ಕವಯತ್ರೀ ಗಾಯಿತ್ರೀ ರಾಘವೇಂದ್ರ ಅವರು ಕಣ್ಣಿಗೆ ಕಾಣುವ ಪ್ರಕೃತಿಯ ಚಿತ್ರವನ್ನು ಆನಂದಿಸಿ, ಅನುಭವಿಸಿ ಹನಿಗವನಗಳ ರೂಪದಲ್ಲಿ ಅವರ ಭಾವನೆಗಳನ್ನು ವಿವರಿಸಿದ್ದಾರೆ. ಮೂಲತಃ ಶಿರಸಿಯವರಾದ ಇವರು ಮಲೆನಾಡು, ಕಾಡು, ಬೆಟ್ಟ, ಗುಡ್ಡ, ಮಳೆ, ಮನಸಿಗೆ ತಂಪೆರವ ಮಣ್ಣಿನ ಸುಗಂಧ ಇವೆಲ್ಲವನ್ನು ಆಸ್ವಾಧಿಸುತ್ತಾ ಮಲೆನಾಡಿನ ಮುಂಜಾವಿನ ಬಗ್ಗೆ ಕವನಗಳ ಮೂಲಕ ಹಾಡಿ ಹೊಗಳಿದ್ದಾರೆ.
ಬರಹಗಾರ್ತಿ ಗಾಯತ್ರೀ ರಾಘವೇಂದ್ರ ಅವರು ಜನಿಸಿದ್ದು 1987 ಫೆಬ್ರುವರಿ 26ರಂದು. ಪ್ರಸ್ತುತ ಉತ್ತರ ಕನ್ನಡ ಜಿಲ್ಲೆ ಶಿರಸಿ ಸಮೀಪದ ಬೆಟ್ಟಕೊಪ್ಪ ಹಳ್ಳಿಯಲ್ಲಿ ವಾಸವಾಗಿರುವ ಇವರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದು, ಕನ್ನಡ ಸಾಹಿತ್ಯವನ್ನು ಪ್ರವೃತ್ತಿಯಾಗಿಸಿಕೊಂಡವರು. ಈವರೆಗೆ ಐದು ಕೃತಿಗಳು ಲೋಕಾರ್ಪಣೆ ಗೊಂಡಿದ್ದು ಮುಂಜಾವದ ಹನಿಗಳು ಐದನೆಯ ಕೃತಿ. ಕನ್ನಡದ ದಿನಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಿಗೆ ಪ್ರಚಲಿತ ವಿದ್ಯಮಾನಗಳ ಕುರಿತು ವಿಶ್ಲೇಷಣಾ ಲೇಖನಗಳು, ಕತೆ, ಕವಿತೆಗಳನ್ನು ಬರೆದಿದ್ದಾರೆ. ಮುಂಜಾವದ ಹನಿಗಳು ಇವರ ಐದನೇ ಕೃತಿಯಾಗಿದೆ. ಗಾಯತ್ರೀ ಅವರಿಗೆ ಮಲ್ಲಿಗೆ ಮುಗುಳು ಪ್ರಶಸ್ತಿ, ಉತ್ತರ ಕನ್ನಡ ಜಿಲ್ಲಾ ರಾಜ್ಯೋತ್ಸವ ಯುವ ಕೃತಿ ಪುರಸ್ಕಾರಗಳು ಲಭಿಸಿವೆ. ಕದಂಬೋತ್ಸವ ಸೇರಿದಂತೆ ಹಲವಾರು ...
READ MORE