ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ ಅವರ ಕವನ ಸಂಕಲನ ‘ಮತ್ತೊಂದು ಎಲೆ’. ಇದು ಚಂಪಾ ಅವರ ಹದಿಮೂರನೆಯ ಕವನ ಸಂಕಲನವಾಗಿದೆ. ಲೇಖಕರು ತಮ್ಮ ಮಾತಿನಲ್ಲಿ ಹೇಳಿರುವಂತೆ, ‘ 2010ರ ನನ್ನ ‘ದೇವಬಾಗ’ ಸಂಕಲನದ ನಂತರದ ಎಲ್ಲ ನಮೂನೆಯ ಎಲ್ಲ ಕವನಗಳು ಈ ಕೃತಿಯಲ್ಲಿದೆ. ನನ್ನ ಮೊದಲ ಪ್ರೀತಿ ಯಾವಾಗಲೂ ಕಾವ್ಯವೇ. ನನ್ನ ಅರಿವಿನ ಒಳಗೋ, ಅರಿವಿನ ಆಚೆಗೋ ನನಗೆ ದಕ್ಕುವುದೆಲ್ಲ(ರೂಪಕ) ಮೆಟಫರುಗಳ ಮೂಲಕವೇ. ಇದೇ ಮುಂದೆ ಕವನವೋ ನಾಟಕವೋ ಪ್ರಬಂಧವೋ ಕತೆಯೋ ಅಥವಾ ಬರೀ ಮಾತೋ ಆಗಿ ಒಂದು ರೂಪ ತಾಳುತ್ತದೆ. ಈ ಸಂಕಲನದ ‘ಆವಳಿ ಜವಳಿ’ ಬಗ್ಗೆ -ಅವರು ಎದುರಿಗಿದ್ದಾಗಲೇ- ಬರೆದ ಈ ಕವನ ಆಗಿನ ‘ಚಂಪಾಕಾಲಂ’ ದಲ್ಲಿ ಅಡಕವಾಗಿದ್ದರೂ ಯಾಕೋ ಯಾವ ಸಂಕಲನದಲ್ಲೂ ಸೇರಿಕೊಂಡಿರಲಿಲ್ಲ’ ಎಂಬುದಾಗಿ ಹೇಳಿಕೊಂಡಿದ್ದಾರೆ.
ಕೃತಿಯ ಪರಿವಿಡಿಯಲ್ಲಿ ಕಿಂಡಿಯ ಕತೆ, ಉಪವಾಸ, ಕಾಟ, ಪುರಾಣ- ಇತಿಹಾಸ, ಭಗವಂತ, ಚುಂಬನ, ಕುಡುಕನ ಮನೆ, ಬಸ್ಸಿನ ಚಲುವೆ, ಕತೆಯ ಕತೆ, ಬುಡಕ್ಕೆ, ಮಾ ನಿಷಾದ, ಅಂದು ಅಲ್ಲಿ ಇಂದು ಇಲ್ಲಿ, ಕಂಕ ವೃತ್ತಾಂತ, ಪುರಾವೆ ಬೇಕೆ?, ಹೆಣ್ಣು, ಯಾವ ಕೃಷ್ಣ, ಕವಿತೆ-ಕದಳಿ, ಸರಿ-ತಪ್ಪು, ಮತ್ತೊಂದು ಎಲೆ, ಮುಪ್ಪು, ಅನಂತವಾಣಿ, ಪಾಪಯ ಪುರಾಣ, ಮತ್ತೊಂದು ಎಲೆ, ತನಕ, ಮತ್ತೊಂದು ಸಭೆಗೆ, ಓ…ಶೋ, ಅಭಾವ, ಎದ್ದೇಳು ಕನ್ನಡಿಗ, ತನಕ, ಅಹಂ ಬ್ರಹ್ಮಾಸ್ಮಿ, ಕೆ, ಸೆಳೆತ, ಆಳ, ಚಿತಾಭಸ್ಮ, ಯಾವ ಸಾವಿನ ಪ್ರಶ್ನೆ, ನಾಯಿ ಪಾಡು, ಕಂಪ, ಕುವೆಂಪು ಉವಾಚ ಸೇರಿದಂತೆ ಇನ್ನೂ ಅನೇಕ ಶೀರ್ಷಿಕೆಗಳ ಕವಿತೆಗಳಿವೆ.
'ಚಂಪಾ' ಎಂದೇ ಕನ್ನಡ ಸಾಹಿತ್ಯಲೋಕದಲ್ಲಿ ಚಿರಪರಿಚಿತ ಇರುವ ಚಂದ್ರಶೇಖರ ಪಾಟೀಲರು ಕವಿ-ನಾಟಕಕಾರ. ಕನ್ನಡನಾಡಿನ ಸಾಹಿತ್ಯಕ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಚಳುವಳಿಗಳ ಮುಂಚೂಣಿಯಲ್ಲಿ ಕೇಳಿಬರುವ ಹೆಸರು ’ಚಂಪಾ’ ಅವರದು. ಹಾವೇರಿ ಜಿಲ್ಲೆಯ ಹತ್ತೀಮತ್ತೂರಿನಲ್ಲಿ ಜನಿಸಿದರು (1939). ತಂದೆ ಬಸವರಾಜ ಹಿರೇಗೌಡ ಪಾಟೀಲ, ತಾಯಿ ಮುರಿಗೆವ್ವ. ಹತ್ತೀಮುತ್ತೂರಿನಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲಾ ವಿದ್ಯಾಭ್ಯಾಸ, ಹಾವೇರಿಯಲ್ಲಿ ಹೈಸ್ಕೂಲು ಶಿಕ್ಷಣ ಪಡೆದ ಅವರು ಹೆಚ್ಚಿನ ಅಧ್ಯಯನಕ್ಕಾಗಿ ಧಾರವಾಡದ ಕರ್ನಾಟಕ ಕಾಲೇಜು ಸೇರಿದರು. ಕಾಲೇಜಿನಲ್ಲಿದ್ದ ದಿನಗಳಲ್ಲಿಯೇ 'ಚಂಪಾ' ಅವರ ಅಕ್ಷರಗಳಿಗೆ ಕಾವ್ಯದ ಗರಿ ಮೂಡಿದವು. ಆಗ ಖ್ಯಾತ ಕವಿ ಗೋಕಾಕರು ಕರ್ನಾಟಕ ಕಾಲೇಜಿನಲ್ಲಿದ್ದರು. ’ನಮಗೆಲ್ಲ ...
READ MORE