ಯಂಶ ಬೇಂಗಿಲ ಅವರ 30ಕ್ಕೂ ಅಧಿಕ ಕವಿತೆಗಳು ಇಲ್ಲಿವೆ. ಉಮ್ಮ ಎಂದರೆ ತಾಯಿ. ಕವಿತೆಯನ್ನುವ ಈ ತಾಯಿಯ ಮಡಿಲಲ್ಲಿ ಈತ ಇನ್ನೂ ಮಗು. ಮಾನವೀಯ ಸಮಾಜವೊಂದನ್ನು ಕಟ್ಟುವ ನಿಟ್ಟಿನಲ್ಲಿ ಇಲ್ಲಿನ ಎಲ್ಲ ಕವಿತೆಗಳೂ ತುಡಿಯುತ್ತವೆ. ತನ್ನ ಬದುಕು, ಸಂಸ್ಕೃತಿ, ಕುಟುಂಬ, ಸಮಾಜದಿಂದ ರೂಪುಗೊಂಡ ಸಾಲುಗಳು ಇಲ್ಲಿವೆ. 'ಅಜ್ಜನ ಕಲ್ಲು' ಕವಿತೆಗಳು ತನ್ನ ಅಜ್ಜನ ಬದುಕನ್ನು ಹೇಳುತ್ತಾ, ಆತನಿಲ್ಲದ ವರ್ತಮಾನದ ಬರಡುತನವನ್ನು ಕವಿ ಹೇಳುತ್ತಾನೆ. 'ಬಾನಂಗಳದ ಹೊಸಿಲು ದಾಟಿಹಳು ಮಗಳು...' ಬಾನಿನಿಂದ ಭುವಿಗಿಳಿಯುವ ಮಳೆಯನ್ನು ರಮ್ಯವಾಗಿ ವರ್ಣಿಸುವ ಯಂಶ, ಮಗದೊಂದೆಡೆ ತನ್ನ ಕವನಗಳನ್ನು ಸೂರಿಲ್ಲದ ಮುದುಕಿಯ ಬದುಕಿನ ಚೂರುಗಳಿಗೆ ಹೋಲಿಸುತ್ತಾರೆ. ಬೆಳೆದವರ ಅಹಮಿಕೆಯನ್ನು ತೊಳೆವ ಇರುವೆಯನ್ನೂ ಬಿಡದೆ ಕವಿತೆ ಕಟ್ಟುವ ಕವಿ, 'ಉಮ್ಮ ಮತ್ತು ನಾನು' ಕವಿತೆಯಲ್ಲಿ ತಾಯಿಯ ಮುಗ್ಧತೆ ಮತ್ತು ಆಕೆಯ - ಅಗಾಧತೆಯನ್ನು ದಾಖಲಾಗಿದೆ.
ಮೂಲತಃ ಉಪ್ಪಿನಂಗಡಿಯವರಾದ ಯಂಶ ಬೇಂಗಿಲ ಅವರು ಸದ್ಯ ಬೆಂಗಳೂರು ನಿವಾಸಿಯಾಗಿದ್ದಾರೆ. ಕವಿತೆಯೆಂದರೆ ಉಮ್ಮಾ ಅವರ ಪ್ರಕಟಿತ ಕವನ ಸಂಕಲನ. ...
READ MORE