ಹಿರಿಯ ಸಾಹಿತಿ ಚಂದ್ರಶೇಕರ ಪಾಟೀಲ ಅವರ ಬರಹಗಳ ಸಂಗ್ರಹ ‘ನನ್ನ ಗುರು ಗೋಕಾಕ’. ಬೇರೆ ಬೇರೆ ಸಂದರ್ಭಗಳಲ್ಲಿ ಗುರುಗಳಾದ ಡಾ. ವಿ.ಕೃ.ಗೋಕಾಕರೊಂದಿಗೆ ಒಡನಾಟವನ್ನು ಶಿಷ್ಯ ಚಂದ್ರಶೇಖರ ಪಾಟೀಲರು ತಮ್ಮ ಲೇಖನ ಹಾಗೂ ಕವನಗಳ ಮೂಲಕ ಸಂಗ್ರಹಿಸಿದ್ದು ‘ನನ್ನ ಗುರು ಗೋಕಾಕ’ ಕೃತಿಯಲ್ಲಿ ಸಂಗ್ರಹಿಸಿದ್ದಾರೆ. ಕೃತಿಯ ಲೇಖಕರೇ ಹೇಳಿರುವಂತೆ,’ ಈ ನಂಟಿನ ಬೀಸಿಯಲ್ಲಿ ಕಾಲಕಾಲಕ್ಕೆ ಗೋಕಾಕರ ಬಗ್ಗೆ ಅನೇಕ ಲೇಖನ ಬರೆದಿರುವೆ- ಕಾವ್ಯ, ವಿಮರ್ಶೆ, ವ್ಯಕ್ತಿಚಿತ್ರ, ಇತ್ಯಾದಿ. ನನ್ನ ಒಂದು ನಾಟಕದಲ್ಲಿ ಅವರೊಂದು ಪಾತ್ರವು ಆಗಿದ್ದಾರೆ. ಎಲ್ಲ ಬಿಡಿ ಹೂವುಗಳನ್ನು ದೇಟು-ಮುಳ್ಳು ಸಮೇತ, ಒಂದು ದಾರದಲ್ಲಿ ಪೋಣಿಸುವ ಪ್ರಯತ್ನ ಈ ಕೃತಿ: ನನ್ನ ಗುರು ಗೋಕಾಕ’ ಎಂದಿದ್ದಾರೆ.
ಕೃತಿಯ ಪರಿವಿಡಿಯಲ್ಲಿ ವಿನಾಯಕಾಯ ನಮಃ, ಶುಭಾಸ್ತೇ ಪಂಥಾನಃ ಸಂತು, ಗೋ-ಕಾಕ್-ಗೋ ಬ್ಯಾಕ್!, ಗೋಕಾಕ ಚಳುವಳಿ ಹಾಡು, ನನ್ನ ಗುರು ಗೋಕಾಕ, ಇಂಗ್ಲಿಷ್ ಮೂಲಕ ಹುಸಿ ಸಂಸ್ಕೃತಿ, ವಿನಾಯಕ: ಸಮುದ್ರ ಸ್ವಾತಂತ್ಯ್ರದ ಕವಿ, ಗುರು ಗೋಕಾಕ:ಒಂದು ನೆನಪು, ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ, ಅಂತರಾಳದ ಬೆಳಕು:ಕರ್ನಟಕ ಕಾಲೇಜು, ಗುರು ಗೋಕಾಕ:‘ಹರಿಯುತಿಹ ಜೀವನದಿ’,ಗೋಕಾಕರ ಹೂದೋಟದ ಒಂದು ಹೂವು ನಾನು, ಮಂಜಿನಲ್ಲೊಬ್ಬ ಪಯಣಿಗ ಎಂಬ ಶೀರ್ಷಿಕೆಯ ಕವನಗಳಿವೆ.
'ಚಂಪಾ' ಎಂದೇ ಕನ್ನಡ ಸಾಹಿತ್ಯಲೋಕದಲ್ಲಿ ಚಿರಪರಿಚಿತ ಇರುವ ಚಂದ್ರಶೇಖರ ಪಾಟೀಲರು ಕವಿ-ನಾಟಕಕಾರ. ಕನ್ನಡನಾಡಿನ ಸಾಹಿತ್ಯಕ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಚಳುವಳಿಗಳ ಮುಂಚೂಣಿಯಲ್ಲಿ ಕೇಳಿಬರುವ ಹೆಸರು ’ಚಂಪಾ’ ಅವರದು. ಹಾವೇರಿ ಜಿಲ್ಲೆಯ ಹತ್ತೀಮತ್ತೂರಿನಲ್ಲಿ ಜನಿಸಿದರು (1939). ತಂದೆ ಬಸವರಾಜ ಹಿರೇಗೌಡ ಪಾಟೀಲ, ತಾಯಿ ಮುರಿಗೆವ್ವ. ಹತ್ತೀಮುತ್ತೂರಿನಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲಾ ವಿದ್ಯಾಭ್ಯಾಸ, ಹಾವೇರಿಯಲ್ಲಿ ಹೈಸ್ಕೂಲು ಶಿಕ್ಷಣ ಪಡೆದ ಅವರು ಹೆಚ್ಚಿನ ಅಧ್ಯಯನಕ್ಕಾಗಿ ಧಾರವಾಡದ ಕರ್ನಾಟಕ ಕಾಲೇಜು ಸೇರಿದರು. ಕಾಲೇಜಿನಲ್ಲಿದ್ದ ದಿನಗಳಲ್ಲಿಯೇ 'ಚಂಪಾ' ಅವರ ಅಕ್ಷರಗಳಿಗೆ ಕಾವ್ಯದ ಗರಿ ಮೂಡಿದವು. ಆಗ ಖ್ಯಾತ ಕವಿ ಗೋಕಾಕರು ಕರ್ನಾಟಕ ಕಾಲೇಜಿನಲ್ಲಿದ್ದರು. ’ನಮಗೆಲ್ಲ ...
READ MORE