ಲೇಖಕ ನಂಜನಗೂಡು ಗಣೇಶ ಅವರ ಕವನ ಸಂಕಲನ- ‘ಕುಲುಮೆಗೆ ಬಿದ್ದ ಬದುಕು’. ಈ ಕೃತಿಗೆ ಬೆನ್ನುಡಿ ಬರೆದ ಹನೂರು ಚನ್ನಪ್ಪ ಅವರು ‘ಕನ್ನಡ ಸಾಹಿತ್ಯದ ನವೋದಯ, ನವ್ಯ ಸಾಹಿತ್ಯ ಪ್ರಕಾರಗಳ ಬೆಳವಣಿಗೆ ಒಂದು ತಾರ್ಕಿಕ ಅಂತ್ಯ ಕಂಡಿರಬಹುದೇನೋ! ಆದರೆ ದಲಿತ ಸಾಹಿತ್ಯ ಬಂಡಾಯ ಸಾಹಿತ್ಯ ಪ್ರಕಾರಗಳು ಮಾತ್ರ ಹೊಸ ಹೊಸ ಆಯಾಮಗಳೊ೦ದಿಗೆ ಇಂದಿಗೂ ತಮ್ಮ ನಿರಂತರತೆಯನ್ನು ಸಾಬೀತು ಪಡಿಸುತ್ತಿವೆ. ಅದಕ್ಕೆ ನಂಜನಗೂಡು ಗಣೇಶ ಅವರ “ಕುಲುಮೆಗೆ ಬಿದ್ದ ಬದುಕು” ಕವನ ಸಂಕಲನವೇ ಸಾಕ್ಷಿ ಎನಿಸುತ್ತದೆ.’ ಎಂದು ಪ್ರಶಂಸಿದ್ದಾರೆ.
ಲೇಖಕ ನಂಜನಗೂಡು ಪಿ.ಗಣೇಶ ಅವರು ಮೂಲತಃ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಶಂಕರಪುರ ಬಡಾವಣೆಯವರು. ತಾಯಿ ದೇವಮ್ಮ ತಂದೆ ಪುಟ್ಟಸ್ವಾಮಿ. ಶಂಕರಪುರ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ನಂಜನಗೂಡು ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದು , ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆ, ಸುತ್ತೂರು (ಬಿ.ಇಡಿ) ಹಾಗೂ ಚಾಮರಾಜನಗರದ ಜೆ.ಎಸ್.ಎಸ್ ಕಾಲೇಜಿನಲ್ಲಿ ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ಎಂ.ಎ ಪೂರೈಸಿದರು. ಪ್ರಸ್ತುತ ನಂಜನಗೂಡಿನ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಹಾಗೂ ತಾಮಡವಪುರದ ಮಹಾರಾಜ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ...
READ MORE