ಪ್ರಕಾಶ್ ಎನ್ ಜಿಂಗಾಡೆಯವರು ಮೂಲತಃ ದಾವಣಗೆರೆ ಜಿಲ್ಲೆಯ ಬಸವಾಪಟ್ಟಣ ಗ್ರಾಮದವರು. ಅಲ್ಲಿಯ ಚಿರಡೋಣಿ ಗ್ರಾಮದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪೂರೈಸಿದರು. ಬಸವಾಪಟ್ಟಣದಲ್ಲಿ ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣ ಮುಗಿಸಿದರು. ಕುವೆಂಪು ವಿಶ್ವಾವಿದ್ಯಾಲಯದಿಂದ ಪದವಿ ಶಿಕ್ಷಣದ ಜೊತೆಗೆ ಬಿ,ಇಡಿ ಪದವಿಯನ್ನೂ ಪಡೆದರು. ವೃತ್ತಿ ನಿಮಿತ್ತ ಬೆಂಗಳೂರಿಗೆ ಬಂದರು. ನಂತರ ಬೆಂಗಳೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು. ಪ್ರಸ್ತುತ ರಾಯನ್ ಇಂಟರ್ ನ್ಯಾಷನಲ್ ಸ್ಕೂಲ್ ಮತ್ತು ಕಾಲೇಜ್, ಯಲಹಂಕ, ಬೆಂಗಳೂರಿನಲ್ಲಿ ಉಪನ್ಯಾಸಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡದಲ್ಲಿ ಕತೆ, ಕವನ, ಕಾದಂಬರಿ, ಲಲಿತ ಪ್ರಭಂದ, ಇತ್ಯಾದಿ ಪ್ರಕಾರಗಳಲ್ಲಿ ಬರವಣಿಗೆ, ಪುಸ್ತಕ ಓದು, ಹಾಡು ಸಂಗೀತಗಳನ್ನು ಕೇಳುವುದು, ಉಪನ್ಯಾಸ ಇವರ ಹವ್ಯಾಸ.
ಶಿಕ್ಷಕರ ಜೊತೆಗೆ, ನಮ್ಮ ದಿನಾಚರಣೆಗಳು, ಕನ್ನಡ ಕಸ್ತೂರಿ 10ಮಾರ್ಗದರ್ಶಿ, ಇಬ್ಬನಿಯಲಿ ಅವಳ ಕಂಡಾಗ, ಪ್ರೇತಾತ್ಮದ ಮನೆಯಲ್ಲ, ಮನದಾಸೆ ಹಕ್ಕಿಯಾಗಿ, ಸುಭಾಷ್ ಮಾರ್ಗದರ್ಶಿ I PU study book, ಸುಭಾಷ್ ಮಾರ್ಗದರ್ಶಿ II PU study book, ಸಾಹಿತ್ಯ ಸಂಚಲನ ಐ,ಸಿ,ಎಸ್,ಇ ಮಾರ್ಗದರ್ಶಿ (2014), ಸುಭಾಶ್ ಗೈಡ್ II B. Com Bangalore university Guide, ಸುಭಾಶ್ ಗೈಡ್ III B. Com Bangalore university Guide, ಸುಭಾಶ್ ಗೈಡ್ I B.A Bangalore university Guide ವಿದ್ಯಾರ್ಥಿ ಗಳಿಗಾಗಿ ರಚಿತವಾದ ಆರು ಕೈಪಿಡಿಗಳು ಸೇರಿದಂತೆ ಬಿ,ಕಾಂ, ಮತ್ತು ಬಿ,ಎ, ವಿದ್ಯಾರ್ಥಿಗಳಿಗಾಗಿ ಹಲವು ಕೃತಿಗಳನ್ನ ರಚಿಸಿದ್ದಾರೆ. ಕನ್ನಡ ಪುಸ್ತಕ ಲೋಕದ ಸೇವೆಗಾಗಿ ‘ಕನ್ನಡ ಸಂಘಟನಾ ಶಿಕ್ಷಕ ಪ್ರಶಸ್ತಿ’ ‘ಕನ್ನಡ ರತ್ನ ಪ್ರಶಸ್ತಿ’ ‘ಉತ್ತಮ ಶಿಕ್ಷಕ ಪ್ರಶಸ್ತಿ, "ವಿಶ್ವಮಾನ್ಯ ಕನ್ನಡಿಗ" ಪ್ರಶಸ್ತಿ, ಕರುನಾಡ ಚೇತನ ಸಾಹಿತ್ಯ ಸನ್ಮಾನ ಸೇರಿದಂತೆ ಹಲವು ಗೌರವ, ಪ್ರಶಸ್ತಿಗಳು ಲಭಿಸಿವೆ.