‘ಮೀನಿನ ಹೊಳಪನ್ನು ನೀರಿಗೇ ಬಿಟ್ಟು’ ಕೃತಿಯು ವಸಂತ ಬನ್ನಾಡಿಯವರ ಕವನಸಂಕಲನವಾಗಿದೆ. ಇಲ್ಲಿನ ಕವಿತೆಗಳು ಇತ್ತೀಚೆಗೆ ಬರುತ್ತಿರುವ ಕನ್ನಡ ಹೊಸ ಕಾವ್ಯದ ಪ್ರಾತಿನಿಧಿಕ ಸ್ವರೂಪ ಏಕೆಂದರೆ ಇವುಗಳಲ್ಲಿ ಕಾವ್ಯದ ನಿರಂತರ ಹೊಳಪು ಇಲ್ಲ; ಇರುವುದು ಕೇವಲ ಚಣ ಮಾತ್ರದ ಪ್ರತಿಫಲನವಷ್ಟೇ ಬನ್ನಾಡಿಯವರ ಕಾವ್ಯ ತಲ್ಲಣಗೊಂಡ ವ್ಯಕ್ತಿಯೊಬ್ಬನ ಪ್ರತಿಕ್ರಿಯೆಯಂತಿವೆ. ಅವರು ವರ್ತಮಾನದ ಹಿಂಸೆಗೆ ಎತ್ತಿದ ಸೊಲ್ಲುಗಳಾಗಿವೆ ಇಲ್ಲಿನ ಕವಿತೆಗಳು. ಈ ರಾತ್ರಿ ಇದು ಕೊನೆಯಲ್ಲ, ಕಣ್ಣ ಸಂಜ್ಞೆಗೆ ಕಿವಿ ಮಾರಿಕೊಂಡು, ಮಳೆಯ ಈ ರಾತ್ರಿ, ಕ್ರೌರ್ಯಕ್ಕೆ ಹೆಡೆಯಿದೆ, ಹಿಂಸೆಯೇ ಇಲ್ಲ ನಮ್ಮೂರಲ್ಲಿ, ಗಾಂಧಿ ಮೈದಾನದಲ್ಲಿ ಮೇರು ನಾಯಕ, ಇಲ್ಲೆಲ್ಲ ಕವಿ ಕೋಮುಹಿಂಸೆ ಹಾಗೂ ಅದರ ಭೀಕರ ಹಿಂಸೆಯ ಸ್ವರೂಪವನ್ನು ಧ್ಯಾನಿಸಿದಾಗ ಬಂದ ಮಾತುಗಳಿವೆ. ಯಾರಿಗೂ ಏನೂ ಅನಿಸದ ಹಿಂಸೆಯ ಸುದ್ದಿಗಳನ್ನು ದಿನದ ಅನ್ನದಂತೆ ಬಾಯಿ ಚಪ್ಪರಿಸಿ ಅವರದನ್ನು ಉಣ್ಣುತ್ತಿರುವುದನ್ನು… ಇಂಥ ಮಾತುಗಳನ್ನು ಸಂಕಲನದ ಅನೇಕ ಕಡೆ ನಾವು ಕಾಣುತ್ತೇವೆ.
