’ಕವಿತೆ ಇಂದಿನ ತನಕ’ ಹಿರಿಯ ಕವಿ, ನಾಟಕಕಾರ, ವಿಮರ್ಶಕ ಎಚ್. ಎಸ್. ಶಿವಪ್ರಕಾಶ್ ಅವರ ಸಮಗ್ರ ಕವಿತೆಗಳ ಸಂಕಲನ. ಇಲ್ಲಿನ ಕವಿತೆಗಳು ತಮ್ಮ ನಾದ-ಲಯಗಳ ಹೊಸ ಹೊಳಪಿನಿಂದ ಹೊಸ ಯುಗದ, ಹೊಸ ಬಗೆಯನ್ನು ಅರಿಯಲು ಸಾಧ್ಯವಾಗಿಸುತ್ತಿವೆ. ಶಿವಲಿಂಗವೆಂಬ ತಿಳಿನೀರಿನಲ್ಲಿ, ನಾನೆಂಬ ಹಮ್ಮು ಸೋಕದೆ, ಕವಿಯೊಡನೆ ನಾವೂ, ನೀನಾಗಿ ಅನುವಾದವಾಗುವ, ಅನುಭಾವದ ನೆಲೆ, ಮುಂತಾದ ಕವಿತೆಗಳು ಸಂಕಲನದಲ್ಲಿದೆ. ಅರಿವಿಗೆ ಅಭಿಜ್ಞಾನವಾಗಿ ಇಲ್ಲಿನ ಕವಿತೆಗಳು ಮೌನದಲ್ಲೇ ಮಾತಾಗುತ್ತವೆ. ಇಲ್ಲಿನವು ವರ್ತಮಾನದ ತಲ್ಲಣಗಳಿಗೆ ತೀವ್ರವಾಗಿ ಸ್ಪಂದಿಸುತ್ತಲೇ ಪ್ರೀತಿ, ನೀತಿ, ಭಕ್ತಿ, ರಕ್ತಿ, ವಿರಕ್ತಿಗಳ ಸುಗಮ ಸಾಂಗತ್ಯದ ಕವಿತೆಗಳು.
ಕವಿ, ಸಾಹಿತಿ, ಲೇಖಕ ಎಚ್.ಎಸ್.ಶಿವಪ್ರಕಾಶ್ ಬೆಂಗಳೂರಿನಲ್ಲಿ 15-06-1954ರಂದು ಜನಿಸಿದರು. ತಂದೆ ಪ್ರಸಿದ್ಧ ಸಾಹಿತಿಗಳು ಮತ್ತು ಕನ್ನಡ ಪರಿಷತ್ತಿನ ಅಧ್ಯಕ್ಷರು ಆಗಿದ್ದ ಶಿವಮೂರ್ತಿ ಶಾಸ್ತ್ರಿಗಳು. ನವದೆಹಲಿಯ ಜೆ.ಎನ್.ಯು ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಆರ್ಟ್ಸ್ ಅಂಡ್ ಈಸ್ತೆಟಿಕ್ಸ್ನಲ್ಲಿ ಪ್ರೋಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾವ್ಯ, ನಾಟಕ, ಅನುವಾದ ಹೀಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಶಿವಪ್ರಕಾಶರು ತಮ್ಮ ನಾಟಕ ಮಹಾಚೈತ್ರೆ ರಚನೆಯಿಂದಾಗಿ ಸಾರ್ವಜನಿಕ ವಿರೋಧ ಎದುರಿಸುವಂತಾಯಿತು. ಅವರ ಪ್ರಮುಖ ನಾಟಕಗಳು- ಮಹಾಚೈತ್ರ, ಸುಲ್ತಾನ್ ಟಿಪ್ಪು, ಮಂಟೇಸ್ವಾಮಿ, ಮಾದರಿ ಮಾದಯ್ಯ, ಮದುವೆ ಹೆಣ್ಣು. ಶಿವಪ್ರಕಾಶರ ಕವನ ಸಂಕಲನಗಳು- ಮಳೆ ಬಿದ್ದ ...
READ MORE