ಮಾಡಿದರೆ ಮಾಡಬೇಕು ಅಂಥ ಯುದ್ಧ

Author : ಒಕ್ಕುಂದ ಎಂ.ಡಿ.

Pages 56

₹ 65.00

Buy Now


Year of Publication: 2022
Published by: ನವಕರ್ನಾಟಕ ಪ್ರಕಾಶನ
Address: ಬೆಂಗಳೂರು
Phone: 0802216900

Synopsys

ವಿಭಿನ್ನವಾಗಿ ಬರೆಯುವ ಕವಿ ಎಂ.ಡಿ. ವಕ್ಕುಂದ ಅವರ ಯುದ್ಧವಿರೋಧಿ ಕವಿತೆಗಳ ಸಂಕಲನ ಇದು. ಯುದ್ಧವೆಂಬುದು ಹೇಗೆ ಮನಸ್ಸುಗಳನ್ನೆ ಕೊಂದುಹಾಕಬಲ್ಲದು ಎಂಬುದು, ಯುದ್ಧದ ಕರಾಳತೆಯ ಬಗ್ಗೆ ಅರಿವಿರುವ ಯಾರಿಗೂ ಅರ್ಥವಾಗುವಂಥದ್ದು. ಈ ಜಗತ್ತು ಯುದ್ಧಗಳಿಂದ ಮುಕ್ತವಾಗಬೇಕು ಮತ್ತು ಆ ಮೂಲಕ ಮನಸ್ಸುಗಳು ಭ್ರಷ್ಟವಾಗದ ವಾತಾವರಣವೊಂದು ಸಾಧ್ಯವಾಗಬೇಕು ಎಂಬ ಆಶಯ ವಕ್ಕುಂದ ಅವರ ಈ ಕವಿತೆಗಳ ಹಿಂದಿದೆ.

About the Author

ಒಕ್ಕುಂದ ಎಂ.ಡಿ.
(15 January 1967)

ಕವಿ- ಲೇಖಕ ಎಂ.ಡಿ.ಒಕ್ಕುಂದ ಅವರು ಕನ್ನಡ ಅಧ್ಯಾಪಕರಾಗಿದ್ದಾರೆ. ಅವರು ಧಾರವಾಡ ಜಿಲ್ಲೆ/ತಾಲೂಕಿನ ಅಮ್ಮಿನಭಾವಿಯಲ್ಲಿ 1967 ರ ಜೂನ್ 15 ರಂದು ಜನಿಸಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ ಗದಗ ಜಿಲ್ಲೆಯ ನರಗುಂದದ ಸರಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ. ರೆಕ್ಕೆ ಗರಿಗಳ ಬಿಚ್ಚಿ, ತುಳುಕು ಅವರ ಕವನ ಸಂಕಲನವಾಗಿದೆ.    ...

READ MORE

Related Books