ಡಿ.ಎಸ್.ನಾಗಭೂಷಣ ಅವರು ರಾಮ್ ಮನೋಹರ್ ಲೋಹಿಯಾ ಅವರ ಕುರಿತು ಬರೆದಿರುವ ಕೈಪಿಡಿ ‘ಲೋಹಿಯಾ ಕೈಪಿಡಿ’. ಲೋಹಿಯಾ ಜನ್ಮಶತಾಬ್ ಪ್ರತಿಷ್ಠಾನವು 2010ರ ಆಕ್ಟೋಬರ್ನಲ್ಲಿ ತನ್ನ ಉದ್ಘಾಟನೆಯ ಸಂದರ್ಭದಲ್ಲಿ ಪ್ರಕಟಿಸಿದ್ದ ಲೋಹಿಯಾ ಕೈಪಿಡಿ, ಜೆಪಿ ಕೈಪಿಡಿ ಮತ್ತು ಲೋಹಿಯಾ ವಾಣಿ ಎಂಬ ಈ ತ್ರಿವಳಿ ಕಿರುಪುಸ್ತಕಗಳು ಈಗ ಹೊಸ ಆಕಾರ ಮತ್ತು ರೂಪಗಳಲ್ಲಿ ಪರಿಷ್ಕೃತಗೊಂದು ಪ್ರಕಟವಾಗುತ್ತಿವೆ. ಕೃತಿಯು ಮೂರು ಮುದ್ರಣವನ್ನು ಕಂಡಿದೆ. ಲೋಹಿಯಾ ಕೈಪಿಡಿಯಲ್ಲಿ ಅಯೋಧ್ಯಾ ನಾಡಿನ ಲೋಹಿಯಾ, ಸಮಾಜವಾದ ಮತ್ತು ಕಾಂಗ್ರೆಸ್ ಟೋಪಿ!, ಸಮಾಜವಾದ ಎಂದರೆ ಏನು?, ಸಮಾಜವಾದಿ ತಾತ್ವಿಕತೆಯ ವಿಕಾಸ, ಭಾರತೀಯ ಸಮಾಜವಾದ ಮಾರ್ಕ್ಸ್ವಾದ ಮತ್ತು ಸಮಾಜವಾದ ಅನ್ವೇಷಕ ಪ್ರವೃತ್ತಿಯ ಅಲೆಮಾರಿ ಸೇರಿದಂತೆ ಅನೇಕ ಶೀರ್ಷಿಕೆಯ ಬರಹಗಳಿವೆ.
ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಡಿ.ಎಸ್.ನಾಗಭೂಷಣ ಅವರು 1952 ಫೆಬ್ರವರಿ 1 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲ್ಲೂಕಿನ ತಿಮ್ಮಸಂದ್ರದಲ್ಲಿ ಜನಿಸಿದರು. ದೆಹಲಿ ಆಕಾಶವಾಣಿಯಲ್ಲಿ ಕನ್ನಡ ವಾರ್ತಾ ವಾಚಕರಾಗಿ1975ರಿಂದ 1981ರವರೆ ಸೇವೆ ಸಲ್ಲಿಸಿದ್ದ ಅವರು ಆನಂತರದಲ್ಲಿ ಸಹಾಯಕ ನಿಲಯ ನಿರ್ದೇಶಕರಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. 2005ರಲ್ಲಿ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದರು. ಓದು, ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿರುವ ಅವರು ‘ಇಂದಿಗೆ ಬೇಕಾದ ಗಾಂಧಿ’, ‘ಲೋಹಿಯಾ ಜೊತೆಯಲ್ಲಿ’, ‘ರೂಪ ರೂಪಗಳನು ಧಾಟಿ’, ‘ಕುವೆಂಪು ಒಂದು ಪುನರನ್ವೇಷಣೆ’, ‘ಕುವೆಂಪು ಸಾಹಿತ್ಯ ದರ್ಶನ’, ‘ಜಯ ಪ್ರಕಾಶ ನಾರಾಯಣ ...
READ MORE