ಮಧ್ಯಕಾಲೀನ ಕರ್ನಾಟಕ (ಜಿ.ಎಸ್. ದೀಕ್ಷಿತ್ ಅವರ ಆಯ್ದ ಬರಹಗಳು)

Author : ಶ್ರೀನಿವಾಸ ಹಾವನೂರ

Pages 428

₹ 100.00




Year of Publication: 2008
Published by: ಪ್ರಸಾರಾಂಗ
Address: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮೈಸೂರು

Synopsys

ಡಾ. ಶ್ರೀನಿವಾಸ ಹಾವನೂರು ಅವರು ಸಂಪಾದಿಸಿರುವ ಕೃತಿ ‘ಮಧ್ಯಕಾಲೀನ ಕರ್ನಾಟಕ’ ಇದು ಜಿ.ಎಸ್. ದೀಕ್ಷಿತ್ ಅವರ ಆಯ್ದ ಬರಹಗಳ ಸಂಕಲನ. ಕೃತಿಯ ಕುರಿತು ಬರೆಯುತ್ತಾ ‘ಇತಿಹಾಸದ ವಿಷಯದಲ್ಲಿ ಉನ್ನತ ಮಟ್ಟದ ಪ್ರಾಧ್ಯಾಪಕರಾಗಿದ್ದ ಡಾ.ಜಿ.ಎಸ್. ದೀಕ್ಷಿತರು ಅನೇಕ ಮೌಲಿಕವಾದ ಲೇಖನ ಗ್ರಂಥಗಳನ್ನು ಬರೆದಿದ್ದಾರೆ. ತಮ್ಮ ಸಂಶೋಧನೆಯಲ್ಲಿ ಸ್ವೋಪಜ್ಞವಾದ ಹೊಸ ಅಂಶಗಳನ್ನು ಕಂಡು ಹಿಡಿದಿದ್ದಾರೆ. ಅಖಿಲ ಭಾರತ ಮಟ್ಟದಲ್ಲಿ ಇತಿಹಾಸ ಸಮ್ಮೇಳನಗಳ ಅಧ್ಯಕ್ಷತೆವಹಿಸಿದ್ದಾರೆ. ನೂರಾರು ವಿದ್ಯಾರ್ಥಿಗಳಿಗೆ ಇತಿಹಾಸದ ದೀಕ್ಷೆಯನ್ನೇ ಕೊಟ್ಟ ದೀಕ್ಷಿತರಿವರು. ತಮ್ಮ ಸುಧೀರ್ಘ ಕಾಲದ ಅಕೆಡೆಮಿಕ್ ಮಟ್ಟದಲ್ಲಿ ದೀಕ್ಷಿತರು ಬರೆದಿದ್ದ ಲೇಖನಗಳು ಬೇರೆ ಬೇರೆ ಪತ್ರಿಕೆಗಳಲ್ಲಿ ಚದರಿ ಹೋಗಿವೆ. ಹೆಚ್ಚಿನವು ಮಧ್ಯಕಾಲೀನ ಕರ್ನಾಟಕವನ್ನು ಸುಸ್ಪಷ್ಟವಾಗಿ ಚಿತ್ರಿಸುವಂತಿದೆ. ಅವನ್ನೆಲ್ಲಾ ಸಂಪಾದಿಸಿ ಹೊರತಂದಿದ್ದಾರೆ. ಇತಿಹಾಸದ ಅಭ್ಯಾಸಿಗಳಿಗೆ, ಆ ಕಾಲದ ಒಂದು ಪ್ರಮಾಣೀಭೂತವಾದ ದಾಖಲೆಯನ್ನು ನೀಡಿದಂತಾಗುವುದು- ಎಂಬುದಾಗಿ ಅವರ ಅಭಿಮಾನಿಗಳಲ್ಲಿ ಕೆಲವರು ಲೇಖನ ಸಂಗ್ರಹದಲ್ಲಿ ತೊಡಗಿಕೊಂಡರು. ಅವರಲ್ಲಿ ಎದ್ದು ಕಾಣುವ ಹೆಸರು ಮುಂಬಯಿಯ ಡಾ.ಬಿ.ಲೀಲಾ ಅವರದು. ಅವರಿಗೆ ಜೊತೆಗೂಡಿದವರು ಡಾ.ಜ್ಯೋತ್ಸ್ನಾ ಕಾಮತರು: ದೂರ ದೂರದಿಂದ ಲೇಖನ ದೊರಕಿಸಿ ತಂದಿದ್ದಾರೆ. ಇತಿಹಾಸ ಅಕಾಡೆಮಿಯ ಡಾ.ಎಚ್.ಎಸ್. ಗೋಪಾಲರಾಯರು ಈ ಗ್ರಂಥಕ್ಕಾಗಿ ದೀಕ್ಷಿತರ ಕಿರುಪರಿಚಯವನ್ನು ಬರೆದು ಕೊಟ್ಟಿದ್ದಾರೆ. ಮತ್ತು ಆಗಾಗ ಸಲಹೆ ನೀಡಿದ್ದಾರೆ. ಶ್ರೀ ಎಂ.ಬಿ. ಪಾಟೀಲರು ಈ ಸಂಬಂಧದಲ್ಲಿ ಏನು ಬೇಕಾದ ಕೆಲಸ ಕೊಡಿರಿ ಎಂಬ ಮನೋಭಾವದವರು. ಪ್ರಕೃತ ಅಚ್ಚಿನ ಕರಡನ್ನು ತಿದ್ದುವಲ್ಲಿ ನೆರವಾಗಿದ್ದಾರೆ. ಪ್ರೊ. ದೀಕ್ಷಿತರ ಸೊಗಸಾದ ಚಿತ್ರವನ್ನು ಒದಗಿಸಿದವರು ಛಾಯಾಚಿತ್ರಾನ್ವಿತ ಇತಿಹಾಸದಲ್ಲಿ (photo-history) ಪರಿಣಿತರಾದ ತಾರಾಬಾಯಿಯವರದು ಸದ್ದಿಲ್ಲದ ಸಹಾಯ. ಇದರ ಪ್ರಕಟನೆಯ ಕುರಿತು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡ.ಬಿ.ವಿ. ವಿವೇಕ ರೈ ಹಾಗೂ ಪ್ರಸಾರಾಂಗದ ನಿರ್ದೇಶಕರಾದ ಡಾ. ಡಿ.ಕೆ. ರಾಜೇಂದ್ರ ಅವರಲ್ಲಿ ಪ್ರಸ್ತಾಪ ಮಾಡಿದ್ದೇ ತಡ ಆ ಕೂಡಲೇ ಒಪ್ಪಿಕೊಂಡುಬಿಟ್ಟರು. ಅಂತೂ ಆರಂಭದಿಂದ ಪ್ರಕಟಣೆಯವರೆಗಿನ ಕೆಲಸ 3-4 ತಿಂಗಳಲ್ಲಿಯೇ ಮುಗಿದದ್ದು ಸಂತೋಷ ದಾಯಕವಾದದ್ದು, ಅದರಲ್ಲಿ ಮೇಲಿನವರು ಪಾಲುಗಾರರಾಗಿದ್ದಾರೆ. ಈ ಗ್ರಂಥದಲ್ಲಿ ದೀಕ್ಷಿತರ ಎಲ್ಲಾ ಕನ್ನಡ ಲೇಖನಗಳಿವೆ. ಇಂಗ್ಲಿಷ್ ನಲ್ಲಿ ಬರೆದ ನೂರರಷ್ಟು ಲೇಖನಗಳನ್ನು ಪ್ರತ್ಯೇಕ ಸಂಗ್ರಹವಾಗಿ ತರುವ ಯೋಜನೆಯಿದೆ ಎಂದು ತಿಳಿಸಿದ್ದಾರೆ.

