‘ಒಳಗನ್ನಡಿ’ ಅಹೋರಾತ್ರ ಅವರ ಸ್ಫೂರ್ತಿದಾಯಕ ಲೇಖನಗಳ ಸಂಕಲನ. ಸಕಾರಣ ಜಾಗೃತಾವಸ್ಥೆಯಲ್ಲಿ ಕಣ್ಣನ್ನು ಮುಚ್ಚಿದಾಗ ತೆರೆದ ಮನದೊಳಗೆ ಪ್ರವೇಶಿಸುವ ಕ್ರಿಯೆ ಧ್ಯಾನವೆನಿಸಿಕೊಳ್ಳುತ್ತದೆ. ಮನೋಪ್ರಪಂಚವು ಸ್ಪಷ್ಟವಾಗಿ ಗೋಚರವಾಗಬೇಕೆಂದರೆ ಒಳಗಣ್ಣು ತೆರೆಯಬೇಕು ಎನ್ನುವ ಲೇಖಕರು, ಅವರ ಒಳಗಣ್ಣು ಕಾಣುವ ಒಳಮನವ ಪ್ರತಿಬಿಂಬಿಸುವ ಒಳಗನ್ನಡಿ ಈ ಕೃತಿ.
ಈ ಕೃತಿಯಲ್ಲಿ ಅಶ್ವಮೇಧದ ಅಂತರಾಳ ಬಿಡಿಸಿದಾಗ, ಅಸಹಜತೆಯನ್ನು ನಾವು ಏಕೆ ಸಹಿಸುವುದಿಲ್ಲ, ಹೇಳುವುದಕ್ಕೂ ಆಚರಣೆಗೂ ಎಲ್ಲಿಯ ಸಂಬಂಧ, ಸತ್ತ ನಂತರದ ದ್ವೇಷ ವೀರ ಲಕ್ಷಣವಲ್ಲ, ಬಿಡಿಸಲಾರದ ಬಂಧ ಮತ್ತು ಬೇರ್ಪಡಿಸುವ ಬಂಧ, ಒಳಗನ್ನಡಿ ಸೇರಿದಂತೆ 64 ಲೇಖನಗಳಿವೆ.
ಅಹೋರಾತ್ರ ಎಂತಲೇ ಪರಿಚಿತರಾಗಿರುವ ನಟೇಶ ಪೋಲಪಳ್ಳಿಯವರು ಮೂಲತಃ ಬೆಂಗಳೂರಿನವರು. ವ್ಯಕ್ತಿತ್ವ ವಿಕಸನದ ಕುರಿತು ಹಲವು ಪುಸ್ತಕಗಳನ್ನು ಬರೆದಿರುವ ಇವರ ಪ್ರಮುಖ ಕೃತಿಗಳೆಂದರೆ, ಒಳಗನ್ನಡಿ, ಆಯತನ, ಮೂರ್ಖನ ಮಾತುಗಳು, ಗಗನ ಗೋಚರಿ ವಸುಂದರಾ. ...
READ MORE