ಕವಿ ಎನ್.ಕೆ. ಇಬ್ಬನಿ ನಡಂಪಲ್ಲಿ ಅವರ ಕವನ ಸಂಕಲನ-ನಾನು ನನ್ನ ಕೇರಿ. ಸಾಹಿತಿ ಸತೀಶ ಕುಲಕರ್ಣಿ ಅವರು ಈ ಸಂಕಲನಕ್ಕೆ ಮುನ್ನುಡಿ ಬರೆದು ‘ಅವರು ಕಂಡುಂಡ ಅನುಭವಗಳನ್ನು ಕಾವ್ಯವಾಗಿಸಿದ್ದಾರೆ. ಸಂಕಟದ ದೀಪ ಅವರ ಎಲ್ಲ ಕವಿತೆಗಳಲ್ಲಿ ಉರಿದಿದೆ. ಜಾತಿ ಭೇದ ಅವಮಾನಿಸುವ ಪರಂಪರೆಯ ಹೇರಿಕೆ ಇವೆಲ್ಲ ಕವಿಯನ್ನು ಕಾಡಿವೆ. ವ್ಯವಸ್ಥೆಯ ಬಗ್ಗೆ ಅನುಮಾನವಿದ್ದು, ಅದನ್ನು ಸಾರಾಸಗಟಾಗಿ ತಿರಸ್ಕರಿಸಿದೇ ವಾಸ್ತವವನ್ನು ಅರಿತು ಮತ್ತೇ ಮತ್ತೆ ಅದನ್ನು ಪ್ರಶ್ನಿಸುತ್ತಾ, ತಾವು ಬಿಡುಗಡೆಗೊಳಿಸಿಕೊಳ್ಳುವ ಹುಡುಕಾಟವಿದೆ. ಸಾಮಾಜಿಕ ಹೊಣೆಗಾರಿಕೆಯ ಹಾಗೂ ಜೀವಪರವಾದ ಕವಿತೆಗಳಿವೆ. ಕವಿತೆಗಳ ಸಂರಚನೆಯಲ್ಲಿ, ಹಿತಮಿತ ಶಬ್ದಗಳ ಬಳಕೆಯಲ್ಲಿ, ಕಟ್ಟುವ ಶೈಲಿಯಲ್ಲೂ ಅಂತರ್ಗತವಾದ ಶಿಸ್ತು ಇದೆ’ ಎಂದು ಪ್ರಶಂಸಿಸಿದ್ದಾರೆ.
ಎನ್.ಕೆ.ಇಬ್ಬನಿ ನಡಂಪಲ್ಲಿ ಕಾವ್ಯನಾಮದಿಂದ ಬರೆಯುತ್ತಿರುವ ಲೇಖಕ ಎನ್.ಕೆ. ಮಂಜುನಾಥ ಅವರು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕಾಮಸಮುದ್ರಂ ಹೋಬಳಿಯ ನಡಂಪಲ್ಲಿ (ಜನನ: 14-05-1984) ಗ್ರಾಮದವರು. ತಂದೆ ಕೆಂಚಪ್ಪ, ತಾಯಿ ನಂಜಮ್ಮ. ಸಂಘಟನೆಯೊಂದಿಗೆ ಬದುಕು ರೂಪಿಸಿಕೊಳ್ಳುತ್ತಾ ಸಾಹಿತ್ಯಾಸಕ್ತಿ ಬೆಳೆಸಿಕೊಂಡವರು. ಕೃಷಿಕರು. 2008ರಲ್ಲಿ ಕಾವ್ಯಾಮೃತಾ-ಸಂಪಾದಿತ ಕವನಗಳ ಸಂಕಲನ ಹಾಗೂ 2010ರಲ್ಲಿ ತಮ್ಮದೇ ಕವನ ಸಂಕಲನ-ಆ ದಿನಗಳು; ಪ್ರಕಟಗೊಂಡಿವೆ. ...
READ MORE