About the Author

ಶ್ರೀನಿವಾಸ ಹಾವನೂರ

ಕನ್ನಡ ಸಾಹಿತ್ಯಸಂಶೋಧನೆ ಮಾಡಲು ಮೊತ್ತಮೊದಲು ಕಂಪ್ಯೂಟರ್‌ ಬಳಸಿದವರು ಡಾ. ಶ್ರೀನಿವಾಸ ಹಾವನೂರರು (1928-2010). ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರವಾದುದು, ವೈವಿಧ್ಯಮಯವಾದುದು. ಸಣ್ಣ ಕಥೆ, ಲಲಿತ ಪ್ರಬಂಧ, ಜೀವನ ಚರಿತ್ರೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸ  ವಿಮರ್ಶೆ ಮೊದಲಾದ ಪ್ರಕಾರಗಳಲ್ಲಿ 60ಕ್ಕೂ ಮಿಕ್ಕಿ ಕೃತಿಗಳನ್ನು ಹೊರತಂದರು.  ವಿದೇಶದಲ್ಲಿದ್ದ ಕನ್ನಡ ಸಾಹಿತ್ಯವನ್ನು ಮರಳಿ ತಾಯ್ನಾಡಿಗೆ ಕರೆತಂದರು. ಹೊಸಗನ್ನಡ ಅರುಣೋದಯದ ಸಾಹಿತ್ಯವನ್ನು ಮತ್ತೆ ತೆರೆದು ತೋರಿಸಿದರು, ಹಿಂದೆ ಮುಂಬಯಿಯ  ಟಾಟಾ ಮೂಲಭೂತ ವಿಜ್ಞಾನ ಸಂಸ್ಥೆಯ ಗ್ರಂಥಪಾಲಕರಾಗಿದ್ದರು. ಮುಂದೆ ಮಂಗಳೂರು ಮತ್ತು ಮುಂಬಯಿ ವಿ.ವಿ.ಯ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾದರು. ಆಮೇಲೆ ಪುಣೆಯಲ್ಲಿ ಮರಾಠಿ ಕನ್ನಡ ಸ್ನೇಹ ಸಂವರ್ಧನೆಯಲ್ಲಿ ಪಾತ್ರವಹಿಸಿದರು.. ಕೊನೆಗೆ ಕರ್ನಾಟಕ ಸರಕಾರದ ಸಮಗ್ರ ದಾಸ ಸಾಹಿತ್ಯ ಸಂಪಾದಕರಾಗಿ ೫೦ ಸಂಪುಟಗಳ ಪ್ರಕಟಣೆಯ ನೇತೃತ್ವ ವಹಿಸಿದರು. ಕನ್ನಡದ ನಾಡೋಜರೆಂದು ಹೆಸರಾದರು. ...

READ MORE

Related Books