ಪಿಲಿಯನ್ ರೈಡರ್

Author : ಹರಿಯಪ್ಪ ಪೇಜಾವರ

Pages 132

₹ 100.00




Year of Publication: 2021
Published by: ಶ್ರೇಯಸ್ ಪ್ರಕಾಶನ
Address: ಐ.ಎಚ್.27, ಮೊದಲನೇ ಮುಖ್ಯರಸ್ತೆ ರಸ್ತೆ, 5ನೇ ಅಡ್ಡ ರಸ್ತೆ, ಲ್ಯಾಂಡ್ ಲಿಂಕ್ಸ್ ಟೌನ್ ಶಿಪ್ ದೇರೆಬೈಲು, ಕೊಂಚಾಡಿ, ಮಂಗಳೂರು- 575008
Phone: 9481226150

Synopsys

‘ಪಿಲಿಯನ್ ರೈಡರ್’ ಲೇಖಕ ಹರಿಯಪ್ಪ ಪೇಜಾವರ ಅವರ ಕವನ ಸಂಕಲನ. ಈ ಕೃತಿಗೆ ಲೇಖಕ ಕೆ. ಫಣಿರಾಜ್ ಮುನ್ನುಡಿ ಬರೆದು ‘ಅಚ್ಚುಕಟ್ಟಾದ ರೂಢಿಗತ ಕಾವ್ಯ ಆಕೃತಿಗಳ ಮೈಯಲ್ಲಿ ಜಾಣ ನುಡಿಗಳ ಹೂರಣ, ತುಂಬು ಕೈಚಳಕದ ಕಾವ್ಯ ಕಸುಬು ಸಾಧಾರಣವಾಗಿರುವ ಹೊತ್ತಲ್ಲಿ ಹರಿಯಪ್ಪ ಭಿನ್ನವಾದ ಕಠಿಣ ಕಾವ್ಯ ಮಾರ್ಗ ಹಿಡಿದಿದ್ದಾರೆ: ಲೋಕ ಬದುಕಿನ ಸಮಸ್ಯಾತ್ಮಕ ಸಂಗತಿಗಳನ್ನು ಎದಿರು ಹಾಕಿಕೊಂಡು, ಕವಿತೆ ಕಟ್ಟುವ ಕಾಯಕದ ಮೂಲಕ ತನಗೂ, ಓದುಗರಿಗೂ ಆ ಸಂಗತಿಗಳ ನಿಜರೂಪ ದರ್ಶನವು ಸಾಧ್ಯವಾದೀತೇ ಎಂಬ ಕವಿಯ ಉತ್ಕಟ ಹುಡುಕಾಟದಲ್ಲಿ ಈ ಸಂಕಲನದ ಪದ್ಯಗಳು ಒಡ ಮೂಡಿವೆ, ನನ್ನ ಪ್ರಕಾರ.. ಇದು ಸಂಕಲನದ ಹೆಗ್ಗಳಿಕೆ. ಯಾವತ್ತೂ ತಮ್ಮ ಪದ್ಯಗಳಲ್ಲಿ, ಈ ಬಗೆಯ ಅಸ್ತಿತ್ವವಾದಿ ತಾತ್ವಿಕ ನೆಲೆಯಿಂದ ಲೋಕದ ಸಂಗತಿಗಳ ಜೊತೆ ವಾಗ್ವಾದಕ್ಕೆ ಇಳಿವ ಕವಿ, ಬದುಕಿನ ಉದ್ದೇಶದ ಆಯ್ಕೆಗಳನ್ನು ಬೆಂಬತ್ತಿ, ಮನುಷ್ಯರು ಧರಿಸುವ ಚಹರೆಗಳ ಅಸಲಿಯತ್ತನ್ನು ಕಾವ್ಯ ರಚನೆಯ ಕಾಯಕದ ಮೂಲಕ ಕಾಣಲೂ-ಕಾಣಿಸಲೂ ಪ್ರಯತ್ನಿಸುವವರು ಎಂದು ಪ್ರಶಂಸಿಸಿದ್ದಾರೆ.

