‘ಮೂಕನ ಕೋಟೆ’ ಗೌರೀಶ ಅಬ್ಳಿಮನೆ ಅವರ ಕಥಾಸಂಕಲನವಾಗಿದೆ. ಮೂಕನ ಕೋಟೆ - ನಿಮಗೆ ನೆನಪಿರಬಹುದು. ಉಮ್ಮಜ್ಜಿ, ಗಣಪಣ್ಣ, ಪ್ರಣತಿ, ಸುಭದ್ರಮ್ಮ ಮತ್ತು ಪುಟ್ಟಸ್ವಾಮಿಯವರಂತಹ ಉತ್ತಮ ಪಾತ್ರ ಮತ್ತು ಕಥೆಗಳನ್ನೊಳಗೊಂಡ ಒಂದು ಚಿಕ್ಕ ಮತ್ತು ಚೊಕ್ಕದಾದ(ಹವಿಗನ್ನಡ, ಹವ್ಯಕ ಕನ್ನಡ) ಕಾದಂಬರಿ ಪ್ರತಿಲಿಪಿಯಲ್ಲಿ ನಿಮ್ಮೆಲ್ಲರ ಮೆಚ್ಚುಗೆಗೆ ಪಾತ್ರವಾಗಿ ನನ್ನ ಹೃದಯಕ್ಕೆ ಆರದ ದೀಪದ ನಂತರ ಅತ್ಯಂತ ಹತ್ತಿರವಾದ ಕಥೆ.
ಲೇಖಕ ಗೌರೀಶ್ ಹೆಗಡೆ ಮೂಲತಃ ಉತ್ತರಕನ್ನಡ ಜಿಲ್ಲೆಯ ಹನ್ನಾವರ ತಾಲೂಕಿನ ಮುಗ್ವಾ ಗ್ರಾಮದ ಅಬ್ಳಿಮನೆಯವರು. ಇವರ ಕಾವ್ಯನಾಮ-ಗೌರೀಶ್ ಅಬ್ಳಿಮನೆ. (ಜನನ: 27 ಜೂನ್ 1993), ಹೊನ್ನಾವರದಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ, ನಂತರ ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಬಿಕಾಂ ಪದವಿ ಪೂರ್ಣಗೊಳಿಸಿದರು. ಸದ್ಯ, ಗೋಕರ್ಣದ ತದ್ರಿಯಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕ್ಲರ್ಕ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಪ್ರತಿಲಿಪಿ ಕನ್ನಡ ಎಂಬ ಡಿಜಿಟಲ್ ಮಾಧ್ಯಮದಲ್ಲಿ ಕತೆಗಳನ್ನು, ಕವನಗಳನ್ನು ಮತ್ತು ಕಾದಂಬರಿಗಳನ್ನು ರಚಿಸಿ ಪ್ರಕಟಿಸಿದ್ದು, ಇವರ "ಆರದ ದೀಪ" ಎಂಬುದು ಮಹಾ ಕಾದಂಬರಿ, "ಮೂಕನ ಕೋಟೆ", "ಉತ್ತರಾ" ಎಂಬ ಮಹಿಳಾ ...
READ MORE