ಲೇಖಕ ಜೀವರಾಜ ಹ ಛತ್ರದ ಅವರ ಲೇಖನಗಳ ಸಂಗ್ರಹ ಕೃತಿ- ’ಖುಷಿ ತರಲಿ ಕೃಷಿ’. ಭಾರತದಲ್ಲಿ ಬಹಳಷ್ಟು ಜನರು ಕೃಷಿಯನ್ನು ನಂಬಿ ಬದುಕುತ್ತಾರೆ. ರೈತರು ಮಣ್ಣನ್ನು ನಂಬಿ ಬದುಕುತ್ತಿರುವವರು ಎನ್ನುವ ಹಲವಾರು ವಿಚಾರಗಳನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ಕೃತಿಗೆ ಬೆನ್ನುಡಿ ಬರೆದಿರುವ ಲೇಖಕ ವಿ. ಆಯ್ ಬೆನಗಿ ಅವರು, ‘ಪಾರಂಪರಿಕ ಕೃಷಿ ಮಾಡುವಾಗ ನಮ್ಮ ಪೂರ್ವಜರಿಂದ ಬಳಕೆಯಲ್ಲಿದ್ದ ಪದಗಳನ್ನು ವಸ್ತುಗಳನ್ನು ಪರಿಚಯಿಸುವುದರ ಜೊತೆಜೊತೆಗೆ ಭೂಮಿಯ ಮಣ್ಣಿನ ಮಲೀನತೆ, ನೀರಿನ ಮಲೀನತೆ, ಗಾಳಿಯ ಮಲೀನತೆಗಳ ಕುರಿತು ಬರೆದ ಲೇಕನಗಳು ಇಲ್ಲಿ ಮೂಡಿ ಬಂದಿವೆ. ಮತ್ತೊಂದು ಲೇಖನದಲ್ಲಿ, ಭೂಮಿಯ ಆರೋಗ್ಯದ ಕುರಿತು ಬರೆಯುತ್ತ ‘ಈ ಕೃತಿಯಲ್ಲಿ ಇರುವ ರಂಟೆಕುಂಟಿಗಳ ಕುರಿತು ಬರೆದ ಲೇಖನ ಓದಿದರೆ ಮುದೊಂದು ದಿನ ನೂರಾರು ವರ್ಷಗಳಾಚೆ ಮತ್ತೆ ಹಿಂದಿನಂತೆ ರಂಟಿಗಳನ್ನು, ಕುಂಟಿಗಳನ್ನು ತಯಾರಿಸಿಕೊಂಡು ಕೃಷಿ ಮಾಡಬಹುದಾಗಿದೆ ಎಂಬುದನ್ನು ಇಲ್ಲಿ ವಿಶ್ಲೇಷಿಸಿದ್ದಾರೆ. ಮತ್ತೊಂದು ಲೇಖನದಲ್ಲಿ, ಲೇಖಕರು ಭೂ ತಾಯಿಯ ಉಡಿ ತುಂಬುವ ಕೂರಿಗೆಯ ಕುರಿತು ಮನೋಜ್ಞವಾಗಿ ಚಿತ್ರಿಸಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ.
ಲೇಖಕ ಜೀವರಾಜ ಹನುಮಂತಪ್ಪ ಛತ್ರದ ಮೂಲತಃ ಹಾವೇರಿ ಜಿಲ್ಲೆಯ ಬ್ಯಾಡಗಿಯವರು. ಸರ್ಕಾರಿ ಪ್ರೌಢಶಾಲಾ ಶಿಕ್ಷಕರು. ಹಾವೇರಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷರು. ಪ್ರಸ್ತುತ ಬ್ಯಾಡಗಿ ತಾಲೂಕಿನ ಮಾಸನಗಿ ಸರಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೃತಿಗಳು: ಖುಷಿ ತರಲಿ ಕೃಷಿ, ಅಕ್ಕಡಿ ಕಾಳು( ವೈಚಾರಿಕ ಲೇಖನಗಳು), ಯಾಲಕ್ಕಿ ಹಾಲಕ್ಕಿ, ರಮ್ಯಗಾನ, ಅನುವಿನು, ದಾಂಪತ್ಯ ಗೀತೆಗಳು, ಜೀವಣ್ಣನ ಆಧುನಿಕ ತ್ರಿಪದಿಗಳು, ಅಸಲಿ ಮಳೆ, ಹನಿ ಹನಿ ಕಾವ್ಯಧಾರೆ, ಮಂಜೂರ್ಶಿ, ಸೂರು ಗುಡ್ಡ, ಉದಯ ರಶ್ಮಿ (ಕವನ ಸಂಕಲನಗಳು) ...
READ MORE