ಒತ್ತಿ ಬರುವ ಕತ್ತಲ ದೊರೆಗಳು

Author : ಶ್ರೀನಿವಾಸ ಜೋಕಟ್ಟೆ

Pages 262

₹ 200.00




Published by: ಸಾಧನಾ ಪ್ರಕಾಶನ ಬೆಂಗಳೂರು
Phone: 9869394694

Synopsys

ಕಾಯಕ ನಗರವೆಂದು ಖ್ಯಾತಿ ಪಡೆದಿರುವ ಮುಂಬೈ ಶಹರ ಅಪರಾಧ ಅಥವಾ ಭೂಗತ ಚಟುವಟಿಕೆಗಳ ನಗರವೂ ಹೌದು. ಮುಂಬೈಯಲ್ಲಿ ಬದುಕುವ ಜನರ ಜೀವನದ ಮೇಲೆ ಈ ಭೂಗತ ಮಾಫಿಯಾ ಒಂದಲ್ಲ ಒಂದು ರೀತಿಯಲ್ಲಿ ಪರಿಣಾಮ ಬೀರುತ್ತದೆ.  ಹೀಗಿರುವಾಗ ಒಬ್ಬ ಬರಹಗಾರನಾಗಿ, ಈ ಜಗತ್ತಿನ ಕಡೆಗೆ ಶ್ರೀನಿವಾಸ ಜೋಕಟ್ಟೆಯವರು ಗಮನ ಹರಿಸುವುದು ಸಹಜವೇ ಆಗಿದೆ. ಈ ಅಪರಾಧ ಜಗತ್ತನ್ನು ವಿವರಿಸುವ ಮೂಲಕವೇ ಮುಂಬೈ ಮತ್ತು ಅದನ್ನು ಹೊಂದಿಕೊಂಡಿರುವ ದೇಶದ ವಿದ್ಯಮಾನಗಳನ್ನು ಚರ್ಚಿಸಲು ಯತ್ನಿಸುತ್ತಾರೆ. ಈ ಕೃತಿಯಲ್ಲಿ  ಸುಮಾರು 36 ಲೇಖನಗಳಿವೆ. ಮಾಯಾನಗರಿಯೆಂಬ ಮುಂಬೈ ಭೂಗತ ಜಗತ್ತಿನ ಗ್ಲಾಮರ್, ನಕ್ಸಲೈಟ್ ಕ್ರಾಂತಿಯ ಉಗಮಸ್ಥಾನ, ಐಬಿ ಸುಳಿಯಲ್ಲಿರುವ ಎನ್‌ಜಿಒ, ಶಾಂತಿಪಾಲನೆಯಲ್ಲಿ ಭಾಗಿಯಾಗುವ ಖಬರಿಗಳು, ಮಾನವೀಯತೆ ಮರೆತ ಪೊಲೀಸರು, ಖಾಸಗಿ ಗೂಢಚಾರ, ಸಣ್ಣ ಶಸ್ತ್ರಗಳ ಭಯೋತ್ಪಾದನೆ, ಅಫೀಮು ಅಮಲು, ಇಸ್ಲಾಮಿಕ್ ಸ್ಟೇಟ್, ಮಧ್ಯ ಭಾರತದ ಅಫೀಮ್ ಬೆಳೆ, ಕಾಮಾಟಿಪುರ, ಮೃತ ಡಕಾಯಿತನಿಗೊಂದು ಮಂದಿರ ಹೀಗೆ ಹಲವು ಪ್ರಮುಖ ವಿಷಯಗಳ ಕುರಿತು ಲೇಖಕರು ಈ ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ.

 

About the Author

ಶ್ರೀನಿವಾಸ ಜೋಕಟ್ಟೆ

ಸಾಹಿತಿ, ಪತ್ರಕರ್ತ 'ಶ್ರೀನಿವಾಸ ಜೋಕಟ್ಟೆ’ ಅವರು 1964 ಜುಲೈ 4 ಮಂಗಳೂರು ಜೋಕಟ್ಟೆಯಲ್ಲಿ ಜನಿಸಿದರು. ಪ್ರಸ್ತುತ ಮುಂಬಯಿ ನಗರದಲ್ಲಿ ವಾಸವಿದ್ದು, ಕನ್ನಡದ ದಿನಪತ್ರಿಕೆ 'ಕರ್ನಾಟಕ ಮಲ್ಲ'ದ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 'ಜೋಶ್ರೀ', 'ಶ್ರೀಜೋ', ಎಂಬ ಕಾವ್ಯನಾಮದಿಂದಲೂ ಬರೆಯುತ್ತಿದ್ದಾರೆ. ಪ್ರವೃತ್ತಿಯಲ್ಲಿ ಬರಹಗಾರರಾಗಿಯೂ ಗುರುತಿಸಿಕೊಂಡಿರುವ ಇವರು ರಚಿಸಿದ ಪ್ರಮುಖ ಕೃತಿಗಳೆಂದರೆ ಹಿಮವರ್ಷ, ಊರಿಗೊಂದು ಆಕಾಶ, ಒತ್ತಿ ಬರುವ ಕತ್ತಲ ದೊರೆಗಳು. ಇವರ ಗದ್ದರ್‌ ಕವನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಸಂಕಲನಕ್ಕೆ ಆಯ್ಕೆಯಾಗಿದೆ.  ...

READ MORE

Related Books