂಬರಿ. ಭಯದ ಅನುಭವ ಹಾಗೂ ಆನಂದವನ್ನು ಉಂಟು ಮಾಡುತ್ತದೆ. ’ರೋಲರ್ ಕೋಸ್ಟರ್’  ರೈಲು ಬಹು ಎತ್ತರದಲ್ಲಿ ಹಾರಾಡುವಾಗ ಭಯ ಉಂಟು ಮಾಡಿದರೂ ಆನಂದ ಅನುಭವಿಸುತ್ತೇವೆ. ಭರತಮುನಿಯ ನವರಸಗಳ ಪಟ್ಟಿಯಲ್ಲಿ ಭಯಾನಕವೂ ಒಂದು ಮುಖ್ಯ ರಸ. ಹಾರರ್ ಕತೆಗಳು ಕುತೂಹಲವನ್ನು ಹುಟ್ಟು ಹಾಕುತ್ತವೆ. ಭೂತ ಪ್ರೇತಗಳಂತಹ ಅಮಾನುಷ ವಿಷಯಗಳೇ ಕೃತಿಯ ವಸ್ತುವಾಗಿ ಮೈತಳೆದು ಕಥೆಯ ಸ್ವರೂಪ ಪಡೆದು ಬಿಡುತ್ತವೆ. ಎಲ್ಲೋ ಕಂಡು ಕೇಳದ ವಿಷಯಗಳಿಗೆ ಸಮಾಜದಲ್ಲಿ ನಡೆಯುವ ವಿಸ್ಮಯಗಳಿಗೆ ಮೈ ನವಿರೇಳಿಸುವ ಘಟನೆಗಳಿಗೆ ಲೇಖಕ ತನ್ನದೇ ಆದ ಕಲ್ಪನೆಗೆ ಚೌಕಟ್ಟನ್ನು ಒದಗಿಸುತ್ತಾನೆ. ಈ ನಿಟ್ಟಿನಲ್ಲಿ ಪ್ರಕಾಶ್ ಎನ್. ಜಿಂಗಾಡೆ ಅವರ ’ಪ್ರೇತಾತ್ಮದ ಮನೆಯಲ್ಲ’ ಕಾದಂಬರಿ, ಸಾಮಾಜಿಕ ಘಟನೆಗಳ ಪ್ರತಿಬಿಂಬ. ಕತೆಗೆ ಕಲ್ಪನೆಯ ಹೊದಿಕೆ ತೊಡಿಸಿ, ಅತಿಶಯೋಕ್ತಿಯ ಅಲಂಕಾರ ಮಾಡಿ, ಓದುಗನನ್ನು ಆಕರ್ಷಿಸುವ ಕೃತಿ ಇದಾಗಿದೆ.

 

About the Author

ಪ್ರಕಾಶ್ ಎನ್. ಜಿಂಗಾಡೆ

ಪ್ರಕಾಶ್ ಎನ್ ಜಿಂಗಾಡೆಯವರು ಮೂಲತಃ ದಾವಣಗೆರೆ ಜಿಲ್ಲೆಯ ಬಸವಾಪಟ್ಟಣ ಗ್ರಾಮದವರು. ಅಲ್ಲಿಯ ಚಿರಡೋಣಿ ಗ್ರಾಮದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪೂರೈಸಿದರು. ಬಸವಾಪಟ್ಟಣದಲ್ಲಿ ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣ ಮುಗಿಸಿದರು. ಕುವೆಂಪು ವಿಶ್ವಾವಿದ್ಯಾಲಯದಿಂದ ಪದವಿ ಶಿಕ್ಷಣದ ಜೊತೆಗೆ ಬಿ,ಇಡಿ ಪದವಿಯನ್ನೂ ಪಡೆದರು. ವೃತ್ತಿ ನಿಮಿತ್ತ ಬೆಂಗಳೂರಿಗೆ ಬಂದರು. ನಂತರ ಬೆಂಗಳೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು. ಪ್ರಸ್ತುತ ರಾಯನ್ ಇಂಟರ್ ನ್ಯಾಷನಲ್ ಸ್ಕೂಲ್ ಮತ್ತು ಕಾಲೇಜ್, ಯಲಹಂಕ, ಬೆಂಗಳೂರಿನಲ್ಲಿ ಉಪನ್ಯಾಸಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡದಲ್ಲಿ ಕತೆ, ಕವನ, ಕಾದಂಬರಿ, ಲಲಿತ ಪ್ರಭಂದ, ಇತ್ಯಾದಿ ಪ್ರಕಾರಗಳಲ್ಲಿ ಬರವಣಿಗೆ, ಪುಸ್ತಕ ಓದು, ಹಾಡು ಸಂಗೀತಗಳನ್ನು ...

READ MORE

Related Books