ಲೇಖಕ ಗೌರೀಶ್ ಹೆಗಡೆ ಮೂಲತಃ ಉತ್ತರಕನ್ನಡ ಜಿಲ್ಲೆಯ ಹನ್ನಾವರ ತಾಲೂಕಿನ ಮುಗ್ವಾ ಗ್ರಾಮದ ಅಬ್ಳಿಮನೆಯವರು. ಇವರ ಕಾವ್ಯನಾಮ-ಗೌರೀಶ್ ಅಬ್ಳಿಮನೆ. (ಜನನ: 27 ಜೂನ್ 1993), ಹೊನ್ನಾವರದಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ, ನಂತರ ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಬಿಕಾಂ ಪದವಿ ಪೂರ್ಣಗೊಳಿಸಿದರು. ಸದ್ಯ, ಗೋಕರ್ಣದ ತದ್ರಿಯಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕ್ಲರ್ಕ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಪ್ರತಿಲಿಪಿ ಕನ್ನಡ ಎಂಬ ಡಿಜಿಟಲ್ ಮಾಧ್ಯಮದಲ್ಲಿ ಕತೆಗಳನ್ನು, ಕವನಗಳನ್ನು ಮತ್ತು ಕಾದಂಬರಿಗಳನ್ನು ರಚಿಸಿ ಪ್ರಕಟಿಸಿದ್ದು, ಇವರ "ಆರದ ದೀಪ" ಎಂಬುದು ಮಹಾ ಕಾದಂಬರಿ, "ಮೂಕನ ಕೋಟೆ", "ಉತ್ತರಾ" ಎಂಬ ಮಹಿಳಾ ಪ್ರಧಾನ ಸಾಮಾಜಿಕ, ‘ಸುತ್ತಜ್ಜಿ’ ಎಂಬ ಕೌಟುಂಬಿಕ ಕಾದಂಬರಿ ಹಾಗೂ,‘ನಾನು...ನರ...ಭಕ್ಷಕ’ ಎಂಬ ನಿಗೂಢ ಕಾದಂಬರಿಯನ್ನು ಪ್ರತಿಲಿಪಿಯಲ್ಲಿ ಪ್ರಕಟಿಸಿದ್ದು, ಅನೇಕ ಸಣ್ಣ ಕತೆಗಳು ಮತ್ತು ಕೆಲವು ಕವನಗಳನ್ನು ರಚಿಸಿದ್ದಾರೆ. "ಕಳೆದು ಹೋದ ಅಂಬೆಗಾಲು" ಕಥಾ ಸಂಕಲನ ಇವರ ಮೊದಲ ಪ್ರಕಟಿತ ಪುಸ್ತಕವಾಗಿದ್ದು, ಇ-ಬುಕ್ ಮಾದರಿಯಲ್ಲಿದೆ.