ರಾಹು ಅಲಂದಾರ ಅವರ ಕವನಸಂಕಲನ. ಈ ಕವನ ಸಂಕಲನದಲ್ಲಿ 52 ಕವನಗಳಿವೆ. ಕವಿ ಪ್ರಕೃತಿಗೆ ಮನಸೋತು ತಮ್ಮ ಕಾವ್ಯ ಹೇಗೆ ಹುಟ್ಟಿತೆಂಬುದನ್ನು ಹೇಳುತ್ತಾರೆ. ಪ್ರಕೃತಿ ಸೊಬಗಿನ| ಸುಂದರ ಸೃಷ್ಟಿಯಲಿ ಮೌನದಿ ನಾ ಕುಳಿತೆ| ಎತ್ತದೋ ಭಾವನೆ ಮನದಲಿ ಮೂಡಿತು ಪದದಲಿ ಅದು ಬರೆದೆ| ಹೀಗೆ ಕವಿತೆಯ ಬಗೆಗಿನ ಪ್ರೀತಿಯಿಂದ ಮೂಡಿದ ಕಾವ್ಯ ಅವರದು.
ಲೇಖಕ ರಾಹು ಅಲಂದಾರ ಮೂಲತಃ ಕೊಪ್ಪಳ ಜಿಲ್ಲೆಯ ಕುಷ್ಟಗಿಯವರು. ವೃತ್ತಿಯಲ್ಲಿ ಕಾನ್ ಸ್ಟೇಬಲ್. ಪ್ರಸ್ತುತ ಗದಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬರವಣಿಗೆ, ನಟನೆ ಹಾಗೂ ಓದುವುದು ಅವರ ಆಸಕ್ತಿ. ಕೃತಿಗಳು : ಮೌನಯಾನ (ಕಾದಂಬರಿ) , ರೆಕ್ಕೆಯ ಹಾಡು (ಕವನ ಸಂಕಲನ), ಬೆಳದಿಂಗಳು (ಆಧುನಿಕ ವಚನ ಸಂಕಲನ), ಅಲೆದಾಟ (ಕವನ ಸಂಕಲನ). ...
READ MORE