ಸಾಹಿತಿ ವಸಂತ ಬನ್ನಾಡಿ ಅವರು 1955 ಸೆಪ್ಟೆಂಬರ್ 20ರಂದು ಉಡುಪಿ ಜಿಲ್ಲೆಯ ಕೋಟದಿಂದ ಮೂರು ಮೀ. ದೂರದ ಬನ್ನಾಡಿಯಲ್ಲಿ ಜನಿಸಿದರು. ವಾಣಿಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಅಧ್ಯಪಕರಾಗಿ ವೃತ್ತಿ ಆರಂಭಿಸಿದರು. ಬಾಲ್ಯದಿಂದಲೂ ಸಾಹಿತ್ಯ ಹಾಗೂ ರಂಗಭೂಮಿಯಲ್ಲಿ ಅಪಾರ ಆಸಕ್ತಿ ಹೊಂದಿದ್ದ ಇವರು ಕಾಲೇಜು ದಿನಗಳಲ್ಲೇ ಬರೆದ ಕತೆ, ಕವನಗಳು ಮಾಸಿಕದಲ್ಲಿ ಪ್ರಕಟವಾಗಿವೆ. ಈವರೆಗೂ ಸುಮಾರು 25 ನಾಟಕಗಳನ್ನು ನಿರ್ದೇಶಿಸಿರುವ ಇವರಿಗೆ ನಾಲ್ಕು ಬಾರಿ ರಾಜ್ಯಮಟ್ಟದ ಶ್ರೇಷ್ಠ ನಿರ್ದೇಶಕ ಪ್ರಶಸ್ತಿ ಬಂದಿದೆ.ಇವರ ಕೃತಿಗಳು ಕಡಲಧ್ಯಾನ, ನೀಲಿಹೂ, ನಿಜದ ನೆಲೆ (ಕವನ ಸಂಕಲನಗಳು) ಸಂಸ್ಕೃತಿ ಚಿಂತನೆ, ಲೇಖನಗಳು, ಬೆಂಕಿಯ ನಾನೇ ಆಹುತಿಯೂ ...
READ MOREಇದು ವಸಂತ ಬನ್ನಾಡಿಯವರ ನಾಲ್ಕನೇ ಕವನ ಸಂಕಲನ. ಇವರ ಕಾವ್ಯ. ಆಧುನಿಕ ಕನ್ನಡ ಕಾವ್ಯ ಪ್ರಯೋಗಗಳಲ್ಲಿ ವಿಶಿಷ್ಟವಾದದ್ದು. ಇಲ್ಲಿ ವೈವಿಧ್ಯಮಯ ವಸ್ತುಭಾವದ ಅರವತ್ತೊಂದು ಕವನಗಳಿವೆ. ಬಹುಪಾಲು ಕವನಗಳ ಆಳದಲ್ಲಿ ಸ್ಥಾಯಿಯಾಗಿ ವಿಷಾದ ಭಾವವಿದೆ. ಬುದ್ಧಿ-ಭಾವ ಮಿಲನದ ಇಲ್ಲಿನ ಕವಿತೆಗಳು ನಮ್ಮನ್ನು ಚಿಂತನೆಗೆ ಹಚ್ಚುವಂಥವು. 'ಮೌನ ಒಂದು ಮಹಾಪಾಪ', 'ಕಣ್ಣ ಸಂಜೆಗೆ ಮಾರಿಕೊಂಡು', `ಜೊತೆಗೂಡಲಾರೆ" ಮುಂತಾದ ಕವನಗಳು ಕೋಮು ವಿದ್ವೇಷದ ಕೃತ್ಯಗಳನ್ನು ಸೂಕ್ಷ್ಮ ನಿಟ್ಟಿನಲ್ಲಿ ನೋಡುವಂಥವು. ಇಲ್ಲಿನ ಕವಿತೆಗಳು ಬದುಕಿಗೆ ಸ್ಪಂದಿಸಿದ ವಾಸ್ತವದ ಭಾಗವೇ ಆಗಿ ಮೂಡಿರುವುದರಿಂದ ಕವಿತೆಗಳು ಧ್ವನಿಪೂರ್ಣವಾಗಿದ್ದು ತುಂಡು ತುಂಡಾಗಿಯೇ ಮಿಡಿಯುತ್ತಾ ಓದುಗರನ್ನು ಸೆಳೆಯುತ್ತವೆ. ಸಮಕಾಲೀನ ಸಂದರ್ಭದ ಜೀವಂತ ಹಿಂಸೆ, ಭ್ರಷ್ಟತೆ, ಶೂನ್ಯತೆಯನ್ನು 'ಮೌನ ಒಂದು ಮಹಾಪಾಪ' ವೆಂದು ಹಿಡಿದಿಡುವ ಜೀವಂತ ಕವಿತೆಗಳು ಈ ಸಂಕಲನದಲ್ಲಿವೆ.
ಪುಸ್ತಕ ಪರಿಚಯ: ಕೃಪೆ: ಹೊಸತು