‘ನೂರೆನ್ ಳ ಅಂತರಂಗ’ ಹಿರಿಯ ಲೇಖಕಿ ಷರೀಫಾ ಅವರ ಕವಿತೆಗಳ ಸಂಕಲನ. ಮಹಿಳಾ ತಲ್ಲಣಗಳನ್ನು ಬಿಂಬಿಸುವ ಕವಿತೆಗಳು ಈ ಸಂಕಲನದಲ್ಲಿವೆ. ಮನೆಯ ಒಳಗಿದ್ದು, ಹೊರಗಿದ್ದು, ಜಗತ್ತನ್ನು ಕಾಣುವ ಮಹಿಳೆಯರ ದೃಷ್ಟಿಕೋನ ಪುರುಷರ, ಪುರುಷಾಧೀನವಾಗಿರುವುದರ ಬಗ್ಗೆ ಗಂಭೀರವಾಗಿ ಆಲೋಚಿಸಬೇಕು, ಆದರೆ ಷರೀಫಾ ಅವರಂತವರಿಗೆ ಎಲ್ಲಿದ್ದರೂ ಅನುಭವದ ಗ್ರಹಿಕೆ ಮತ್ತು ಅಭಿವ್ಯಕ್ತಿಯ ವಿಧಾನ ಒಂದು ಸೈದ್ಧಾಂತಿಕ ನೆಲೆ ಬದ್ಧವಾಗಿರುವುದರಿಂದ ಅವರ ಕವಿತೆಗಳೆಲ್ಲವೂ ವಿಚಾರಕ್ಕಿಳಿಯುತ್ತವೆ. ದೇಶ ಇಂದು ಸ್ವಾತಂತ್ರ್ಯದ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಹೆಣ್ಣು ತನ್ನ ಸ್ವಾತಂತ್ರ್ಯಕ್ಕಾಗಿ ನಿಂತ ನೆಲೆಯಲ್ಲಿ ಹೋರಾಡುತ್ತಲೇ ದೇಶಕ್ಕೆ ಸಿಕ್ಕ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ಹೊಣೆಯನ್ನು ಹೊರಬೇಕಾಗಿದೆ. ಆ ಹೊಣೆಗಾರಿಕೆಯ ಅರಿವು ಲೇಖಕಿಯಲ್ಲಿ ಇರುವುದರಿಂದಲೇ ದೇಶವನ್ನು ಒತ್ತೆ ಇಡಲು ಹೊರಟಿರುವವರ ಬಗ್ಗೆ ಆತಂಕ ಪಡುತ್ತಾಳೆ ಎನ್ನುತ್ತಾರೆ ಕೃತಿಗೆ ಬೆನ್ನುಡಿ ಬರೆದ ಹಿರಿಯ ಲೇಖಕಿ ಡಾ . ಮಲ್ಲಿಕಾ ಘಂಟಿ.
ಲೇಖಕಿ ಕೆ.ಷರೀಫಾ ಅವರು 1957 ಮೇ 05ರಂದು ಗುಲಬರ್ಗಾದಲ್ಲಿ ಜನಿಸಿದರು. ತಂದೆ ಬಾಬುಮಿಯಾ, ತಾಯಿ ಪುತಲೀಬೇಗಂ. ಬಿಡುಗಡೆಯ ಕವಿತೆಗಳು, ನೂರೇನ್‌ಳ ಅಂತರಂಗ, ಪಾಂಚಾಲಿ, ಮುಮ್ರಾಜಳ ಮಹಲು, ಬುರ್ಖಾ ಪ್ಯಾರಡೈಸ್, ಸಂವೇದನೆ (ವಿಮರ್ಶೆ), ಮಹಿಳಾ ಮಾರ್ಗ (ಸಹ ಸಂಪಾದನೆ), ಆಧುನಿಕ ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಮಹಿಳಾ ಸಂವೇದನೆ (ಸಂಶೋಧನೆ), ಹೊಸ ಶತಮಾನದ ಕಾವ್ಯ (ಸಂಪಾದನೆ) ಅವರ ಪ್ರಕಟಿತ ಕೃತಿಗಳು. ಅವರಿಗೆ ಮಹಿಳೆ ಮತ್ತು ಸಮಾಜ ಪ್ರಶಸ್ತಿ, ವನಿತಾ ಸಾಹಿತ್ಯ ಶ್ರೀ ಪ್ರಶಸ್ತಿ, ಅತ್ತಿಮಬ್ಬೆ ಸಾಹಿತ್ಯ ಶ್ರೀ ಪ್ರಶಸ್ತಿ, 2019ನೇ ಸಾಲಿನ ಕ.ಸಾ.ಪದ ಶ್ರೀನಿವಾಸ ಸ್ಮರಣಾರ್ಥ ಪಿ.ಕೆ. ನಾರಾಯಣ ದತ್ತಿ ಪ್ರಶಸ್ತಿ ದೊರೆತಿದೆ. ...
READ MORE