ಮಡಿಲು

Author : ಯಲ್ಲಪ್ಪ ಎಂ. ಮರ್ಚೇಡ್

Pages 120

₹ 70.00




Year of Publication: 2013
Published by: ಪ್ರಗತಿಪರ ಪ್ರಕಾಶನ
Address: ಗ್ರಾಮಂತರ ಬುದ್ವಿ ಗಳ ಬಳಗ ಅರ್ಕೇಶ್ವರ ನಗರ , ಕೆ.ಆರ್.ನಗರ, ಮೈಸೂರು ಜಿಲ್ಲೆ -571602
Phone: 9449680583

Synopsys

ಕವಿ ಯಲ್ಲಪ್ಪ ಎಮ್ ಮರ್ಚೇಡ್ ಅವರ ಮೊದಲ ಕವನ ಸಂಕಲನ ’ಮಡಿಲು’. ತಮ್ಮೂರಿನ ಮರ್ಚೇಡ್ ಕೆರೆಯ ಪರಿಸರವನ್ನು ಕವಿತೆಯಲ್ಲಿ ದಾಖಲಿಸುವ ರೀತಿ ಗಮನಾರ್ಹ. ಈ ಕೃತಿಗೆ ಮುನ್ನುಡಿ ಬರೆದ ಸಾಹಿತಿ ಬನ್ನೂರು ಕೆ. ರಾಜು, ’ಮಾಜಿ ರಾಷ್ಟ್ರಪತಿ ಕಲಾಂ ಸಾಧನೆಯ 'ಕನಸುಗಾರ ಕಲಾಂ', ಜಾತೀಯತೆಯ ಬಗೆಗಿನ 'ಜ್ಞಾತಿ-ಖ್ಯಾತಿ', ಸಾಯಿಬಾಬಾರನ್ನು ಕುರಿತ 'ದೇವಮಾನವ' ಒಡಹುಟ್ಟಿದವಳ ಬಾಂಧವ್ಯದ 'ಮುದ್ದಿನ ತಂಗಿ', ಸರ್ಕಾರದ ಉದ್ಯೋಗ ಖಾತ್ರಿಯೋಜನೆಯಲ್ಲಿನ ಮೋಸದ ಬಗ್ಗೆ ಬೆಳಕು ಚೆಲ್ಲುವ ’ಉದ್ಯೋಗ ಖಾತ್ರಿ' ಮಡಿಲು ಶಿಕ್ಷಣದ ಮಹತ್ವ ಸಾರುವ 'ವಿದ್ಯಾರ್ಥಿಯಾಗೋಣ', ಉತ್ಸಾಹದಿಂದ ಸಾಹಿತ್ಯದ ತೇರು ಎಳೆಯುವ 'ಸಾಹಿತ್ಯ ಸಮ್ಮೇಳನ' ಚುನಾವಣೆಯಲ್ಲಿನ ಅಕ್ರಮಗಳ ಬಗ್ಗೆ ಕ್ಷ-ಕಿರಣ ಬೀರುವ 'ಮತ ನಿಮಿತ್ತಂ ಬಹುಕೃತ ವೇಶಂ' ಯುವಜನರು ಸದ್ಬಳಕೆಯಾಗಬೇಕೆನ್ನುವ 'ಯುವ ಶಕ್ತಿ' ಅಣ್ಣಾಹಜಾರೆ ಅವರ ಉಪವಾಸ ಸತ್ಯಾಗ್ರಹದ ಸತ್ಯ ಬಿಚ್ಚಿಡುವ “ಉಪವಾಸ ಮಾಡಿ ಗೆದ್ದವರು', ಕಾಮುಕ ಸ್ವಾಮೀಜಿಗಳನ್ನು ಅಕ್ಷರದಿಂದ ಬೆತ್ತಲೆಗೊಳಿಸುವ ’ನಮ್ಮ ಸ್ವಾಮಿಗಳು' ಮುಂತಾದ ಕವಿತೆಗಳು ಮನಸ್ಸಿನಲ್ಲಿ ಉಳಿಯುವಂತಿವೆ. ಅಂತೆಯೇ ಗಾಂಧಿ, ನೆಹರು, ಬುದ್ದ, ಅಂಬೇಡ್ಕರ್ ಮುಂತಾದ ಮಹನೀಯರು 'ಮಡಿಲು' ತುಂಬಿಕೊಂಡಿದ್ದಾರೆ.“ಯುಗ ಯುಗಗಳು ಕಳೆದರೂ ಹಿಂಸೆಗಳು ಜಗಮಗಿಸುತ್ತಿವೆ”, “ಕಟ್ಟೋಣ ನಾವು ಕಟ್ಟೋಣ ಭ್ರಷ್ಟ ಮುಕ್ತ ಭಾರತ ಕಟ್ಟೋಣ” ಇಂಥ ಅನೇಕ ಸಾಲುಗಳು ಸಂಕಲನದಲ್ಲಿ ಮೇಲೆದ್ದು ನಿಂತು ಸಮಾಜದ ಬಗ್ಗೆ ಕವಿಗಿರುವ ಕಾಳಜಿಯನ್ನು ಹೇಳಿವೆ” ಎಂದು ಪ್ರಶಂಸಿದ್ದಾರೆ.

