ಮೋಕ್ಷವಾದದಲ್ಲಿ ಅಧ್ಯಾತ್ಮ ಹಾಗೂ ಅಂಬೇಡ್ಕರವಾದ ಎಂಬ ಎರಡು ಪ್ರಮುಖ ಭಾಗಗಳನ್ನಾಗಿ ಅಂಬೇಡ್ಕರ್ ವಿಚಾರಗಳ ಹಿನ್ನಲೆಯಲ್ಲಿ ಹಿಂದೂ ಪುರಾಣಗಳಲ್ಲಿಯ ವಿವಿಧ ಅವತಾರಗಳನ್ನು ಲೇಖಕರು ವಿಶ್ಲೇಷಿಸಿದ್ದಾರೆ. ಎರಡನೇ ಭಾಗದಲ್ಲಿ ಬುದ್ಧನ ಬೆಳಕಿನಲ್ಲಿ ಅಂಬೇಡ್ಕರ್ ವಿಚಾರಗಳು ಮೂಡಿಬಂದಿವೆ. ಬುದ್ಧ ಮತ್ತು ಬೌದ್ಧ ಧರ್ಮ ಸೇರಿದಂತೆ ವಿವಿಧ ವಿಷಯ ವಸ್ತುಗಳ ಮೇಲೆ ಬರೆದ ಲೇಖನಗಳು ತಮ್ಮದೇ ವಿಚಾರ-ಶೈಲಿಯಲ್ಲಿ ನಿರೂಪಿತಗೊಂಡಿವೆ.
ಎಚ್.ಎಸ್.ಬೇನಾಳ ಅವರು ಬಹುಮುಖ ಪ್ರತಿಭಾವಂತ,ಜೊತೆಗೆ ಸಂವೇದನಾ ಶೀಲ ಬರಹಗಾರ, ಕವಿಯಾಗಿ, ಕಥೆಗಾರನಾಗಿ, ವಿಚಾರವಂತ, ಪ್ರಬುದ್ಧ ಬರಹಗಾರರಾಗಿ ಗುರುತಿಸಿಕೊಂಡಿದ್ದಾರೆ. ಕಲಬುರಗಿ ಮೂಲದವರಾದ ಎಚ್. ಎಸ್. ಬೇನಾಳ ಚಿಕ್ಕ ವಯಸ್ಸಿಗೆ ವಿಚಾರಾತ್ಮಕ ಕೃತಿಗಳನ್ನು ರಚಿಸಿ ಸಾಹಿತ್ಯ ಲೋಕಕ್ಕೆ ಮಹತ್ತರ ಕೊಡುಗೆಗಳನ್ನು ನೀಡಿದ್ದಾರೆ. ಅವರ ಪ್ರಕಟಿತ ಕೃತಿಗಳು- ಬುದ್ಧನ ನಿಜವಾದ ವೈರಾಗ್ಯ, ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್, ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು, ಬಹಿಷ್ಕಾರ(ಕಥಾಸಂಕಲನ), ಪ್ರಥಮ ವಚನಕಾರ ಜೇಡರ ದಾಸೀಮಯ್ಯ, ಕಾವ್ಯ ಕಂಬನಿ(ಕವನ ಸಂಕಲನ), ಬಚ್ಚಿಟ್ಟ ಚರಿತ್ರೆಯನ್ನು ಬಿಚ್ಚಿಟ್ಟ ಬಾಬಾ ಸಾಹೇಬ ಡಾ.ಬಿ.ಆರ್.ಅಂಬೇಡ್ಕರ್, ವಿಶ್ವಕಂಡ ಶ್ರೇಷ್ಠ ಆರ್ಥಿಕ ಚಿಂತಕ ಬಾಬಾ ಸಾಹೇಬ ...
READ MORE