‘ಪ್ರೀತಿ ಮತ್ತು ಪ್ರಾಯಶ್ಚಿತ’ ಕವಿ ರಾಜೇಂದ್ರ ಪ್ರಸಾದ್ ಅವರ ಕವನ ಸಂಕಲನ. ‘ಮನುಷ್ಯ ಪ್ರೀತಿಯ ಕವಲುಗಳು ಸಾವಿರ, ಅದು ಒಂದಕ್ಕೆ ಸೀಮಿತವಾಗಿಲ್ಲ. ಅಂತಹ ನೂರಾರು ಕವಲುಗಳು ಇಲ್ಲಿರುವ ನೂರಾರು ಕವಿತೆಗಳು’ ಎನ್ನುತ್ತಾರೆ ಕವಿ.
‘ಸೃಷ್ಟಿಯ ಜೊತೆಗೆ ಅಂತರ್ಗತವಾಗಿರುವ ಮನುಷ್ಯ ಪ್ರೀತಿಯು ಸನ್ನಿವೇಶಗಳ ಜೊತೆಗೆ ಹೆಣೆದುಕೊಳ್ಳುವ ಸಂಬಂಧಗಳು, ಅವುಗಳೊಂದಿಗಿನ ಒಡನಾಟ ಮತ್ತು ಬಿಡುಗಡೆಗಳ ಹಲವಾರು ಚಿತ್ರಗಳು ಕವಿತೆಗಳು ಇಲ್ಲಿವೆ. ಪ್ರೀತಿ ಎಂಬುದು ಇಲ್ಲಿ ಹೆಣ್ಣು-ಗಂಡಿನ ಪ್ರೇಮಕ್ಕೆ ಸೀಮಿತವಾಗಿಲ್ಲ. ಅದನ್ನು ಮೀರಿಕೊಂಡು ಕುಟುಂಬ, ಸಮಾಜ, ಗೆಳೆತನ, ಪರಿಸರ, ಪರಂಪರೆಯಾದಿಯಾಗಿ ಎಲ್ಲವುಗಳೊಂದಿಗೆ ಬೆಸುಗೆಗೊಳ್ಳುತ್ತಾ ಬೆಳಕಿನ ರೇಖೆಗಳಂತೆ ಮುನ್ನುಗ್ಗುತ್ತಿವೆ. ಅಲ್ಲಲ್ಲಿ ಅಪ್ರಾಪ್ತ ಮನಸಿನ ಹಳಹಳಿಕೆಗಳು, ಪ್ರಾಪ್ತನೊಬ್ಬನ ಕನಸುಗಳು ಕೂಡಾ ಇವೆ. ಹೀಗೆ ಕೊನೆಯೇ ಇರದ ಸಂಗಾತಗಳಲಿ ಕಂಡುಕೊಂಡ ಸಂತಸ ಮತ್ತು ಸಂಕಟಗಳೆರಡರ ಸಂಕಲನ ಈ ಕವಿತೆಗಳು ಎಂಬುದು ಕವಿಯ ಮಾತು.
ತುಮಕೂರು ಜಿಲ್ಲೆ ಹುಲಿಯೂರು ದುರ್ಗದ ಕೊಡವತ್ತಿಯಲ್ಲಿ ಜನಿಸಿದ ರಾಜೇಂದ್ರ ಪ್ರಸಾದ್ ಪ್ರಸ್ತುತ ಮಂಡ್ಯದಲ್ಲಿ ನೆಲೆಸಿದ್ದಾರೆ. 1987 ಮಾರ್ಚ್ 19ರಂದು ಜನನ. ಎಂ.ಕಾಂ.ಪದವೀಧರರಾದ ಅವರು ಸ್ವಂತ ಉದ್ದಿಮೆಯೊಂದನ್ನು ನಡೆಸುತ್ತಿದ್ದಾರೆ. ಕಾವ್ಯ, ತತ್ವಶಾಸ್ತ್ರ, ಕರ್ನಾಟಕ ಸಂಗೀತ, ಝೆನ್ ಪೇಟಿಂಗ್, ಬೌದ್ಧಮತ ಅಧ್ಯಯನ, ಪಾಕಶಾಸ್ತ್ರದಲ್ಲಿ ಅಪಾರ ಆಸಕ್ತಿ ಹೊಂದಿರುವ ಅವರು ಕಾವ್ಯದ ಬಗ್ಗೆ ವಿಶೇಷ ಪ್ರೀತಿಯುಳ್ಳವರು. ಭೂಮಿಗಂಧ - 2006, ಚಂದ್ರನೀರ ಹೂವು – 2013, ಒಂದಿಷ್ಟು ಪ್ರೀತಿಗೆ, ಕವಿತೆಗಳು – 2013, ಕೋವಿ ಮತ್ತು ಕೊಳಲು - 2014, ಲಾವೋನ ಕನಸು - 2016, ಬ್ರೆಕ್ಟ್ ಪರಿಣಾಮ - 2018, ನೀರೊಳಗೆ ಮಾಯದ ಜೋಳಿಗೆ - 2018 ಅವರ ಕವನ ಸಂಕಲನಗಳು. 'ಸಂಕಥನ' ಸಾಹಿತ್ಯ ಪತ್ರಿಕೆಯ ಸಂಪಾದಕರು ಮತ್ತು ಪ್ರಕಾಶರು ಆಗಿದ್ದಾರೆ. ಅವರ ...
READ MORE