ಪ್ರೀತಿಗಾಗಿ ಕೆ.ಗೀರೀಶ್ ಅವರ ಸಂಪಾದಕತ್ವದಲ್ಲಿ ಬಂದಿರುವ ಕೃತಿಯಾಗಿದೆ. ಪ್ರೀತಿಯ ಬಗ್ಗೆ ಹೀಗೇ ಎಂದು ವ್ಯಾಖ್ಯಾನಿಸುವುದು ಕಷ್ಟ. ಇದರಾಚೆಗೂ ಪ್ರೀತಿಯ ಬಗ್ಗೆ ಅದೆಷ್ಟೋ ವ್ಯಾಖ್ಯಾನಗಳು ಇವೆಯೆಂಬುದೂ ನಿಜ. ಹೊಸ ಕಾಲದಲ್ಲಿ ಹೊಸ ಮನಸ್ಸುಗಳಲ್ಲಿ ಪ್ರೀತಿ ಹೇಗೆಲ್ಲಾ ಚಲಿಸುತ್ತಿರುತ್ತದೆ ಎಂಬುದರ ಬಗೆಗಿನ ಕುತೂಹಲ ತಣಿಯುವುದಿಲ್ಲ, ಬದಲಿಗೆ ಬೆಳೆಯುತ್ತಲೇ ಇರುವಂಥದ್ದು. ಅಂಥ ಕುತೂಹಲದಲ್ಲಿ ಹಲವು ಸ್ನೇಹಿತರ ಅಂತರಂಗದಲ್ಲಿ ಪ್ರೀತಿಯ ಬಗ್ಗೆ ಎಂಥ ಭಾವನೆಗಳಿವೆ ಎಂಬುದನ್ನು ಹೊರಗೆಳೆಯುವ ಪ್ರಯತ್ನವಾಗಿ ಮೂಡಿರುವ ಕೃತಿ ಇದು. ಪ್ರೇಮದ ಬಗೆಗೆ ಅದರ ಅನುಭವದಿಂದ ವ್ಯಕ್ತವಾಗಿರುವ ಬರಹಗಳು ಈ ಕೃತಿಯಲ್ಲಿವೆ.
ಗಿರೀಶ್ ಕೋಟೆ 18 ವರ್ಷ ಪತ್ರಕರ್ತನಾಗಿ ನಮ್ಮ ನಾಡು, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳಲ್ಲಿ ಮುಖ್ಯ ವರದಿಗಾರನಾಗಿ ಕೆಲಸ ಮಾಡಿದ್ದ ಅನುಭವ ಹೊಂದಿದ್ದಾರೆ. ಇವರ ಸ್ವತಂತ್ರ ಕೃತಿಗಳು : ಅಮೆರಿಕ ಅಂತರಂಗ ಸಂಪಾದಿತ ಕೃತಿಗಳು: ಪ್ರೀತಿಗಾಗಿ, ಸಮರ ಸೇನಾನಿ ...
READ MORE