ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ, ದಬ್ಬಾಳಿಕೆ, ಅನ್ಯಾಯದ ವಿರುದ್ಧ ಯುವ ಕವಯತ್ರಿ ಕವಿತೆಗಳ ಮೂಲಕ ಧ್ವನಿ ಎತ್ತಿದ್ದಾರೆ. ಇಲ್ಲಿ ಮಹಿಳಾ ದೌರ್ಜನ್ಯ ಮಾತ್ರವಲ್ಲದೇ ಸಮಾದಲ್ಲಿ ನಡೆಯುತ್ತಿರುವ ಎಲ್ಲಾ ರೀತಿಯ ಅಸಮಾನತೆಯ ವಿರುದ್ಧ ಮಲ್ಲಮ್ಮ ಧ್ವನಿಯಾಗಿದ್ದಾರೆ.
ಈ ಪಾಪಿಗೆ ನಿನ್ನ ಸೀರೆ ಸೆರಗಿನ
ಪಾತಿವ್ರತ್ಯದ ಕಡೆಯ ನೂಲೆಂದು
ಮೈಗೆ ಸುತ್ತಿ ಕಣ್ತೆರೆದೊಮ್ಮ
ಅದ್ಹೆಂಗ ನೋಡಲಿ ಆ ಭೂತಕಾಲವನ್ನು....!
ಮಾನ ಹರಿದಿದೆ ತಾಯಿ ಹೊಲಿಗೆಯಾಕುವೆಯಾ..?
(ಹೊಲಿಗೆಯಾಕುವೆಯಾ?)
ಹೆಣ್ಣನ್ನು ಕೇವಲ ಲೈಂಗಿಕ ಸರಕಿನಂತೆ ನೋಡುವ ಲೋಕರೂಢಿಯನ್ನು ಬಿಡಿಬಿಡಿಯಾಗಿ ಬಿಡಿಸಿ ಹೇಳುವ ಈ ಕವಿತೆ, ತನ್ನ ಮೇಲಾದ ಈ ದಾಳಿಯಿಂದ ಛಿದ್ರವಾದ ಬದುಕನ್ನು ಪುನರ್ ರೂಪಿಸಿಕೊಳ್ಳುವ ಪ್ರಯತ್ನ ಈ ಕವಿತೆಯಲ್ಲಿದೆ.
ಯುವ ಬರಹಗಾರ್ತಿ, ಕವಯತ್ರಿ ಮಲ್ಲಮ್ಮ ಯಾಟಗಲ್ ಇವರು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಯಾಟಗಲ್ ಗ್ರಾಮದವರು. ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಬೆವರಿಗೆ ಹರಿದ ಬಟ್ಟೆ, ಕೆಂಪು ನಕ್ಷತ್ರದ ಕೆಳಗೆ (ಕವನ ಸಂಕಲನ), ಬೋದಿರಾಜನ ಬಯಲಾಟ, ಬೀದಿಯಲ್ಲಿ ಬಿದ್ದ ಚಂದ್ರಮರು (ನಾಟಕ) ಮುಂತಾದವು. ...
READ MORE