‘ಪ್ರಯೋಗ ಪ್ರಸಂಗ’ ಗಣೇಶ ಅಮೀನಗಡ ಅವರ ಲೇಖನಗಳಾಗಿವೆ. ಇಂದಿನ ವೃತ್ತಿ ಮತ್ತು ಹವ್ಯಾಸಿ ರಂಗಭೂಮಿಯ ರಂಗಪ್ರಯೋಗಗಳ ಬಗ್ಗೆ ಸಾಂದರ್ಭಿಕವಾಗಿ ಬರೆದ ಲೇಖನಗಳು. ಭಾರಿ ಪ್ರಚಾರದ ಸಿನಿಮಾ ಮತ್ತು ದೂರದರ್ಶನ ಧಾರಾವಾಹಿಗಳ ಹೊಡೆತದಿಂದ ಅಳಿವು - ಉಳಿವಿನ ಮಧ್ಯೆ ನರಳುತ್ತಿರುವ ರಂಗ ಮಾಧ್ಯಮವನ್ನು ಇನ್ನಷ್ಟು ಜನಾದರಣೀಯ ಕೇಂದ್ರವಾಗಿ ಉಳಿಸಿಕೊಳ್ಳಲು ಹೆಣಗುತ್ತಿರುವ ಕೆಲವು ವ್ಯಕ್ತಿಗಳ ಪರಿಚಯದೊಂದಿಗೆ ಸಂವಾದವೂ ಇದೆ.
ಊರು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಅಮೀನಗಡ, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ., ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ 'ಕನ್ನಡ ಬಂಡಾಯ ಕಾವ್ಯದಲ್ಲಿ ಪ್ರತಿಮಾ ಸಂವಿಧಾನ ಕುರಿತು ಪಿಎಚ್.ಡಿ. ಮೂರು ವರ್ಷ ಸಂಯುಕ್ತ ಕರ್ನಾಟಕದಲ್ಲಿ ಪತ್ರಕರ್ತರಾಗಿ ಸೇವೆ, ಈಗ ಮೈಸೂರಲ್ಲಿ ಪ್ರಜಾವಾಣಿಯ ಮುಖ್ಯ ವರದಿಗಾರ. ರಂಗಭೂಮಿ ಕುರಿತ ಲೇಖನಗಳ ಸಂಕಲನ 'ಪ್ರಯೋಗ ಪ್ರಸಂಗ' ಕೃತಿ (2004), ವಿಜಾಪುರದ ಯುವ ಲೇಖಕರ ವೇದಿಕೆಯ ಪ್ರಶಸ್ತಿ, ಸೇಡಂನ ಅಮ್ಮ ಪ್ರಶಸ್ತಿ ಹಾಗೂ ಕರ್ನಾಟಕ ನಾಟಕ ಅಕಾಡೆಮಿಯ ಪ್ರಶಸ್ತಿಗಳಿಂದ ಪುರಸ್ಕೃತಗೊಂಡಿದೆ. ಏಣಗಿ ಬಾಳಪ್ಪ ಅವರ ರಂಗಾನುಭವ ಕಥನ 'ಬಣ್ಣದ ಬದುಕಿನ ಚಿನ್ನದ ದಿನಗಳು' ...
READ MOREಹೊಸತು-2004- ಆಗಸ್ಟ್
ಇಂದಿನ ವೃತ್ತಿ ಮತ್ತು ಹವ್ಯಾಸಿ ರಂಗಭೂಮಿಯ ರಂಗಪ್ರಯೋಗಗಳ ಬಗ್ಗೆ ಸಾಂದರ್ಭಿಕವಾಗಿ ಬರೆದ ಲೇಖನಗಳು. ಭಾರಿ ಪ್ರಚಾರದ ಸಿನಿಮಾ ಮತ್ತು ದೂರದರ್ಶನ ಧಾರಾವಾಹಿಗಳ ಹೊಡೆತದಿಂದ ಅಳಿವು - ಉಳಿವಿನ ಮಧ್ಯೆ ನರಳುತ್ತಿರುವ ರಂಗ ಮಾಧ್ಯಮವನ್ನು ಇನ್ನಷ್ಟು ಜನಾದರಣೀಯ ಕೇಂದ್ರವಾಗಿ ಉಳಿಸಿಕೊಳ್ಳಲು ಹೆಣಗುತ್ತಿರುವ ಕೆಲವು ವ್ಯಕ್ತಿಗಳ ಪರಿಚಯದೊಂದಿಗೆ ಸಂವಾದವೂ ಇದೆ. ಕಿಕ್ಕಿರಿದ ಸಭಾಂಗಣಗಳಲ್ಲಿ ಸಂಗೀತ ನಾಟಕಗಳನ್ನು ಆಡುತ್ತಿದ್ದ ರಂಗಭೂಮಿ ಇಂದು ಆಕರ್ಷಣೆ ಕಳೆದುಕೊಳ್ಳಲು ಪ್ರೇಕ್ಷಕ ವರ್ಗ ಕಾರಣವಲ್ಲವೆಂಬ ಅನೇಕ ಪ್ರತಿಭಾವಂತ ರಂಗಕರ್ಮಿಗಳ ಅಭಿಪ್ರಾಯವನ್ನು ಅವರ ಮಾತುಗಳಲ್ಲೇ ಇಲ್ಲಿ ದಾಖಲಿಸಲಾಗಿದೆ. ನಾಟಕಗಳ ಬಗ್ಗೆ ಅಷ್ಟಾಗಿ ಆಸ್ಥೆ ಇಲ್ಲದವರನ್ನೂ ಆಸಕ್ತರನ್ನಾಗಿಸಿ ಕುತೂಹಲ ಮೂಡಿಸುವ ಲೇಖನಗಳು.