‘ಮೊದಲಕಲ್ಲು’ ಕೃತಿಯು ಉದಯ ಕುಮಾರ್ ಹಬ್ಬು ಅವರ ಲೇಖನಗಳ ಸಂಗ್ರಹವಾಗಿದೆ. ಈ ಲೇಖಕನ ಆಲೋಚನಾ ಕ್ರಮ, ದೃಷ್ಟಿಕೋನ, ಬರವಣಿಗೆಯ ಶೈಲಿ ಎಂಥದ್ದು ಎಂಬುದು ಕೃತಿಯೊಳಗಿನ ಮೊದಲ ಲೇಖನದಲ್ಲಿಯೇ ನಮಗೆ ತಿಳಿದುಬಿಡುತ್ತದೆ. ಯಾವ ಸಿದ್ಧಾಂತಗಳಿಗೂ ಕಟ್ಟುಬೀಳದ, ಆನಿಸಿದ್ದನ್ನು, ಭಾವಿಸಿದ್ದನ್ನು ಬರಹ ರೂಪಕ್ಕೆ ತರುವ ಪ್ರಯತ್ನವನ್ನು ಇಲ್ಲಿನ ಎಲ್ಲ ಲೇಖನಗಳಲ್ಲಿಯೂ ನಾವು ಕಾಣಬಹುದು. ಇದು ಈ ಲೇಖಕನ ವಿಶಿಷ್ಟತೆಯೂ ಹೌದು, ಮಿತಿಯೂ ಹೌದು. ರೂಪನಿಷ್ಠ ಅಧ್ಯಯನವು ಕೃತಿಯ ಕಲಾತ್ಮಕತೆಗೆ, ಕೃತಿಯು ಒಳಗಿನ ವಿವರಣೆಗಳಿಗೆ ಪ್ರಾಮುಖ್ಯತೆಯನ್ನು ನೀಡಿದರೆ: ಸಂಸ್ಕೃತಿನಿಷ್ಟ ಅಧ್ಯಯನವು ಸಮತೋಲನವನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಸಾಹಿತ್ಯೋತ್ಪತ್ತಿಯನ್ನು 'ಸಾಂಸ್ಕೃತಿಕ ಪಠ್ಯ' ವೆಂದು ನೋಡುತ್ತದೆ. ಇವೆರಡು ಮಾರ್ಗ ಗಳಲ್ಲಿ ಉದಯಕುಮಾರ್ ಹಬ್ಬು ಅವರು ಆಯ್ದುಕೊಳ್ಳುವುದು ರೂಪನಿಷ್ಠ ವಿವರಣೆಯನ್ನು , ಈ ಕೃತಿಯೊಳಗಿನ ಬಹುಪಾಲು ಲೇಖನಗಳು 'ಕೃತಿ ಪರಿಚಯಗಳಂತೆ ಕಂಡರೂ, ಅವುಗಳ ಆಳ-ಅಗಲಗಳು ಆ ಮಿತಿಯನ್ನು ಮೀರುವಂತೆ ಮಾಡಿವೆ.
ಉದಯ್ ಕುಮಾರ್ ಹಬ್ಬು ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಹತ್ತು ವರುಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಲೇಖಕರಾಗಿ ಸಾಹಿತ್ಯ ಕೃಷಿಯಲ್ಲಿಯೂ ತೊಡಗಿರುವ ಹಬ್ಬು ಅವರು ಅನ್ವೇಷಣೆ, ರಥೋತ್ಸವ ಕವನ ಸಂಕಲನಗಳನ್ನು ಹೊರತಂದಿದ್ಧಾರೆ. ಕಥಾ ಸಂಕಲನಗಳಾದ ಸಂಬಂಧಗಳು, ಕಣ್ಣುಗಳು, ಬಿಳಿ ಕಾಗೆ ಮತ್ತು ಇತರ ಕತೆಗಳು ಹಾಗೂ ಮುಸ್ಸಂಜೆಯ ಕತೆಗಳು ಪ್ರಕಟಿತಗೊಂಡಿದೆ. ಇದಲ್ಲದೇ ಕಪ್ಪುದೇವತೆ , ತ್ಯಕ್ತ , ದ್ರೋಣ ಲವ್ಯ ,ಬಿಟ್ಟೆನೆಂದರೂ ಬಿಡದಿ ಮಾಯೆ , ವಿದುರ ಪರ್ವ ಕಾದಂಬರಿಯನ್ನು ಬರೆದಿದ್ದಾರೆ. ಅಳಿದ ಮೇಲೆ, ಕೊನೆಯ ಕಲ್ಲು, ದೇವನೂರು ಮಹಾ ದೇವರ ಕಥೆಗಳು ಮತ್ತು ಕಾದಂಬರಿಗಳು-ಅವಲೋಕನ, ಪುಸ್ತಕ ಪ್ರೀತಿ, ಜಂಬು ಜೋಂಕಿಣಿ ಇವರ ವಿಮರ್ಶಾ ಪುಸ್ತಕಗಳು. ಮಕ್ಕಳ ಸಾಹಿತ್ಯ ರಚನೆಯಲ್ಲಿ ...
