ನೂರೆಂಟು ವಿಶ್ವ ಕೃಇಯು ವಿಶ್ವೇಶರ ಭಟ್ಟರ ಲೇಖನಗಳ ಸಂಗ್ರಹವಾಗಿದೆ. ಒಲಿಂಪಿಕ್ಸ್ ನಲ್ಲಿ ನೂರು ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಉಸೇನ್ ಬೋಲ್ಟ್ ಗೆ ಪತ್ರಕರ್ತರು, “ನೀನು ಎರಡನೇ ಸಲವೂ ಚಿನ್ನದ ಪದಕ ಗೆದ್ದೆಯಲ್ಲ. ಮುಂದೇನು?' ಎಂದು ಕೇಳಿದರು. ಅದಕ್ಕೆ ಆತ ಹೇಳಿದ - 'ನನಗೆ ಓಡುವುದು ಮಾತ್ರ ಗೊತ್ತು. ದಣಿವೆಂಬುದು ಗೊತ್ತಿಲ್ಲ. ನಾನು ಓಡಬೇಕು, ಗುರಿ ತಲುಪುವವರೆಗೂ ಓಡಬೇಕು. ಗುರಿ ತಲುಪಿದ ನಂತರವೂ ಓಡಬೇಕು. ನಾನು ಓಡುತ್ತಲೇ ಇರಬೇಕು. ನಾನು ಓಡದೇ ನಿಂತಾಗ ನನ್ನ ಬದುಕಿನ ಕ್ರಿಯಾಶೀಲತೆಯೂ ನಿಲ್ಲುತ್ತದೆ. ಆಗ ನಾನು ಬದುಕಿಯೂ ಸತ್ತಂತೆ, ಒಲಿಂಪಿಕ್ಸ್ನಲ್ಲಿ ಪದಕ ಪಡೆದ ನಂತರ, ನನ್ನ ಆಸೆ ಈಡೇರಿತು ಇನ್ನು ಹಾಯಾಗಿರಬಹುದು ಎಂದು ನೀವು ಭಾವಿಸಿದ್ದರೆ ತಪ್ಪು. ಓಡುವುದು ನನಗೆ ಒಲಿಂಪಿಕ್ಸ್ ಕ್ರೀಡೆಯ ಒಂದು ಐಟೆಮ್ ಅಲ್ಲ. ನನಗೆ ಅದು ಧೈಯ ನನಗೆ ಅದೇ ಬದುಕು. ಅದು ಬಿಟ್ಟು ನನಗೆ ಮತ್ತೇನೂ ಗೊತ್ತಿಲ್ಲ. ನನ್ನ ಪಾಲಿಗೆ ಓಡುವುದು ಬೇರೆ ಅಲ್ಲ. ಉಸಿರಾಡುವುದು ಬೇರೆ ಅಲ್ಲ, ಓಡುವುದನ್ನು ನಿಲ್ಲಿಸಿದ ದಿನ ನಾನು ಉಸಿರಾಡುವುದನ್ನು ನಿಲ್ಲಿಸಿದಂತೆ ಎಂದು ವಿಶ್ವೇಶ್ವರ ಭಟ್ ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.
ವಿಶ್ವೇಶ್ವರ ಭಟ್ ಅವರು ಉತ್ತರಕನ್ನಡ ಜಿಲ್ಲೆಯ ಕುಮಟಾದ ಮೂರೂರಿನವರು. ಓದಿದ್ದು ಎಂ.ಎಸ್ಸಿ. ಹಾಗೂ ಎಂ.ಎ. ನಾಲ್ಕು ಚಿನ್ನದ ಪದಕ ವಿಜೇತರು, ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ, ಸಂಯುಕ್ತ ಕರ್ನಾಟಕ, ಕನ್ನಡಪ್ರಭದಲ್ಲಿ ಉಪಸಂಪಾದಕರಾಗಿ ವೃತ್ತಿ ಜೀವನ ಆರಂಭ, ವಿಜಯ ಕರ್ನಾಟಕ, ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ಚಾನಲ್ನ ಪ್ರಧಾನ ಸಂಪಾದಕ, ಏಷಿಯನ್ ಕಾಲೇಜ್ ಆಫ್ ಜರ್ನಲಿಸಮ್ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್, ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಸದ್ಯ, “ವಿಶ್ವವಾಣಿ' ದಿನಪತ್ರಿಕೆಯ ಪ್ರಧಾನ ಸಂಪಾದಕರು. 'ನೂರೆಂಟು ವಿಶ್ವ, 'ಇದೇ ಅಂತರಂಗ ಸುದ್ದಿ' ...
READ MORE