ಲೇಖಕ ಮನೋಹರ ಜನ್ನು ಅವರು ಬರೆದ ಒಟ್ಟು 12 ವೈಚಾರಿಕ ಲೇಖನಗಳ ಸಂಕಲನ-ಪರಿಷತ್ತಿಗೆ ಆಗದಿರಿ ಶಾಪ...?!. ಈ ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕನ್ನಡ ಸಾಹಿತ್ಯ ಮತ್ತು ಸಾಹಿತ್ಯದ ಹೆಸರಲ್ಲಿ ಆಗಾಗ ಏಳುವ ದ್ವಂದ್ವ ವಿಚಾರಗಳು.ವೈಚಾರಿಕತೆ ಮತ್ತು ಬುದ್ದಿ ಜೀವಿಗಳು ಸಮಾಜದಲ್ಲಿ ಸೃಷ್ಟಿಸುವ ಭಿನ್ನಮತ, ಪ್ರಗತಿ ಪರರ ಧೊರಣೆ ಕೇವಲ ಪ್ರಶಸ್ತಿ ಮತ್ತು ಅಧಿಕಾರಕ್ಕೆ ಹೋರಾಟ, ಲಾಬಿ, ತೆವಲುತನ,ಗಡಿನಾಡಿನಲ್ಲಿ ಕನ್ನಡದ ಕಡೆಗಣನೆ ಪರಿಷತ್ತಿನಲ್ಲಿ ನಡೆಯುವ ಭೇದಭಾವಗಳು, ನಡೆವ ಸನ್ಮಾನ ಘಟನೆಗಳ ಬಗ್ಗೆ ಬರೆದ ಬಹಿರಂಗ ಪತ್ರ ವ್ಯವಹಾರ,ಸ್ವಾರ್ಥ ಮನೋಭಾವ ಕೆಲವರ ನಿಸ್ವಾರ್ಥ ಸೇವೆ ಕುರಿತು ಬೆಳಕು ಚೆಲ್ಲಿದ್ದಾರೆ ಸಾಧಕರ ತುಳಿತದಂತಹ ಹಲವು ವಿಷಯಗಳ ವಿಶ್ಣೆೇಷಣೆ ಇದೆ ಪತ್ರಕರ್ತ ಜಯಚಂದ್ರ ಮುನ್ನುಡಿ ಬರೆದಿದ್ದಾರೆ.
ಲೇಖಕ ಮನೋಹರ ಜನ್ನು ಅವರು ಮೂಲತಃ ಗೋಕರ್ಣ ಬಳಿಯ ಬಂಕಿಕೊಡ್ಲ ಗ್ರಾಮದವರು. ತಂದೆ ಜನಾರ್ದನ ಜನ್ನು ಹಾಗೂ ತಾಯಿ ವತ್ಸಲಾ ಜನ್ನು. 25-12-1953 ರಂದು ಜನನ. ಸ್ನಾತಕೋತ್ತರ ಪದವೀಧರರು. ದಾಂಡೇಲಿಯ ವೆಸ್ಟ್ ಕೋಸ್ಟ್ ಪೇಪರ್ ಕಾರ್ಖಾನೆಯಲ್ಲಿ ಕಂಪ್ಯೂಟರ್ ವಿಭಾಗದಲ್ಲಿ ಗಣಕಯಂತ್ರ ಬರಹಗಾರರಾಗಿ ಸೇವೆ ಸಲ್ಲಿಸಿ ಸದ್ಯ ನಿವೃತ್ತರು. ಪರಿಸರ ಹೋರಾಟಗಾರರು. ಕೃತಿಗಳು: ಇವರ ಮಕ್ಕಳ ಕವನ ಸಂಕಲನ- ‘ಚುಕ್ಕಿ ಚಿತ್ತಾರ’. ರಾಜ್ಯ ಪ್ರಕಾಶಕ ಬರಹಗಾರ ಸಂಘದಿಂದ (2094) ಮೊದಲ ಬಹುಮಾನ ಪುರಸ್ಕಾರ ಲಭಿಸಿದೆ. ಕಾಲನ ತಂಬೂರಿ (ಕವನ ಸಂಕಲನ), ಚೈತ್ರಯಾತ್ರೆ,ಚುಟುಕುಮಾಲೆ-೧ (ಕಥಾ ಸಂಕಲನ), ಪರಿಷತ್ತಿಗೆ ಶಾಪವಾಗದಿರಿ (ವೈಚಾರಿಕ), ನಾಡಿನ ವಿವಿಧ ಪತ್ರಿಕೆಗಳಲ್ಲಿ ಲೇಖನ, ಕತೆ,ಕವನಗಳು ಪ್ರಕಟವಾಗಿವೆ. ...
READ MORE