ನಿಧಾನವಾಗಿ ಸವಿಯನ್ನು ಸವಿದು ಅನುಭವಿಸುವ ಭಾವಗಳು ಇಲ್ಲಿ ಕವಿತೆಗಳಾಗಿವೆ. ಪ್ರಸ್ತುತ ಕಾಲದ ಎಲ್ಲ ತಲ್ಲಣಗಳಿಗೆ ಸ್ಪಂದಿಸುತ್ತಲೇ ತಮ್ಮ ಭಾವನೆಗಳನ್ನು ಕಾವ್ಯವಾಗಿಸುವ ಕಲೆ ಕವಿಗೆ ಸಿದ್ಧಿಸಿದ್ದು, ‘ಕೋವಿ ಮತ್ತು ಕೊಳಲು’ ಕವನ ಸಂಕಲನದಲ್ಲಿ ಕಾಣಬಹುದು.
ತುಮಕೂರು ಜಿಲ್ಲೆ ಹುಲಿಯೂರು ದುರ್ಗದ ಕೊಡವತ್ತಿಯಲ್ಲಿ ಜನಿಸಿದ ರಾಜೇಂದ್ರ ಪ್ರಸಾದ್ ಪ್ರಸ್ತುತ ಮಂಡ್ಯದಲ್ಲಿ ನೆಲೆಸಿದ್ದಾರೆ. 1987 ಮಾರ್ಚ್ 19ರಂದು ಜನನ. ಎಂ.ಕಾಂ.ಪದವೀಧರರಾದ ಅವರು ಸ್ವಂತ ಉದ್ದಿಮೆಯೊಂದನ್ನು ನಡೆಸುತ್ತಿದ್ದಾರೆ. ಕಾವ್ಯ, ತತ್ವಶಾಸ್ತ್ರ, ಕರ್ನಾಟಕ ಸಂಗೀತ, ಝೆನ್ ಪೇಟಿಂಗ್, ಬೌದ್ಧಮತ ಅಧ್ಯಯನ, ಪಾಕಶಾಸ್ತ್ರದಲ್ಲಿ ಅಪಾರ ಆಸಕ್ತಿ ಹೊಂದಿರುವ ಅವರು ಕಾವ್ಯದ ಬಗ್ಗೆ ವಿಶೇಷ ಪ್ರೀತಿಯುಳ್ಳವರು. ಭೂಮಿಗಂಧ - 2006, ಚಂದ್ರನೀರ ಹೂವು – 2013, ಒಂದಿಷ್ಟು ಪ್ರೀತಿಗೆ, ಕವಿತೆಗಳು – 2013, ಕೋವಿ ಮತ್ತು ಕೊಳಲು - 2014, ಲಾವೋನ ಕನಸು - 2016, ಬ್ರೆಕ್ಟ್ ಪರಿಣಾಮ - 2018, ನೀರೊಳಗೆ ಮಾಯದ ಜೋಳಿಗೆ - 2018 ಅವರ ಕವನ ಸಂಕಲನಗಳು. 'ಸಂಕಥನ' ಸಾಹಿತ್ಯ ಪತ್ರಿಕೆಯ ಸಂಪಾದಕರು ಮತ್ತು ಪ್ರಕಾಶರು ಆಗಿದ್ದಾರೆ. ಅವರ ...
READ MORE