ನೆನಪಿನ ಬುತ್ತಿ

Author : ನೀಲಾವರ ಸುರೇಂದ್ರ ಅಡಿಗ

Pages 260

₹ 240.00




Year of Publication: 2021
Published by: ಪೃಥ್ವಿ ಪ್ರಕಾಶನ

Synopsys

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಮಾಧ್ಯಮ ಆ ನೆಲದ ಮಾತೃಭಾಷೆ ಆಗಿರುವುದು ಅವುಗಳ ಕಲಿತವರಿಗಿಂತ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿತವರಿಗೆ, ಎಲ್ಲಾ ಕ್ಷೇತ್ರಗಳಲ್ಲೂ ಹಿನ್ನಡೆಗೆ ಕಾರಣವಾಗಿರುವುದು ಮಾತ್ರ ವಿಪರ್ಯಾಸ ಎನ್ನುತ್ತದೆ ಲೇಖಕ ನೀಲಾವರ ಸುರೇಂದ್ರ ಅಡಿಗ ಅವರ ನೆನಪಿನ ಬುತ್ತಿ ಕೃತಿ. ಕನ್ನಡ ಮಾಧ್ಯಮದಲ್ಲಿ ಶಾಲೆಗಳು ತಲೆಯೆತ್ತಿದವು. ಜನರು ಮುಗಿಬಿದ್ದು ಅಂಥಾ ಶಾಲೆಗಳಲ್ಲಿ ತಮ್ಮ ಹೆಚ್ಚಿನ ಅವಕಾಶ ಸಿಗುತ್ತಿರುವುದರಿಂದ ಸಹಜವಾಗಿಯೇ, ಖಾಸಗಿ ಆಂಗ್ಲಮಾಧ್ಯಮ ಮಾಡತೊಡಗಿದರು. ಸ್ವಾಭಾವಿಕವಾಗಿ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುತ್ತದೆ, ಅದರಿಂದ ತಮ್ಮ ಮಕ್ಕಳ ಭವಿಷ್ಯ ಉಜ್ವಲವಾಗಲಿ ಸಾಲಸೋಲ ಮಾಡಿಯಾದರೂ, ಇಂಗ್ಲೀಷ್ ಮಾಧ್ಯಮದ ಶಾಲೆಗಳಿಗೆ ಮಧ್ಯಮ ವರ್ಗ, ಕೆಳಮಧ್ಯಮ ವರ್ಗದ ಪ್ರಜೆಗಳೂ, ಮಕ್ಕಳನ್ನು ಸೇರಿಸತೊಡಗಿದರು. ಮೊದಮೊದಲು ಹಿಂಸೆಯಾದರೂ ನಂತರದಲ್ಲಿ ಆ ಮಕ್ಕಳು, ಹೊಸ ಭಾಷೆಗೆ, ವಾತಾವರಣಕ್ಕೆ ಹೊಂದಿಕೊಂಡು ವಿದ್ಯೆ ಕಲಿಯತೊಡಗಿದರು. ಖಾಸಗಿ ಶಾಲೆಗಳ ಆಡಳಿತ ಮಂಡಳಿ ಶಿಕ್ಷಣವನ್ನು ಒಂದು ವ್ಯವಸ್ಥಿತವಾದ ವ್ಯಾಪಾರವನ್ನಾಗಿ ಮಾಡಿಕೊಂಡು ಪ್ರತಿಯೊಂದು ಸೇವೆಗೂ ದರ ನಿಗದಿ ಮಾಡಿಕೊಂಡು, ತಮ್ಮ ವ್ಯಾಪಾರ ಬೆಳೆಸಿದರು. ಇದರ ಪರಿಣಾಮ ಕ್ರಮೇಣ ಸರ್ಕಾರಿ ಕನ್ನಡ ಶಾಲೆಗಳ ಮೇಲಾಯಿತು. ಮೊದಲೆಲ್ಲಾ ನೂರಾರು ಮಕ್ಕಳನ್ನು ಹೊಂದಿದ ಸರ್ಕಾರಿ ಕನ್ನಡ ಶಾಲೆಗಳ ಸಂಖ್ಯಾಬಲ ಕುಗ್ಗುತ್ತಾ ಬಂದು, ಕೆಲವೊಂದು ಶಾಲೆಗಳಲ್ಲಿ, ಅದರಲ್ಲೂ ಹಳ್ಳಿಗಳ ಶಾಲೆಗಳಲ್ಲಿ ಪ್ರಥಮ ವರ್ಷದ ದಾಖಲಾತಿ ಎರಡಂಕೆಯನ್ನು ತಲುಪಲು ವಿಫಲವಾದವು. ಹಾಗಾಗಿ ಸರ್ಕಾರಕ್ಕೆ ಅನಿವಾರ್ಯವಾಗಿ ಕೆಲವೊಂದು ಶಾಲೆಗಳನ್ನು ಮುಚ್ಚಬೇಕಾಗಿ ಬಂತು. ಅದರ ದುಷ್ಪರಿಣಾಮದಿಂದ, ಹಳ್ಳಿಯ ಮಕ್ಕಳಿಗೆ ಸರ್ಕಾರಿ ಶಾಲೆಗಳು ಮತ್ತಷ್ಟು ದೂರವಾಗಿ ಅನಿವಾರ್ಯವಾಗಿ ಸಮೀಪದ ಖಾಸಗಿ ಶಾಲೆಗಳನ್ನು ಸೇರುವಂಥಾ ಪರಿಸ್ಥಿತಿ ನಿರ್ಮಾಣವಾಯಿತು. ಇದಕ್ಕಾಗಿ ಕನ್ನಡ ಪರ ಬುದ್ಧಿಜೀವಿಗಳು, ಸಂಘಟನೆಗಳು ಧ್ವನಿಯೆತ್ತಿದಾಗ, ಆಯಾಕಾಲದ ಸರ್ಕಾರಗಳು ಅನೇಕ ಕಾರ್ಯಕ್ರಮಗಳನ್ನು ಕೈಗೊಂಡರು. ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ, ಅಲ್ಲದೇ ಬಹುಶಃ ಖಾಸಗಿ ಶಾಲೆಗಳ ಲಾಬಿ ಅಥವಾ ವಶೀಲಿಬಾಜಿಯಿಂದಾಗಿ ಪರಿಣಾಮಕಾರಿ ಹಾಗೂ ದೂರದೃಷ್ಟಿಯುಳ್ಳ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಸರ್ಕಾರಗಳು ವಿಫಲವಾದವು. ಅಲ್ಲದೇ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಅವರ ಮಾತೃಭಾಷೆ ಅಥವಾ ಆಡು ಭಾಷೆಯಲ್ಲಿ ಉಚಿತವಾಗಿ ಕೊಡಬೇಕೆನ್ನುವ ಕಾನೂನನ್ನು ತರಲು ಯಾವುದೇ ಸರ್ಕಾರಗಳು ಪ್ರಯತ್ನ ಪಡಲಿಲ್ಲ. ಒಂದು ವೇಳೆ ಪ್ರಯತ್ನ ಪಟ್ಟರೂ ನ್ಯಾಯಾಂಗದ ಧೋರಣೆಯಿಂದ ಅದು ವಿಫಲವಾಗುವಂತಹ ಸಂದರ್ಭಗಳು ಎದುರಾಗುತ್ತಿತ್ತು ಎಂಬುದನ್ನು ಇಲ್ಲಿ ವಿಶ್ಲೇಷಿಸಲಾಗಿದೆ.

