ಕಿರಣ ಕಾಂತಿ

Author : ಎ. ಸರಸಮ್ಮ

Pages 192

₹ 215.00




Year of Publication: 2022
Published by: ಶ್ರೇಯಸ್ ಬುಕ್ ಪಬ್ಲಿಕೇಷನ್ಸ್
Address: ಹೆಚ್.ಎಸ್ ಆರ್ ಲೇಔಟ್, ಬೆಂಗಳೂರು-560102

Synopsys

‘ಕಿರಣ ಕಾಂತಿ’ ಎ.ಸರಸಮ್ಮನವರ ಲೇಖನಗಳ ಗುಚ್ಛವಾಗಿದೆ. ಪ್ರಕಾಶಕರ ಮುನ್ನುಡಿ ಬರಹವಿದೆ. ನಮ್ಮ ಜೀವನ ಸುಖಮಯವಾಗಿ ಸಾಗಲು ಸಂಬಂಧಗಳ ಮೌಲ್ಯ ಅರಿತು ಬಾಳಲು ವ್ಯಕ್ತಿತ್ವ ವಿಕಸನ ಹೊಂದಿ ಬದುಕಿನ ಅರ್ಥವನ್ನು ತಿಳಿದು ಆತ್ಮಸ್ಥೆರ್ಯ ಹೊಂದಿ ವಿವೇಚನೆಯಿಂದ ಹೆಜ್ಜೆ ಇಟ್ಟಾಗ ಜೀವನದ ಅನುಭವಗಳಿಂದ ಹೊಸ ಪಾಠವನ್ನು ಕಲಿಯುತ್ತೇವೆ ಎಂಬ ಎಚ್ಚರಿಕೆಯನ್ನು ನೀಡುವಂತ ಹಲವು ವಿಷಯಗಳನ್ನು ಆಧರಿಸಿದ ಲೇಖನಗಳನ್ನು ರಚಿಸಿ ನೀತಿ ಮಾರ್ಗದಲ್ಲಿ ಸಾಗಲು ಭಗವಂತನ ಅನುಗ್ರಹವು ಇರಬೇಕೆಂದು ಭಕ್ತಿ ಸಿಂಚನ ಸೂಸುತ್ತ ದೇಶ, ಭಾಷೆ, ಗುರುವಿನ ಮಹತ್ವ, ಸಮಾನತೆ, ಇನ್ನೂ ಹಲವಾರು ವಿಷಯಗಳನ್ನಾಧರಿಸಿದ "ಕಿರಣ ಕಾಂತಿ” ಎಂಬ ಲೇಖನ ಮಾಲೆ ರಚಿಸಿರುವ ಕಾದಂಬರಿಗಾರ್ತಿಯಾದ ಶ್ರೀಮತಿ ಎ. ಸರಸಮ್ಮ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕಿಯಾಗಿ ಉತ್ತಮ ಸೇವೆ ಸಲ್ಲಿಸಿ ನಿವೃತ್ತಿಯನ್ನು ಹೊಂದಿರುತ್ತಾರೆ. ಇವರು ಸುಮಾರು ಮೂವತ್ತು ವರ್ಷಗಳಿಂದ ಸಾಹಿತ್ಯ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಕವನ ಸಂಕಲನ, ಕಥಾ ಸಂಕಲನ, ಚುಟುಕು ಸಂಕಲನ, ಸಾಮಾಜಿಕ ಕಾದಂಬರಿ, ಪತ್ತೇದಾರಿ ಕಾದಂಬರಿ, ಭಕ್ತಿ ಗೀತೆ, ಭಾವಗೀತೆ, ಹನಿಗವನ, ಶುಭನುಡಿ (ಸುಭಾಷಿತ), ನಾಟಕ ಹೀಗೆ ಹಲವು ಪ್ರಕಾರಗಳಲ್ಲಿ ವೈವಿಧ್ಯಮಯವಾದ ಮುವತ್ನಾಲಕ್ಕು ಕೃತಿಗಳನ್ನು ರಚಿಸಿ ಸಾಮಾಜಿಕವಾಗಿ ಅನನ್ಯ ಸೇವೆ ಸಲ್ಲಿಸುತ್ತ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ. -ಪ್ರಕಾಶಕರು

About the Author

ಎ. ಸರಸಮ್ಮ

ಲೇಖಕಿ ಎ. ಸರಸಮ್ಮ ಅವರು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಸಾಹಿತ್ಯ ಅವರ ವಿಶೇಷ ಆಸಕ್ತಿಯಾಗಿದೆ. ವೃತ್ತಿಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಪ್ರಸ್ತುತ ನಿವೃತ್ತರಾಗಿದ್ದರೆ.  ಕೃತಿಗಳು: ಮೋಸದ ಜಾಲ(ಕಾದಂಬರಿ), ಬಾಡಿಗೆ ಮನೆ, ಮನೆ ಮಗ, ನೀತಿ ಕಥೆಗಳು, ದನಗಳ ಚೆನ್ನಿ, ನಂದಾದೀಪ, ಜಾಲಿಯ ನೆರಳು, ಕಾವ್ಯ ಜ್ಯೋತಿ, ವಿಧಿ ನಿಯಮ, ಸನ್ಮಾರ್ಗ, ಹೆಣ್ಣಿನ ಬಾಳು, ಗುರಿ, ಪಾಪ ಪುಣ್ಯ, ಭಕ್ತಿಸಾರ, ಸ್ನೇಹ ಬಂಧನ, ಕಾಮನಬಿಲ್ಲು, ಮೋಸದ ಜಾಲ ...

READ MORE

Related Books