ಡಾ. ಕೆ. ಶ್ರೀಪತಿ ಹಳಗುಂದರವರ 12 ಲೇಖನಗಳ ಸಂಗ್ರಹ “ಮಣ್ಣು ಮತ್ತು ಮನಸ್ಸು' ಕೃತಿ. ಈ ಹಿಂದೆ ಬೇರೆ ಬೇರೆ ಕಡೆಗಳಲ್ಲಿ ಪ್ರಕಟವಾದ ಲೇಖನಗಳನ್ನ ಲೇಖಕರು ಸಂಗ್ರಹಿಸಿ ಒಟ್ಟಿಗೆ ನೀಡುವ ಒಂದು ಯತ್ನವನ್ನು ಇಲ್ಲಿ ಮಾಡಿದ್ದಾರೆ. ಈ ಲೇಖನಗಳನ್ನು ಅಧ್ಯಯನದ ದೃಷ್ಟಿಯಿಂದ ಕೆಲ ವಿಭಾಗಗಳನ್ನಾಗಿ ಮಾಡಿಕೊಳ್ಳುವುದು ಸೂಕ್ತ. ಪ್ರಾಧ್ಯಾಪಕರಾಗಿರುವ ಲೇಖಕರು ಶಿಕ್ಷಣ, ವಿದ್ಯಾರ್ಥಿಗಳ ಕುರಿತಂತೆ ಸುಮಾರು ಆರು ಲೇಖನಗಳನ್ನು ಬರೆದಿದ್ದಾರೆ. ವೇಶ್ಯೆಯರ ಕುರಿತು ಎರಡು ಲೇಖನಗಳಿವೆ, ಧರ್ಮ, ಸಂಸ್ಕೃತಿಗಳ ಕುರಿತು ಎರಡು ಲೇಖನಗಳಿವೆ. ಮುಳುಗಡೆಯ ಕುರಿತು ಒಂದು ಲೇಖನ, ಹಾಗೂ ಲೇಖಕ ಅಜ್ಜಂಪುರ ಸೂರಿಯವರ ಸಾಹಿತ್ಯದ ಕುರಿತು, ಮಣ್ಣು ಮತ್ತು ಮನಸ್ಸಿನ ಕುರಿತು ಒಂದೊಂದು ಲೇಖನವನ್ನು ಬರೆದಿದ್ದಾರೆ. ಮನುಷ್ಯನಿಗೂ ಮಣ್ಣಿಗೂ ಒಂದು ಸಂಬಂಧ ಇರುವುದನ್ನು ನಮ್ಮ ದಾರ್ಶನಿಕರು, ಸಂತರು, ವಿಜ್ಞಾನಿಗಳು ಬಹಳ ಹಿಂದಿನಿಂದಲೂ ಧೃಡಪಡಿಸುತ್ತ ಬಂದಿದ್ದಾರೆ. ಮಣ್ಣನ್ನು ಬಿಟ್ಟು ಮನುಷ್ಯ ಬದುಕಲಾರ ಅನ್ನುವುದು ಎಲ್ಲರ ಅಭಿಪ್ರಾಯ ಕೂಡ. ಒಂದು ಕಾಲದಲ್ಲಿ ಮನುಷ್ಯ ಅನಿಸಿಕೊಳ್ಳಲು ಅವನಿಗೊಂದು ಮನಸ್ಸು ಇರುವುದೇ ಕಾರಣ ಎಂದು ಕೂಡ ಹೇಳಲಾಗಿದೆ. ಮನುಷ್ಯ ಮಣ್ಣನ್ನೇ ನಂಬಿಕೊಂಡು ಬದುಕಿದ್ದ ಆದರೆ ಇಂದು ಈ ಮಣ್ಣು ಅವನಿಗೆ ಬೇಡವಾಗಿದೆ. ಈ ಕಾಲಸ್ಥಿತಿಯ ಕುರಿತು ಇಲ್ಲಿನ ಲೇಖನಗಳು ಬೆಳಕು ಚೆಲ್ಲುತ್ತವೆ.
ಡಾ. ಶ್ರೀಪತಿ ಹಳಗುಂದ ಕೆ. ಅವರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪಳಗುಂದದವರು. ಎಂ.ಎ. ಪಿಎಚ್.ಡಿ. ಪದವೀಧರಾಗಿರುವ ಅವರು ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾವ್ಯಗಂಗೆ (ಕಾವ್ಯ), ಕಾರಂತರ ಕಾದಂಬರಿಗಳಲ್ಲಿ ಕಲಾವಂತೆಯರು (ವಿಮರ್ಶೆ) ಪ್ರಕಟಿತ ಕೃತಿಗಳು. ಕನ್ನಡ ಕಾದಂಬರಿಗಳಲ್ಲಿ ವೇಶ್ಯಾ ಜೀವನ (ಪಿಎಚ್.ಡಿ. ಮಹಾಪ್ರಬಂಧ). ಅವರಿಗೆ ಪಂಡಿತ ಪುಟ್ಟರಾಜ ಸಾಹಿತ್ಯ ಪುರಸ್ಕಾರ ಸಂದಿದೆ. ...
READ MORE