‘ಒಳಗೊಳ್ಳುವ ಅಭಿವೃದ್ದಿಗಾಗಿ ಮೀಸಲಾತಿ ’ ಕೃತಿಯು ಚಿನ್ನಸ್ವಾಮಿ ಡಿ ಅವರ ಲೇಖನಗಳ ಸಂಕಲನವಾಗಿದೆ. ಕೃತಿಯಲ್ಲಿಯ ಕೆಲವೊಂದು ವಿಚಾರಗಳು ಹೀಗಿವೆ; ದೇಶ ಕಂಡ ಮಹಾನ್ ಸಮಾಜವಾದಿ ರಾಮ ಮನೋಹರ್ ಲೋಹಿಯಾ ಅವರು 1950ರ ದಶಕದಲ್ಲಿ ಸಮಸ್ತ ಶೋಷಿತ ಜನಾಂಗಗಳ ಕುರಿತು ವಿಚಾರ ಮಂಡಿಸಿದ್ದರು. ಬಾಬಾ ಸಾಹೇಬರ ನೇತೃತ್ವದಲ್ಲಿ ತಮ್ಮ ಅಭ್ಯುದಯಕ್ಕಾಗಿ ಹೋರಾಟ ಮಾಡಬೇಕು ಮತ್ತು ಸರ್ವರಿಗೂ ಸಮಬಾಳು ಮತ್ತು ಸಮಪಾಲುಗಳು ಸ್ವತಂತ್ರ ಭಾರತದಲ್ಲಿ ಲಭಿಸಬೇಕಾದರೆ ಎಲ್ಲ ಜನಾಂಗಗಳಿಗೂ ಅವರ ಜನಸಂಖ್ಯೆಗೆ ಅನುಗುಣವಾಗಿ ಶಿಕ್ಷಣ, ಉದ್ಯೋಗ, ರಾಜಕಾರಣ ಮೊದಲಾದ ಕ್ಷೇತ್ರಗಳಲ್ಲಿ ಮೀಸಲಾತಿ ಲಭಿಸಬೇಕು ಎಂದು ಮಂಡಿಸಿದ ಮಾನವೀಯ ಚಿಂತನೆ ಭಾರತದಲ್ಲಿ ವಿಶೇಷ ಮಹತ್ವ ಹೊಂದಿದೆ.
ಈ ಹಿನ್ನೆಲೆಯಲ್ಲಿ ಒಳಮೀಸಲಾತಿಗಾಗಿ ಹಂಬಲಿಸದೇ ಸರ್ವಜನಾಂಗಳಿಗೆ ಮಾನವೀಯ ನೆಲೆಗಟ್ಟಿನಲ್ಲಿ ಪ್ರಾತಿನಿಧಿಕ ಮೀಸಲಾತಿ ನೀಡಿ ಭಾರತದ ಸಾಮಾಜಿಕ ಮತ್ತು ಆರ್ಥಿಕ ಪ್ರಜಾಸತ್ತೆಗಳನ್ನು ಪುನರುಜ್ಜೀವನಗೊಳಿಸುವುದು ಸಮಕಾಲೀನ ಸಂದರ್ಭದಲ್ಲಿ ವಿಶೇಷ ಮಹತ್ವ ಹೊಂದಿದೆ. 2019ರ ಮಹಾಚುನಾವಣೆಯ ಫಲಿತಾಂಶ ಮಾನವತಾವಾದಿಗಳು ಮತ್ತು ಪ್ರಜಾಪ್ರಭುತ್ವವಾದಿಗಳಿಗೆ ಆಘಾತಕಾರಿಯಾಗಿದೆ. ಸಮಸಮಾಜ ನಿರ್ಮಾಣಕ್ಕೆ ತದ್ವಿರುದ್ಧವಾಗಿ ಆಲೋಚಿಸುವ, ಕಾರ್ಯನಿರ್ವಹಿಸುವ ಮತ್ತು ಬದುಕುವ ಕೋಮುವಾದಿಗಳು ಮತ್ತು ಜಾತಿವಾದಿಗಳು ಇಂದು ವಿಜೃಂಭಿಸುತ್ತಿದ್ದಾರೆ’ ಎಂದು ಲೇಖಕರು ವಿಶ್ಲೇಷಿಸಿದ್ದಾರೆ.
ಲೇಖಕ ಚಿನ್ನಸ್ವಾಮಿ ಡಿ. ಡಿ. ಅವರು ಮೂಲತಃ ಚಾಮರಾಜನಗರ ಜಿಲ್ಲೆಯ ಬ್ಯಾಡಮೂಡ್ಲು ಗ್ರಾಮದವರು. ತಾಯಿ ಗುರುಸಿದ್ದಮ್ಮ, ತಂದೆ ದೊಡ್ಡಸಿದ್ದಯ್ಯ. ಪ್ರಾಥಮಿಕ ಶಿಕ್ಷಣವನ್ನು ಬ್ಯಾಡಮೂಡ್ಲು, ಹಾಗೂ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಹರದನಹಳ್ಳಿಯಲ್ಲಿ, ಪಿ.ಯು.ಸಿ. ಮತ್ತು ಪದವಿಯನ್ನು ಚಾಮರಾಜನಗರದಲ್ಲಿ, ಸ್ನಾತಕೋತ್ತರ ಹಾಗೂ ಎಂ.ಫಿಲ್. ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಲ್ಲಿ, ಬಿ.ಇಡಿ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ,, ಭಾರತೀಯ ಭಾಷಾ ಸಂಸ್ಥಾನ, ಮೈಸೂರಿನಲ್ಲಿ, ತೆಲುಗು ಭಾಷೆ ಡಿಪ್ಲೋಮಾವನ್ನು ಪೂರೈಸಿರುತ್ತಾರೆ. ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ‘ಕನ್ನಡ ನಾಟಕಗಳಲ್ಲಿ ಬುದ್ಧ ಬಸವ ಅಂಬೇಡ್ಕರ್” ವಿಷಯವಾಗಿ ಸಂಶೋಧನಾ ವಿದ್ಯಾರ್ಥಿ. ಅವರ ಮೊದಲ ವಿಮರ್ಶೆ ಕೃತಿಯಾದ ‘ನೆಲದೊಡಲು'ನ್ನು ಹೊರತಂದಿದ್ದಾರೆ ಮಹಿಳಾ ಸಬಲೀಕರಣದಲ್ಲಿ ಅಂಬೇಡ್ಕರ್, ...
READ MORE