‘ಮೂರ್ಖನ ಮಾತುಗಳು’ ದೇವ- ದೇಶ-ದೇಹ, ಅಹೋರಾತ್ರ ಅವರ ಅನುಭವಾತ್ಮಕ ಲೇಖನಗಳ ಸಂಕಲನ. ನಮಗೆ ಗೊತ್ತಿರೋದು ಜ್ಞಾನ ಅಲ್ಲ. ನಮಗೆ ಗೊತ್ತಲ್ಲದೇ ಇರೋದು ಜ್ಞಾನ ಅನ್ನೋ ವಿವೇಚನೆ ವಿನಮ್ರತೆಯಲ್ಲಿ ತಮ್ಮನ್ನು ತಾವು ಮೂರ್ಖ ಅಂತಾ ಕರೆದುಕೊಳ್ಳೋ ಅಹೋರಾತ್ರ , ತಮ್ಮ ಅನುಭವಗಳನ್ನು ಲೇಖನಗಳಲ್ಲಿ ದಾಖಲಿಸಿದ್ದಾರೆ.
ದೇವ-ದೇಶ-ದೇಹ ಎಂಬ ಉಪಶೀರ್ಷಿಕೆ ಹೊಂದಿರುವ ಈ ಕೃತಿಯಲ್ಲಿ ಎಲ್ಲರ ಸುದೈವ-ದುರ್ದೈವಗಳ ಬಗ್ಗೆಯೂ, ದೇಶ ಮತ್ತು ನಮ್ಮ ಹುಟ್ಟಿನ ಉದ್ದೇಶಗಳ ಬಗ್ಗೆಯೂ, ದೇಹ ಮತ್ತು ಅದರ ಬಗ್ಗೆ ನಮಗಿರುವ ಸಂದೇಹಗಳ ಬಗ್ಗೆಯೂ ಓದುಗರಿಗೆ ಪರಿಚಯಿಸಿದ್ದಾರೆ.
ಅಹೋರಾತ್ರ ಎಂತಲೇ ಪರಿಚಿತರಾಗಿರುವ ನಟೇಶ ಪೋಲಪಳ್ಳಿಯವರು ಮೂಲತಃ ಬೆಂಗಳೂರಿನವರು. ವ್ಯಕ್ತಿತ್ವ ವಿಕಸನದ ಕುರಿತು ಹಲವು ಪುಸ್ತಕಗಳನ್ನು ಬರೆದಿರುವ ಇವರ ಪ್ರಮುಖ ಕೃತಿಗಳೆಂದರೆ, ಒಳಗನ್ನಡಿ, ಆಯತನ, ಮೂರ್ಖನ ಮಾತುಗಳು, ಗಗನ ಗೋಚರಿ ವಸುಂದರಾ. ...
READ MORE