About the Author

ಯಲ್ಲಪ್ಪ ಎಂ. ಮರ್ಚೇಡ್
(01 June 1988)

ಲೇಖಕ ಯಲ್ಲಪ್ಪ ಎಂ. ಮರ್ಚೇಡ್ ಅವರು ಮೂಲತಃ ರಾಯಚೂರು ತಾಲೂಕಿನ ಜಾಗೀರ್ ಮರ್ಚೇಡ್ ಗ್ರಾಮದವರು. ತಾಯಿ  ಹುಸೇನಮ್ಮ. ತಂದೆ ಅಂಜಿನಯ್ಯ ಮ್ಯಾತ್ರಿ. ಮರ್ಚೇಡ್ ಗ್ರಾಮದಲ್ಲೇ ಪ್ರಾಥಮಿಕ ಶಿಕ್ಷಣ, ಜೇಗರಕಲ್ ಗ್ರಾಮದಲ್ಲಿ ಪ್ರೌಢಶಿಕ್ಷಣ, ರಾಯಚೂರಿನಲ್ಲಿ ಪಿಯುಸಿ, ಕಲಬುರಗಿಯಲ್ಲಿ ಡಿ.ಇಡಿ, ರಾಯಚೂರಿನಲ್ಲಿ ಬಿ.ಎ. ಪದವೀದವಿ ಪಡೆದರು.  2012ರಲ್ಲಿ ಅರಣ್ಯ ಇಲಾಖೆಯಲ್ಲಿ ಉದ್ಯೋಗಕ್ಕೆ ಸೇರಿದರು. ಜೊತೆಗೆ, ಹಂಪಿಯ ಕನ್ನಡ ವಿಶ್ವವಿದ್ಯಾಲಯದ ದೂರ ಶಿಕ್ಷಣ ನಿರ್ದೇಶನಾಲಯದಿಂದ ಎಂ.ಎ. (2015) ಪೂರ್ಣಗೊಳಿಸಿದರು.   ಕೃತಿಗಳು: 2013ರಲ್ಲಿ ಅವರ ಚೊಚ್ಚಲ ಕವನ ಸಂಕಲನ- "ಮಡಿಲು", ಬಣ್ಣದ ಗುಬ್ಬಿ (ಶಿಶು ಗೀತೆಗಳ ಸಂಕಲನ), ’ವಚನ ಪ್ರಭೆ’ (ಆದುನಿಕ ವಚನಗಳ ಸಂಕಲನ),  ’ಕನಸೊಂದು ಕಣ್ಮರೆ’ (ಕವನ ಸಂಕಲನ) ಪ್ರಕಟವಾಗಿದೆ.  ...

READ MORE

Related Books