ಸ್ತ್ರೀವಾದಿ ಚಿಂತನೆಗಳಿಂದ ಪ್ರೇರಿತರಾಗಿರುವ ಕಾತ್ಯಾಯಿನಿಯವರ ’ಕಾಯಕಾವ್ಯ’ ಸ್ತ್ರೀ ಸಂವೇದನೆ ತನ್ನದೇ ಆದ ವಿಶಿಷ್ಟ ಧ್ವನಿ ಪಡೆದು ಹೊರಹೊಮ್ಮಿವೆ. ಕವಯತ್ರಿ ಹೆಣ್ಣಿನ ದಾಸ್ಯದ ವಿವಿಧ ಮುಖಗಳನ್ನು ಅನಾವರಣ ಮಾಡಿದ್ದಾರೆ. ತನ್ನ ಸುತ್ತಲಿನ ಜಗತ್ತಿನಲ್ಲಿ ಮಾತ್ರವಲ್ಲದೇ ತನ್ನ ಮನೆಯಲ್ಲಿಯೇ ತನ್ನ ಬಾಲ್ಯದಲ್ಲಿಯೇ ಅನುಭವಿಸಿದ ಅನುಭವ ಇಲ್ಲಿನ ಕವಿತೆಗಳಲ್ಲಿದೆ.
ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅವರ ಹುಟ್ಟೂರು ಉಡುಪಿಯ ಕಾಪು ಬಳಿಯ ಕರಂದಾಡಿ, ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ಮುಂಬೈ ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯದಿಂದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ “ವಿಶಾರದ' ಪದವಿ. ತುಳು ಕಾದಂಬರಿ 'ಕಬರ್ಗತ್ತಲೆ'ಗೆ ತುಳುಕೂಟ(ರಿ) ಉಡುಪಿಯ 'ಪಣಿಯಾಡಿ ಪ್ರಶಸ್ತಿ’, ಕನ್ನಡ ಕಾದಂಬರಿ 'ತೊಗಲುಗೊಂಬೆ'ಗೆ ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನ 'ಮಲ್ಲಿಕಾ' ಪ್ರಶಸ್ತಿ ಹಾಗೂ ಮೂಡಬಿದರೆಯ ವರ್ಧಮಾನ ಪ್ರತಿಷ್ಠಾನದ 'ಯುವ ವರ್ಧಮಾನ ಪ್ರಶಸ್ತಿ'; 'ಒಳದನಿಯ ಪಲುಕುಗಳು' ವಿಮರ್ಶಾಕೃತಿಗೆ ಕ.ಸಾ.ಪ. ಲೀಲಾವತಿ ಗುರುಸಿದ್ದಪ್ಪ ಸಿಂಧೂರ ದತ್ತಿ ಪ್ರಶಸ್ತಿ, ಡಾ. ದ. ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟಿನ ದ.ರಾ.ಬೇಂದ್ರೆ ...
READ MORE