‘ನಕ್ಷತ್ರ ನಕ್ಕಾಗ’ ಕವಿ ಜಿ.ಆರ್. ಪರಿಮಳಾ ರಾವ್ ಅವರ ಹನಿಗವನಗಳ ಸಂಕಲನ. ಈ ಕೃತಿಗೆ ಮಾರ್ಕಂಡಪುರಂ ಶ್ರೀನಿವಾಸ ಅವರ ಬೆನ್ನುಡಿ ಬರಹವಿದೆ. ಕೃತಿ ಮತ್ತು ಕೃತಿಕಾರರ ಕುರಿತು ಬರೆಯುತ್ತಾ ಜಿ.ಆರ್. ಪರಿಮಳಾ ರಾವ್ ಅವರು ತಮ್ಮ ಹನಿಗವನಗಳಲ್ಲಿ ಎಲ್ಲಾ ಬಗೆಯ ವಿವಿಧತೆಯಲ್ಲಿ ಮೆರೆದಿದ್ದಾರೆ. ಇವರ ಸಾಮಾಜಿಕ ಕಾಳಜಿಗೆ ತಮ್ಮ ಕವಿತೆಗಳಲ್ಲಿ ಎಚ್ಚರದ ಗಂಟೆ ಬಾರಿಸಿದ್ದಾರೆ. ಮಾನವ ಬದುಕಿನ ಅನೇಕ ವಿಚಾರಗಳ ಕೈಗನ್ನಡಿಯಾಗಿ ಅರ್ಥಪೂರ್ಣ ಸಂಕೇತ ಪ್ರತಿಮೆಗಳಿಂದ ಕೂಡಿದ ಅನೇಕ ಕವಿತೆಗಳು ತಮ್ಮದೇ ಆದ ಸುಂದರ ಭಾವವನ್ನು ನೀಡುತ್ತವೆ. ಒಟ್ಟಾರೆ ಇವರ ಹನಿಗವನಗಳು ಎಲ್ಲಾ ವಿಚಾರಗಳ ಆಗರ, ಭಾವಾನುಭವಗಳ ರಸದದ ಹೂರಣವಾಗಿವೆ. ಓದುಗರಿಗೆ ಅಪ್ಯಾಯಮಾನವಾಗಿವೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಜೊತೆಗೆ ಪರಿಮಳಾ ರಾವ್ ಅವರ ಕಾವ್ಯ ಹಾಗೂ ಚಿತ್ರಕಲಾ ಕೃಷಿ ಮತ್ತಷ್ಟು ಸಮೃದ್ಧವಾಗಿ ಸಾಗಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ಹೆಚ್ಚಿನ ಸೇವೆ ಸಂದು, ಎಲ್ಲ ರೀತಿಯ ಯಶಸ್ಸು ಅವರಿಗೆ ಲಭಿಸಲೆಂದು ಹಾರೈಸಿದ್ದಾರೆ.
ಹನಿಗವನಗಳ ರಚನೆಯಲ್ಲಿ ಆಸಕ್ತಿಯುಳ್ಳ ಪರಿಮಳಾರಾವ್ ಜಿ. ಆರ್. ತಮ್ಮ ದಿನನಿತ್ಯದ ಅನುಭವಗಳ ಮನಸ್ಸಿನ ಮಾತುಗಳನ್ನು ಹನಿಗವನಗಳಿಗೆ ಇಳಿಸುತ್ತಾರೆ. 1941 ಜನವರಿ 06 ರಂದು ಆಂಧ್ರ ಪ್ರದೇಶದ ಕರ್ನೂಲ್ನಲ್ಲಿ ಜನಿಸಿದರು. ’ಮಂದಾರ ಮಾಲಿನಿ’ ಅವರ ಕವನ ಸಂಕಲನ. ’ಬರ್ಥ್ ಆಫ್ ಹೋಪ್, ಅಲೆಯ ಆಲಾಪ, ಅಂತರಂಗಯಾನ, ಸ್ವರ್ಣ ಸಂಪಿಗೆ’ ಹೈಕುಗಳ ಕೃತಿ. ’ಮಿನುಗು ದೀಪ ಹನಿಗವನಗಳು, ಋತುಗಾನ’ ಅವರ ಮತ್ತಿತರ ಕೃತಿಗಳು. ‘ಸ್ಪಿಂಗ್ ಅವಾರ್ಡ್, ಸರ್ ಎಮ್. ವಿಶ್ವೇಶ್ವರಯ್ಯ ಪ್ರತಿಷ್ಠಾನದಿಂದ ಕಾವ್ಯಶ್ರೀ ಪ್ರಶಸ್ತಿ, ಕುವೆಂಪು ಪ್ರಶಸ್ತಿ, ಗಾರ್ಡನ್ ಆಫ್ ಪೊಯಟ್’ ಮುಂತಾದ ಗೌರವ ಪುರಸ್ಕಾರಗಳು ಸಂದಿವೆ. ...
READ MORE