About the Author

ನೀಲಾವರ ಸುರೇಂದ್ರ ಅಡಿಗ
(21 September 1961)

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿರುವ ನೀಲಾವರ ಸುರೇಂದ್ರ ಅಡಿಗರು ಶಿಕ್ಷಣ, ಸಾಹಿತ್ಯ, ಸಂಘಟನೆಯಲ್ಲಿ ತಮ್ಮ ಛಾಪು ಮೂಡಿಸಿದವರು. ಅವರ ಐವತ್ತೈದು ಪುಸ್ತಕಗಳು ಪ್ರಕಟವಾಗಿವೆ. ಶೈಕ್ಷಣಿಕವಾಗಿ ಪಠ್ಯಪುಸ್ತಕರಹಿತ ಕಲಿಕೆಯ ಚಿಂತನೆ, ಅನುಷ್ಠಾನವೇ ಮೊದಲಾದ ಪ್ರಗತಿಪರ ಚಿಂತಕರು, ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ, ಸಾಹಿತಿಗಳಾಗಿ, ಉತ್ತಮ ವಾಗ್ಮಿಯೂ ಹೌದು. ಸಂಘಟಕರಾಗಿ ನಾಡಿನಾದ್ಯಂತ ಶಿಕ್ಷಕರಿಗೆ, ಸಹೃದಯರಿಗೆ ಪರಿಚಿತರು. ಇವರ ’ಕಿಟ್ಟಜ್ಜಿ ಮತ್ತು ಹವಿಸ್ಸು ಪಾತ್ರೆ’ ಈ ಪುಸ್ತಕ ಹತ್ತು ವರ್ಷಗಳ ಕಾಲ ICSE ಶಾಲೆಯ ಹತ್ತನೆಯ ತರಗತಿಗೆ ಪಠ್ಯಪುಸ್ತಕವಾಗಿತ್ತು. ಬೋಧನೆ ಮತ್ತು ಕಲಿಕೆಯ ಸಾಮಗ್ರಿ ’ಹೊಸ ದಿಶೆಯ ಬೆಳಕು’ ಕೃತಿಯನ್ನು ...

READ MORE

Related Books