ಮಳೆಯೇ ಮಂಟಪ

Author : ಎಚ್.ಎಸ್. ಶಿವಪ್ರಕಾಶ್

Pages 104

₹ 50.00




Year of Publication: 2002
Published by: ಲೋಹಿಯ ಪ್ರಕಾಶನ
Address: ಕ್ಷಿತಿಜ, ಕಪ್ಪಗಲ್ಲು ರಸ್ತೆ, ಗಾಂಧಿನಗರ, ಬಳ್ಳಾರಿ-583103
Phone: 839225741

Synopsys

‘ಮಳೆಯೇ ಮಂಟಪ’ ಹೆಚ್‌.ಎಸ್‌.ಶಿವಪ್ರಕಾಶ್‌ ಅವರ ಕವಿತೆಗಳ ಸಂಗ್ರಹವಾಗಿದೆ. ಬದಲಾದ ಪರಿಸರಕ್ಕನುಗುಣವಾಗಿ ತನ್ನ ಹೆಜ್ಜೆ ಮೂಡಿಸುತ್ತ ಓದುಗನಲ್ಲಿ ಪ್ರತಿಸ್ಪಂದನದ ಅಲೆಯನ್ನು ಮಾಡುವಲ್ಲಿ ಸಫಲವಾಗಿದೆ.

About the Author

ಎಚ್.ಎಸ್. ಶಿವಪ್ರಕಾಶ್
(15 June 1954)

ಕವಿ, ಸಾಹಿತಿ, ಲೇಖಕ ಎಚ್.ಎಸ್.ಶಿವಪ್ರಕಾಶ್ ಬೆಂಗಳೂರಿನಲ್ಲಿ 15-06-1954ರಂದು ಜನಿಸಿದರು. ತಂದೆ ಪ್ರಸಿದ್ಧ ಸಾಹಿತಿಗಳು ಮತ್ತು ಕನ್ನಡ ಪರಿಷತ್ತಿನ ಅಧ್ಯಕ್ಷರು ಆಗಿದ್ದ ಶಿವಮೂರ್ತಿ ಶಾಸ್ತ್ರಿಗಳು.  ನವದೆಹಲಿಯ ಜೆ.ಎನ್.ಯು ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಆರ್ಟ್ಸ್ ಅಂಡ್ ಈಸ್ತೆಟಿಕ್ಸ್ನಲ್ಲಿ ಪ್ರೋಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾವ್ಯ, ನಾಟಕ, ಅನುವಾದ ಹೀಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಶಿವಪ್ರಕಾಶರು ತಮ್ಮ ನಾಟಕ ಮಹಾಚೈತ್ರೆ ರಚನೆಯಿಂದಾಗಿ ಸಾರ್ವಜನಿಕ ವಿರೋಧ ಎದುರಿಸುವಂತಾಯಿತು. ಅವರ ಪ್ರಮುಖ ನಾಟಕಗಳು- ಮಹಾಚೈತ್ರ, ಸುಲ್ತಾನ್ ಟಿಪ್ಪು, ಮಂಟೇಸ್ವಾಮಿ, ಮಾದರಿ ಮಾದಯ್ಯ, ಮದುವೆ ಹೆಣ್ಣು. ಶಿವಪ್ರಕಾಶರ ಕವನ ಸಂಕಲನಗಳು- ಮಳೆ ಬಿದ್ದ ...

READ MORE

Reviews

ಹೊಸತು- 2003- ಮಾರ್ಚ್

ಏಳನೆಯ ಮುದ್ರಣವನ್ನು ಕಂಡ ವಿವಾದಿತ ಪಠ್ಯಪುಸ್ತಕ 'ಮಹಾಚೈತ್ರ'' ಕೃತಿಯ ಲೇಖಕ ಹೆಚ್. ಎಸ್. ಶಿವಪ್ರಕಾಶ್ ಅವರ ಕವಿತೆಗಳ ಸಂಗ್ರಹವಿದು. ಬದಲಾದ ಪರಿಸರಕ್ಕನುಗುಣವಾಗಿ ತನ್ನ ಹೆಜ್ಜೆ ಮೂಡಿಸುತ್ತ ಬ೦ದ ಇಲ್ಲಿನ ಕಾವ್ಯರಚನೆಯು ಸಹೃದಯ ಓದುಗನಲ್ಲಿ ಪ್ರತಿಸ್ಪಂದನದ ಅಲೆಯನ್ನು ಉಂಟುಮಾಡುವಲ್ಲಿ ಸಫಲವಾಗಿದೆ. ನಮ್ಮ ಪ್ರಜ್ಞೆಯ ಒಂದು ಭಾಗವೇ ಸುತ್ತಲಿನ ಪರಿಸರದೊಂದಿಗೆ ಭಾಷೆಯ ಮೂಲಕ ಸಂವಾದಿಯಾಗಿರುವ ವಿಶಿಷ್ಟ ಗುಣವನ್ನಿಲ್ಲಿ ಕಾಣಬಹುದು.

Related Books