ಮನೋಹರ ಎನ್. ಮರಗುತ್ತಿ ಅವರ ಕವನ ಸಂಕಲನ-ನೆನಪಿನ ನಾವಿಕ.ಏಸುಕ್ರೈಸ್ತನಿಗೆ ಸಲ್ಲಿಸಿರುವ ಪ್ರಾರ್ಥನೆಗಳ ಗುಚ್ಛ. ಯೇಸು ಲೋಕಕ್ಕೆ ಬೆಳಕಾಗಿದ್ದಾನೆ. ಈ ಲೋಕ ನಮ್ಮದಲ್ಲ, ಪರಲೋಕ ನಮ್ಮ ರಾಜ್ಯ, ಸಬ್ಬತ್ ದಿನದ ಪ್ರಾಮುಖ್ಯತೆ, ಕ್ರಿಸ್ತನ ಶಿಲುಬೆ ಮರಣ, ಯೇಸು ಇಲ್ಲದ ಬಾಳು ಹೀಗೆ ಇತ್ಯಾದಿ ವಿಷಯ ವೈವಿಧ್ಯತೆಯ ಕವನಗಳಿವೆ. ಮಾನಸಿಕವಾಗಿ ಕುಗ್ಗಿದವರನ್ನು ದೇವರು ಮೇಲಕ್ಕೆತ್ತುತ್ತಾನೆ ಎಂಬ ಮೂಲ ನಂಬಿಕೆಯ ಈ ಕವನಗಳು ಸರಳವಾಗಿ ಗೇಯತೆಯನ್ನೂ ಹೊಂದಿವೆ.
ಮನೋಹರ ಎನ್. ಮರಗುತ್ತಿ ಅವರು ಮೂಲತಃ ಕಲಬುರಗಿ ಜಿಲ್ಲೆ ಹಾಗೂ ತಾಲೂಕಿನ ಮರಗುತ್ತಿ ಗ್ರಾಮದವರು.1968ರ ಡಿಸೆಂಬರ್ 5 ರಂದು ಜನನ. ಬಿ.ಕಾಂ ಹಾಗೂ ಪಿಜಿಡಿಬಿಎಂ ಪದವೀಧರರು. ಸದ್ಯ, ಮುತ್ತೂಟ್ ಫಿನ್ ಕಾರ್ಪ್ ಲಿಮಿಟೆಡ್ ನಲ್ಲಿ ಹಿರಿಯ ಶಾಖಾ ವ್ಯವಸ್ಥಾಪಕರಾಗಿ ಸೇವೆಯಲ್ಲಿದ್ದಾರೆ. ಕೃತಿಗಳು: ನೆನಪಿನ ನಾವಿಕ, ವರದ ಮಗು (ಕವನ ಸಂಕಲನಗಳು), ಮುತ್ತುಗಳ ಸುತ್ತ (ಸಾಮಾನ್ಯ ಜ್ಙಾನ ಮತ್ತು ನುಡಿಮುತ್ತುಗಳು) ಜನ್ಮಗ್ರಂಥ (ಕಾದ೦ಬರಿ). ಪರಿವರ್ತನೆ (ಕಥಾ ಸಂಕಲನ). ಪ್ರಶಸ್ತಿ-ಪುರಸ್ಕಾರಗಳು: ಬಸವ ಪುರಸ್ಕಾರ ಹಾಗೂ 65ನೇ ಕನ್ನಡ ರಾಜ್ಯೋತ್ಸವ ರತ್ನ ಪ್ರಶಸ್ತಿ ಲಭಿಸಿವೆ. ...
READ MORE