ಮರಾಠಿ ವಾಙ್ಮಯ ವಿಹಾರ

Author : ರತ್ನಾಕರ ಶೆಟ್ಟಿ

Pages 161

₹ 200.00




Year of Publication: 2011
Published by: ಅಭಿಜಿತ್ ಪ್ರಕಾಶನ
Address: ಬೆಂಗಳೂರು

Synopsys

‘ಮರಾಠಿ ವಾಙ್ಮಯ ವಿಹಾರ’ ಕೃತಿಯು ರತ್ನಾಕರ ಶೆಟ್ಟಿ ಅವರ ಲೇಖನ ಸಂಕಲನವಾಗಿದೆ. ಪುಸ್ತಕದಲ್ಲಿ ಒಂದು ಸಾಹಿತ್ಯಕ ವೈಭವದ ದರ್ಶನವಿದೆ. ಜೀವಿತದ ಬಹುಕಾಲವನ್ನು ಮುಂಬಯಿಯಲ್ಲಿ ಕಳೆದ ಲೇಖಕರು ಅಲ್ಲಿನ ವಿದ್ಯಮಾನಗಳನ್ನೆಲ್ಲ ಹತ್ತಿರದಿಂದ ಬಲ್ಲವರು. ಪ್ರಸಿದ್ಧ ಸಾಹಿತಿಗಳ ಒಡನಾಟದಲ್ಲಿದ್ದವರು. ಅಲ್ಲದೆ ಮರಾಠಿಯ ಉತ್ತಮ ಸಾಹಿತ್ಯವನ್ನು ಓದಿಕೊಂಡವರು. ಇವರ ಆಯ್ಕೆಯ ವಿಷಯಗಳು ಬಹು ವಿಸ್ತಾರವಾಗಿದ್ದು ವಿವಿಧ ಮಾಹಿತಿಗಳಿಂದ ಈ ಕೃತಿಯು ತುಂಬಿದೆ.

About the Author

ರತ್ನಾಕರ ಶೆಟ್ಟಿ

ರತ್ನಾಕರ ಶೆಟ್ಟಿ ಅವರು ಸಾಹಿತ್ಯದಲ್ಲಿ ಅಪಾರ ಆಸಕ್ತಿಯನ್ನು ಹೊಂದಿದ್ದಾರೆ. ಮುಂಬಯಿಯಲ್ಲಿ ವಾಸ್ತವ್ಯವಿದ್ದಾರೆ. ಕೃತಿಗಳು: ಮರಾಠಿ ವಾಙ್ಮಯ ವಿಹಾರ ...

READ MORE

Reviews

(ಹೊಸತು, ಮಾರ್ಚ್ 2012, ಪುಸ್ತಕದ ಪರಿಚಯ)

ಮಹಾರಾಷ್ಟ್ರ - ಕರ್ನಾಟಕದ ಸಾಹಿತ್ಯ ಬಾಂಧವ್ಯವು ಇಂದು ನಿನ್ನೆಯದಲ್ಲ. ಮರಾಠಿ ಭಾಷೆಯ ಸಾಹಿತ್ಯ - ಸಂಸ್ಕೃತಿ - ರಂಗಭೂಮಿ, ಚಿತ್ರಕಲೆ ಎಲ್ಲವೂ ನಮಗೆ ಅಪರೂಪವೇನಲ್ಲ. ಪರಸ್ಪರ ಸಾಹಿತ್ಯದ ಅನುವಾದಗಳು ವಿಫುಲವಾಗಿ ಬಂದಿವೆ. ಇಂಥ ಸಾಹಿತ್ಯ ವಿನಿಮಯಕ್ಕೆ ಕೆಲವು ವರ್ಷಗಳ ಹಿಂದೆ ಮುಂಬಯಿ ಮಹಾನಗರಿಗೆ ವಲಸೆಹೋದ ಕರ್ನಾಟಕದ - ಮುಖ್ಯವಾಗಿ ಕರಾವಳಿ ಪ್ರದೇಶದ – ಕನ್ನಡಿಗರು ಸ್ವಲ್ಪ ಮಟ್ಟಿಗೆ ಕಾರಣವೆನ್ನಬಹುದು. ಶರಣಕುಮಾರ ಲಿಂಬಾಳೆ, ಲಕ್ಷ್ಮಣ ಗಾಯಕವಾಡ್‌, ರೂಪ ನಾರಾಯಣ ಸೋನಕರ, ಬೇಬಿತಾಯಿ ಕಾಂಬಳ ಇವರ ಆತ್ಮಕಥೆಗಳನ್ನು ನವಕರ್ನಾಟಕ ಕನ್ನಡದಲ್ಲಿ ಅನುವಾದಿಸಿ ಪ್ರಕಟಿಸಿದೆ. ಮರಾಠಿಯ ಕೆಲವು ಪ್ರಸಿದ್ಧರ ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದ ಶ್ರೀ ರತ್ನಾಕರ ಶೆಟ್ಟಿಯವರು ಮಹಾರಾಷ್ಟ್ರದ ಕೆಲವು ಲೇಖಕರನ್ನೂ ಕೃತಿಗಳನ್ನೂ ಪರಿಚಯಿಸುತ್ತೆ ಈ ಪುಸ್ತಕದಲ್ಲಿ ಒಂದು ಸಾಹಿತ್ಯಕ ವೈಭವದ ದರ್ಶನ ಮಾಡಿಸುತ್ತಾರೆ. ಜೀವಿತದ ಬಹುಕಾಲವನ್ನು ಮುಂಬಯಿಯಲ್ಲಿ ಕಳೆದ ಲೇಖಕರು ಅಲ್ಲಿನ ವಿದ್ಯಮಾನಗಳನ್ನೆಲ್ಲ ಹತ್ತಿರದಿಂದ ಬಲ್ಲವರು. ಪ್ರಸಿದ್ಧ ಸಾಹಿತಿಗಳ ಒಡನಾಟದಲ್ಲಿದ್ದವರು. ಅಲ್ಲದೆ ಮರಾಠಿಯ ಉತ್ತಮ ಸಾಹಿತ್ಯವನ್ನು ಓದಿಕೊಂಡವರು. ಇವರ ಆಯ್ಕೆಯ ವಿಷಯಗಳು ಬಹು ವಿಸ್ತಾರವಾಗಿದ್ದು ವಿವಿಧ ಮಾಹಿತಿಗಳಿಂದ ತುಂಬಿವೆ.

Related Books