ಶ್ರೀ.ವಿ ಚಿಕ್ಕಯ್ಯ”ನವರು ಕನ್ನಡ ಕನ್ನಡ ಕಾವ್ಯಲೋಕದಲ್ಲಿ “ವೀ ಚೀ “ ಎಂದೇ ಪ್ರಿಸದ್ಧಿ ಪಡೆದವರು. ಗ್ರಾಮೀಣ ಬದುಕನ್ನು ಅನುಭವಿಸಿದ ಇವರು ಅಪ್ಪಟ ಗ್ರಾಮೀಣ ಕವಿ. ವೀಚಿಯವರ ಪ್ರಮುಖ ಕವಿತೆಗಳಾದ ನೆಲದ ಮೇಲೆ ಮನುಚಷ್ಯನ ದುಃಖ , ದುಮ್ಮಾನ, ಆಶೋತ್ತರ, ಆಶೆ-ನಿರಾಶೆ ಗಳು ಮತ್ತು ಅವುಗಳ ಅಂತರಂಗದಿಂದಲೇ ಹೊರಹೊಮ್ಮುವ ಮಾನವೀಯ ಮೂಲದ ಜೀವ ಪರ ಅಂತಃಕರಣಗಳು ’ಆನಂದಮೂರ್ತಿಯವರ ಈ ಕೃತಿಯೂ ಒಳಗೊಂಡಿದೆ. ವೀಚಿಯವರ ಕವಿತೆಗಳಲ್ಲಿ ವ್ಯಕ್ತವಾಗುವ ಜೀವಪರವಾದ ನಿಲುವುಗಳು, ಅವರ ಜೀವಪರ ಮಾನವೀಯತೆ ತುಂಬಿದ ಅವರ ಅಂತಃಕರಣದ ನಿಲುವುಗಳು, ಮಾನವೀಯತೆಯ ಆಶೋತ್ತರಗಳ ಬಗ್ಗೆ ಈ ಪುಸ್ತಕವು ವಿವರಗಳನ್ನು ಒದಗಿಸುತ್ತದೆ.
ಡಾ. ಜಿ.ವಿ.ಆನಂದಮೂರ್ತಿ ಅವರು ಮೂಲತಃ ತುಮಕೂರು ಜಿಲ್ಲೆಯ ಬೆಳ್ಳಾವೆ ಮಜರೆ ಗ್ರಾಮದ ತಿಗಳರ ಗೊಲ್ಲಹಳ್ಳಿಯವರು. ತುಮಕೂರು ಮತ್ತು ಬೆಂಗಳೂರಿನಲ್ಲಿ ಪದವಿವರೆಗೆ ಶಿಕ್ಷಣ ಪಡೆದು ನಂತರ ಮೈಸೂರು ವಿಶ್ವವಿದ್ಯಾನಿಲಯದಿಂದ (2005) ರಲ್ಲಿ ಪಿಎಚ್.ಡಿ ಪಡೆದರು. ಸಾಹಿತಿ-ಲೇಖಕರಾಗಿರುವ ಅವರು (1998-2001)ರಲ್ಲಿ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿದ್ದರು. ಕೃತಿಗಳು: ಬುದ್ದತೋರಿದ ದಾರಿ (ಬುದ್ಧದೇವನ ಜೀವತದ ವಿವರಗಳು), ನೀರಗಂಧ (ಕವನಸಂಕಲನ), ಹೊಳೆಸಾಲು (ಜನಪದ ಕಲಾವಿದರನ್ನು ಕುರಿತ ಬರಹ), ಜಾಲಾರ ಹೂವು (ಪ್ರಬಂಧ). ಶಾಂತವೇರಿ ಗೋಪಾಲಗೌಡ ನೆನಪಿನ ಸಂಪುಟ, ಗರಿಗೆದರಿದ ನವಿಲು (ಜನಪದ ಕಲಾವಿದರ ಆತ್ಮಕಥೆಗಳ ನಿರೂಪಣೆ), ಸಾಲ ಸಂಪಿಗೆ ನೆರಳು (ಎಳೆಯರಿಗಾಗಿ ಜಾನಪದ ಹಲವು ತೋಟದ ಹೂಗಳು -ಜನಪದ ತತ್ವಪದಗಳ ...
READ MORE