READ MORE(ಹೊಸತು, ಡಿಸೆಂಬರ್ 2012, ಪುಸ್ತಕದ ಪರಿಚಯ)
ಇದು ವಿವಿಧ ಕೃತಿಗಳನ್ನು ಮತ್ತು ವ್ಯಕ್ತಿ-ವಿಚಾರಗಳನ್ನು ಪರಿಚಯಿಸುವ ಲೇಖನಗಳ ಸಂಗ್ರಹ ಶೀರ್ಷಿಕೆಯೇ ಸೂಚಿಸುವಂತೆ ಇದು ಈ ಕ್ಷೇತ್ರದಲ್ಲಿ ಉದಯಕುಮಾರ್ ಹಬ್ಬು ಅವರ ಮೊದಲ ಪ್ರಯತ್ನ. ಹಾಗಾಗಿಯೇ ಇದಕ್ಕೆ ಶೀರ್ಷಿಕೆ 'ಮೊದಲ ಕಲ್ಲು. ಈ ಲೇಖಕನ ಆಲೋಚನಾ ಕ್ರಮ, ದೃಷ್ಟಿಕೋನ, ಬರವಣಿಗೆಯ ಶೈಲಿ ಎಂಥದ್ದು ಎಂಬುದು ಕೃತಿಯೊಳಗಿನ ಮೊದಲ ಲೇಖನದಲ್ಲಿಯೇ ನಮಗೆ ತಿಳಿದುಬಿಡುತ್ತದೆ. ಯಾವ ಸಿದ್ಧಾಂತಗಳಿಗೂ ಕಟ್ಟುಬೀಳದ, ಆನಿಸಿದ್ದನ್ನು, ಭಾವಿಸಿದ್ದನ್ನು ಬರಹ ರೂಪಕ್ಕೆ ತರುವ ಪ್ರಯತ್ನವನ್ನು ಇಲ್ಲಿನ ಎಲ್ಲ ಲೇಖನಗಳಲ್ಲಿಯೂ ನಾವು ಕಾಣಬಹುದು. ಇದು ಈ ಲೇಖಕನ ವಿಶಿಷ್ಟತೆಯೂ ಹೌದು, ಮಿತಿಯೂ ಹೌದು. ರೂಪನಿಷ್ಠ ಅಧ್ಯಯನವು ಕೃತಿಯ ಕಲಾತ್ಮಕತೆಗೆ, ಕೃತಿಯು ಒಳಗಿನ ವಿವರಣೆಗಳಿಗೆ ಪ್ರಾಮುಖ್ಯತೆಯನ್ನು ನೀಡಿದರೆ: ಸಂಸ್ಕೃತಿನಿಷ್ಟ ಅಧ್ಯಯನವು ಸಮತೋಲನವನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಸಾಹಿತ್ಯೋತ್ಪತ್ತಿಯನ್ನು 'ಸಾಂಸ್ಕೃತಿಕ ಪಠ್ಯ' ವೆಂದು ನೋಡುತ್ತದೆ. ಇವೆರಡು ಏದುರ್ರಾ ಮಾರ್ಗ ಗಳಲ್ಲಿ ಉದಯಕುಮಾರ್ ಹಬ್ಬು ಅವರು ಆಯ್ದುಕೊಳ್ಳುವುದು ರೂಪನಿಷ್ಠ ವಿವರಣೆಯನ್ನು , ಈ ಕೃತಿಯೊಳಗಿನ ಬಹುಪಾಲು ಲೇಖನಗಳು 'ಕೃತಿ ಪರಿಚಯಗಳಂತೆ ಕಂಡರೂ, ಅವುಗಳ ಆಳ-ಅಗಲಗಳು ಆ ಮಿತಿಯನ್ನು ಮೀರುವಂತೆ ಮಾಡಿವೆ. ಪ್ರಾಚೀನ ಸಾಹಿತ್ಯ, ಜನಪದ ಸಾಹಿತ್ಯ, ಆಧುನಿಕ ಸಾಹಿತ್ಯ ಕೃತಿಗಳ ಪರಿಚಯ ವಿಶ್ಲೇಷಣೆ, ವಿಮರ್ಶೆ ಇಲ್ಲಿದೆ. ಈ ಕೃತಿಯ ಹೆಚ್ಚುಗಾರಿಕೆಯಿರುವುದು ನಮ್ಮ ಕನ್ನಡ ಸಾಹಿತ್ಯ ಚರಿತ್ರೆ ಗುರುತಿಸದ ಎಷ್ಟೋ ಅಪರೂಪದ ಕೃತಿಗಳನ್ನು ಲೇಖಕರನ್ನು ಪರಿಚಯಿಸಿರುವುದರಲ್ಲಿ