ಸರ್ಜೂ ಕಾಟ್ಕರ್, ಸತೀಶ ಕುಲಕರ್ಣಿ ಹಾಗೂ ಕೆ. ಪದ್ಮರಾಜ ಅವರು ಸಂಯುಕ್ತವಾಗಿ ಪ್ರಕಟಿಸಿದ ಕವನ ಸಂಕಲನ -‘ನೆಲದ ನೆರಳು. ಸಾಂಪ್ರದಾಯಿಕ ವ್ಯವಸ್ಥೆಯನ್ನು ಪ್ರತಿಭಟಿಸುವ ಇಲ್ಲಿಯ ಬಹುತೇಕ ಕವಿತೆಗಳು, ಜನ ಹಾಗೂ ಜೀವಪರ ಕಳಕಳಿಯಿಂದ ಹೊಸ ವ್ಯವಸ್ಥೆಗಾಗಿ ಕಾತರಿಸುತ್ತವೆ. ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ ಅವರು ಈ ಸಂಕಲನಕ್ಕೆ ಮುನ್ನುಡಿ ಬರೆದು ಪ್ರತಿ ಕವಿತೆಯ ಮೂಲ ಧ್ವನಿ ಮಾನವೀಯತೆಯೇ ಆಗಿದೆ. ಇದು ಬಂಡಾಯ ಸಾಹಿತ್ಯದ ಮೂಲದ್ರವ್ಯವೂ ಆಗಿದೆ ಎಂದು ಕವಿತೆಗಳನ್ನು ಪ್ರಶಂಸಿಸಿದ್ದಾರೆ.
ಕವಿ, ಕಲಾವಿದ, ನಾಟಕಕಾರ ಸತೀಶ ಕುಲಕರ್ಣಿ ಅವರು 1951 ಜುಲೈ 13 ರಂದು ಧಾರವಾಡದಲ್ಲಿ ಜನಿಸಿದರು. ತಾಯಿ ಲೀಲಾಬಾಯಿ, ತಂದೆ ನೀಲಕಂಠರಾವ್ ಕುಲಕರ್ಣಿ. ಬಾಲ್ಯದಿಂದಲೂ ರಂಗಭೂಮಿಯಲ್ಲಿ ಆಸಕ್ತಿ ಇದ್ದ ಇವರು ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ ಹಾಗೂ ನಿರ್ದೇಶಿಸಿದ್ದಾರೆ. ಲಂಕೇಶರ ತೆರೆಗಳು, ಜೋಕುಮಾರಸ್ವಾಮಿ, ಕುಂಟಾಕುಂಟಾ ಕುರವತ್ತಿ, ಪ್ರಸ್ತುತ, ಬಂಗಾರದ ಕೊಡ, ಗಾಂಧಿ ಹಬ್ಬಿದ ಗಿಡ, ಪರಸಪ್ಪನ ಕಥೆ, ಅನಾಮಿಕ, ಕಂಪ್ಯೂಟರ್, ದೊಡ್ಡಮನುಷ್ಯ, ಹಾವು ಬಂತು ಹಾವು, ಗಗ್ಗಯ್ಯನ ಗಡಿಬಿಡಿ, ಗಾಡಿಬಂತುಗಾಡಿ ಮುಂತಾದ ನಾಟಕ ನಿರ್ದೇಶನ ಮತ್ತು ಅಭಿನಯ. ‘ವಿಷಾದಯೋಗ, ಗಾಂಧಿಗಿಡ, ಕಂಪನಿ ಸವಾಲ್, ಬೆಂಕಿನೀರು, ನೆಲದ ನೆರಳು, ವಿಕ್ಷಿಪ್ತ: ಗಾಂಧಿ ಒಡಲಾಳ ...
READ MORE