ಕಿರಿಯ ಕಾಣಿಕೆ-ಕೃತಿಯು 1928ರಲ್ಲಿ ಮೊದಲು ಮುದ್ರಣಗೊಂಡಿತ್ತು. ಪ್ರಸ್ತುತ ಕೃತಿಯು ದ್ವಿತೀಯ ಆವೃತ್ತಿ. ಮೈಸೂರು ವಿದ್ಯಾಭ್ಯಾಸ ಇಲಾಖೆಯು ಈ ಕೃತಿಯನ್ನು ರಾಜ್ಯದ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿರಿಸಲು ಆದೇಶ ಹೊರಡಿಸಿತ್ತು. ಪ್ರೊ. ಟಿ.ಎಸ್. ವೆಂಕಣ್ಣಯ್ಯ ಸಂಪಾದಿಸಿದ್ದಾರೆ. ಮೈಸೂರು ಮಹಾರಾಜ ಕಾಲೇಜಿನ ಕರ್ನಾಟಕ ಸಂಘದ ವಿದ್ಯಾರ್ಥಿಗಳು ಬರೆದ ಕವನಗಳು, ಅನುವಾದಗಳು ಇಲ್ಲಿವೆ. ತೀ.ನಂ.ಶ್ರೀಕಂಠಯ್ಯ, ಕೆ.ವಿ.ಪುಟ್ಟಪ್ಪ, ಎ.ಕೆ.ಪುಟ್ಟರಾಮು, ಎಲ್. ಗುಂಡಪ್ಪ ಸೇರಿದಂತೆ ಒಟ್ಟು 30 ಕವನಗಳು ಇವೆ. ರಾಬರ್ಟ್ ಬ್ರೌನಿಂಗ್ ಅವರ ಕಾವ್ಯವನ್ನು ಕೆ.ವಿ.ಪುಟ್ಟಪ್ಪನವರು ಬೊಮ್ಮನಹಳ್ಳಿಯ ಕಿಂದರಿ ಜೋಗಿ’ ಶೀರ್ಷಿಕೆಯಡಿ ಅನುವಾದಿಸಿದ ಕವಿತೆಯೂ ಇಲ್ಲಿದೆ. ವರ್ಡ್ಸ ವರ್ತ, ಮ್ಯಾಥ್ಯೂ ಆರ್ನಾಲ್ಡ್, ವಾಲ್ಟರ್ ಸ್ಕಾಟ್ -ಈ ಮಹನೀಯರ ಆಂಗ್ಲ ಕವಿತೆಗಳ ಕನ್ನಡಾನುವಾದಗಳು ಇಲ್ಲಿವೆ.
ಲೇಖಕ, ಅನುವಾದಕ ಟಿ.ಎಸ್. ವೆಂಕಣ್ಣಯ್ಯನವರು (ಜನನ:01-10-1885) ಹುಟ್ಟಿದ್ದು ಚಿತ್ರದುರ್ಗ ಜಿಲ್ಲೆಯ ಚಳ್ಳೇಕೆರೆ ತಾಲ್ಲೂಕಿನ ತಳಕು ಗ್ರಾಮದಲ್ಲಿ. ಮೈಸೂರಿನಲ್ಲಿ ಕನ್ನಡ, ತೆಲುಗು ಸಾಹಿತ್ಯಾಧ್ಯಯನ ಮಾಡಿ, ಮದರಾಸು ವಿಶ್ವವಿದ್ಯಾಲಯದಿಂದ 1914ರಲ್ಲಿ ಎಂ.ಎ. ಪದವಿ ಪಡೆದರು. ಉದ್ಯೋಗಕ್ಕಾಗಿ ಸೇರಿದ್ದು ಧಾರವಾಡದ ಬಾಸೆಲ್ ಮಿಷನ್ ಹೈಸ್ಕೂಲಿನಲ್ಲಿ ಉಪಾಧ್ಯಾಯರಾಗಿ. ಬೆಂಗಳೂರು ಸೇಂಟ್ ಜೋಸೆಫ್ ಕಾಲೇಜು, ದೊಡ್ಡಬಳ್ಳಾಪುರ ಮುಂತಾದೆಡೆ ಶಿಕ್ಷಕ ವೃತ್ತಿ. ಬಹುಭಾಷಾ ವಿಶಾರದರು ಅವರು ಕನ್ನಡ, ತೆಲುಗು, ತಮಿಳು, ಸಂಸ್ಕೃತ, ಬಂಗಾಳಿ ಭಾಷೆಗಳಲ್ಲಿ ಪ್ರಾವೀಣ್ಯತೆ ಪಡೆದಿದ್ದಾರೆ. ’ಶ್ರೀ ರಾಮಕೃಷ್ಣ ಲೀಲಾ ಪ್ರಸಂಗದ ಭಾಗ, ರವೀಂದ್ರರ ಪ್ರಬಂಧಗಳನ್ನಾಧರಿಸಿ ಬರೆದ ‘ಪ್ರಾಚೀನ ಸಾಹಿತ್ಯ’ ಅನುವಾದ ಕೃತಿಗಳು. ’ಹರಿಹರನ ...
READ MORE