ಕರ್ಣ, ದೈವ ಮತ್ತು ಶಿಕ್ಷೆ, ಅನ್ನ ಮತ್ತು ವಿಷ, ಕಾರಾಗೃಹ, ಕರ್ಣ ಮತ್ತು ಕುಂತಿ, ಹಾಗೂ ಕೃಷ್ಣನ ಯುದ್ಧನೀತಿ ಹೆಸರಿನ ಕವಿತೆಗಳಿವೆ. ಎರಡನೆ ಭಾಗದಲ್ಲಿ ಸಂಕೇತ, ಹೆದರಿಸುವ ರಾಜನಿಂದ, ದುಃಖ, ಲಕ್ಸುರಿ, ಪರಿಪೂರ್ಣ ಕವಿತೆ, ವಿ ಫಾರ್, ಅಪರಿಚಿತ ನಾಡಿನಲ್ಲಿ, ಯು.ಎಸ್.ಓಪನ್ ಮತ್ತು ಟ್ರಂಪ್, ಒಬ್ಬನನ್ನು ಬಿಟ್ಟು, ಶಬ್ದ ಸೂತಕ, ಅಮ್ಮ:ಒಂದು ಟಿಪ್ಪಣಿ, ನಮ್ಮ ಬಗ್ಗೆ ಲೋಕದ ಅಪೇಕ್ಷೆ, ಬಸ್ ಸ್ಟಾಂಡ್ ನಲ್ಲಿ ರೋಮಿಯೋ, ಆದರ್ಶದ ಸುತ್ತ, ತಲೆ ತಿರುಗಿಸುವ ರೂಪಸಿಯಿಂದ, ಪ್ರಪಂಚದ ಕಕ್ಕುಲತೆ ಯಾತನೆಗೆ, ಸಾಲ್ಮಿಂಚು, ತನ್ನ ಮದುವೆಗೆ ತಾನೇ, ಕೆಲವೊಮ್ಮೆ, ಪ್ರತಿಭಾವಂತ ಆದರೆ, ನನ್ನ ಭಾರ ಹೊರುವ ನೀನು, ವಿದ್ಯಾರ್ಥಿ-ಗುರು, ಕವಿತೆಯ ಕಷ್ಟ, ಕಪ್ಪದ ಕಾಲ, ಕವಿತೆ, ಎದೆನೋವು ಮತ್ತು ಹೊಟ್ಟೆನೋವು, ಕಾಫಿ ಮತ್ತು ತಿಂಡಿ ಸೇರಿದಂತೆ 58 ಕವಿತೆಗಳು ಸಂಕಲನಗೊಂಡಿವೆ.

About the Author

ಹರಿಯಪ್ಪ ಪೇಜಾವರ

ಲೇಖಕ ಹರಿಯಪ್ಪ ಪೇಜಾವರ ಮೂಲತಃ ಮಂಗಳೂರಿನ ಬಜ್ಪೆ ಸಮೀಪದ ಪೇಜಾವರದವರು. ಪೇಜಾವರ ಹೈಸ್ಕೂಲಿನಲ್ಲಿ ಎಸ್.ಎಸ್.ಎಲ್.ಸಿ, ಸುರತ್ಕಲ್ ನ ಗೋವಿಂದದಾಸ ಕಾಲೇಜಿನಲ್ಲಿ ಬಿ.ಕಾಂ. ಪದವಿ, ಮಂಗಳಗಂಗೋತ್ರಿಯಲ್ಲಿ ಎಂ.ಎ ಹಾಗೂ 1989ರಿಂದ ಮಂಗಳೂರಿನ ಶ್ರೀಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ಇಂಗ್ಲಿಷ್  ಅಧ್ಯಾಪಕರಾಗಿದ್ದಾರೆ.  ಕೃತಿಗಳು: ಕವನಸಂಕಲನಗಳು- ವ್ಯಕ್ತಿ ಮತ್ತು ವ್ಯಕ್ತ(1986), ನೆನದದ್ದು ಹೆಚ್ಚಾಗಿ(2001), ಕಲಾವಿದನ ಕೊಲೆ(2012) , ಕಥಾಸಂಕಲನ: ಮಾನ ಮತ್ತು ಇತರ ಕಥೆಗಳು(1996), ಇನ್ನೊಂದು ಗ್ರಹ (2015) ಹಾಗೂ ಲೇಖನ ಸಂಗ್ರಹ- ಯಾರ ಮುಲಾಜೂ ಇಲ್ಲದೆ(2016).  ಪ್ರಶಸ್ತಿ ಗೌರವ: ಇವರ ವ್ಯಕ್ತಿ ಮತ್ತು ವ್ಯಕ್ತ ಸಂಕಲನಕ್ಕಾಗಿ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ, ಮಾನ ಮತ್ತು ಇತರ ಕಥೆಗಳಿಗೆ ವರ್ಧಮಾನ ...

READ MORE

Related Books